ಗೀತಾ ಶಿವರಾಜ್ ಕುಮಾರ್ ದಂಪತಿ 
ಸಿನಿಮಾ ಸುದ್ದಿ

'ಆನಂದ್' ನನ್ನ ಚೊಚ್ಚಲ ಚಿತ್ರಕ್ಕೆ ನನ್ನ ತಾಯಿ ಕೊಟ್ಟ ಟೈಟಲ್: ಶಿವರಾಜ್ ಕುಮಾರ್

ಇತ್ತೀಚಿನ ದಿನಗಳಲ್ಲಿ ಆ್ಯಕ್ಷನ್​​ಗಳಲ್ಲಿ ಅಬ್ಬರಿಸುತ್ತಿದ್ದ, ಕಣ್ಣಲ್ಲೇ ಹೆದರಿಸುತ್ತಿದ್ದ ಶಿವಣ್ಣ, ಪ್ರೀತಿಯ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸಿದ್ದಾರೆ

ನಟ ಶಿವರಾಜ್‌ಕುಮಾರ್ ಈಗ ಚಿಂತನಶೀಲವಾಗಿ ಬದಲಾಗುತ್ತಿದ್ದಾರೆ. ಅವರ ಮುಂದಿನ ಸಿನಿಮಾ 'ಎ ಫಾರ್ ಆನಂದ್' ಸಿನಿಮಾದಲ್ಲಿ ಆಕ್ಷನ್ ಸೀಕ್ವೆನ್ಸ್‌ ನಾಯಕನಿಗೆ ಬದಲಾಗಿ ಒಬ್ಬ ಶಿಕ್ಷಕನಾಗಿ ನಟಿಸಿದ್ದಾರೆ. ಶ್ರೀನಿ ನಿರ್ದೇಶನದ 'ಎ ಫಾರ್ ಆನಂದ್' ಪ್ರಬಲ ಸಾಮಾಜಿಕ ಉದ್ದೇಶವನ್ನು ಹೊಂದಿರುವ ಮಕ್ಕಳ ಸಿನಿಮಾ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಆ್ಯಕ್ಷನ್​​ಗಳಲ್ಲಿ ಅಬ್ಬರಿಸುತ್ತಿದ್ದ, ಕಣ್ಣಲ್ಲೇ ಹೆದರಿಸುತ್ತಿದ್ದ ಶಿವಣ್ಣ, ಪ್ರೀತಿಯ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸರ್ವ ತಯಾರಿ ನಡೆಸಿದ್ದಾರೆ. ಶಿವಣ್ಣನ ಹೋಮ್ ಬ್ಯಾನರ್ 'ಗೀತಾ ಪಿಕ್ಚರ್ಸ್' ವತಿಯಿಂದಲೇ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.

ಶುಕ್ರವಾರ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರತಂಡ ಮುಹೂರ್ತ ಸಮಾರಂಭ ಇಟ್ಟುಕೊಂಡಿತ್ತು. ನಿರ್ಮಾಪಕಿ ಗೀತಾ ಶಿವರಾಜ್​ಕುಮಾರ್‌ ಕ್ಲ್ಯಾಪ್‌ ಮಾಡಿ ತಮ್ಮ ಬಹುನಿರೀಕ್ಷಿತ ಚಿತ್ರಕ್ಕೆ ಚಾಲನೆ ಕೊಟ್ಟರು.

A for ಆನಂದ್' ಮಕ್ಕಳಿಗೆ ಸಂಬಂಧಿಸಿದ ಚಲನಚಿತ್ರವಾಗಿರುವ ಹಿನ್ನೆಲೆ, ಈವೆಂಟ್​ ಅನ್ನು ಬಹಳ ವಿಶೇಷವಾಗಿ ನಡೆಸಲಾಯಿತು. ಮಕ್ಕಳೇ ಸುದ್ದಿಗೋಷ್ಠಿಯ ಪ್ರಮುಖ ಆಕರ್ಷಣೆಯಾಗಿದ್ದರು. ಕಾರ್ಯಕ್ರಮದ ಸುಂದರ ಕ್ಷಣಗಳನ್ನೊಳಗೊಂಡ ವಿಡಿಯೋವನ್ನು ಚಿತ್ರದ ಹಿಂದಿರುವ ಗೀತಾ ಪಿಕ್ಚರ್ಸ್ ಹಂಚಿಕೊಂಡಿದೆ.

ಇದು ನನಗೆ ಕೇವಲ ಮತ್ತೊಂದು ಸಿನಿಮಾ ಅಲ್ಲ. ಇದು ಭಾವನಾತ್ಮಕವಾಗಿ ವಿಶೇಷವಾಗಿದೆ. ಶ್ರೀನಿ ಮತ್ತು ನಾನು ವರ್ಷಗಳಿಂದ ಈ ವಿಚಾರವನ್ನು ಚರ್ಚಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಸಿನಿಮಾದಲ್ಲಿ ಒಂದು ಪ್ರಮುಖ ಉದ್ದೇಶವಿದೆ. ಇಂದಿನ ಶಿಕ್ಷಣ ವ್ಯವಸ್ಥೆಯು ಮಕ್ಕಳ ಮೇಲೆ ಹೊರೆಯಾಗುತ್ತಿದೆ. ಎ ಫಾರ್ ಆನಂದ್ ಯಾವುದೇ ಒತ್ತಡವಿಲ್ಲದೆ ಅವರಿಗೆ ವಿಭಿನ್ನವಾಗಿ ಹೇಗೆ ಕಲಿಸುವುದು ಮತ್ತು ಮಾರ್ಗದರ್ಶನ ಮಾಡುವುದು ಎಂಬುದರ ಬಗ್ಗೆ ತಿಳಿಸಲಾಗಿದೆ ಎಂದು ಗೀತಾ ಶಿವರಾಜ್‌ಕುಮಾರ್ ಹೇಳಿದರು.

ಆನಂದ್ ಎಂಬುದು ನನ್ನ ಚೊಚ್ಚಲ ಚಿತ್ರಕ್ಕೆ ನನ್ನ ತಾಯಿ ನೀಡಿದ ಶೀರ್ಷಿಕೆ. ಈ ಆನಂದ್ ಇದನ್ನು ನೋಡುವ ಪ್ರತಿಯೊಬ್ಬ ಮಗುವಿಗೆ ಸಂತೋಷವನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಶಿವಣ್ಣ ಹೇಳಿದರು.

'A for ಆನಂದ್' ಚಿತ್ರವನ್ನು ಗೀತಾ ಪಿಕ್ಚರ್ಸ್​​ ನಿರ್ಮಾಣ ಮಾಡುತ್ತಿದೆ. ಶಿವರಾಜ್​​ಕುಮಾರ್​ ನಟನೆಯ ಇತ್ತೀಚಿನ 'ವೇದ', 'ಭೈರತಿ ರಣಗಲ್' ಕೂಡ ಚಲನಚಿತ್ರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣಗೊಂಡು ಸೂಪರ್ ಹಿಟ್ ಆಗಿವೆ. ಗೀತಾ ಪಿಕ್ಚರ್ಸ್​​ಗೆ 'A for ಆನಂದ್' ಮೂರನೇ ಚಿತ್ರ. ಶಿವರಾಜ್​ಕುಮಾರ್ ಹಾಗೂ ನಿರ್ದೇಶಕ ಶ್ರೀನಿ ಕಾಂಬಿನೇಷನ್​ನ 'ಘೋಸ್ಟ್' ಸಿನಿಮಾಕ್ಕೆ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಇಲ್ಲೂ ಇರಲಿದೆ. ಶಿವಮೊಗ್ಗ ಬಳಿಯ ಸಾಗರದ ಮಂಜಿನ ಪ್ರದೇಶಗಳಲ್ಲಿ ಅಕ್ಟೋಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT