ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಿಂದ ಈ ವಾರ ಚಂದ್ರಪ್ರಭ ಹೊರಗೆ ಬಂದಿದ್ದಾರೆ.
ಸಾಮಾನ್ಯವಾಗಿ ಭಾನುವಾರ ಸುದೀಪ್ ಅವರು ಎಲಿಮಿನೇಟ್ ಆಗುವವರ ಹೆಸರನ್ನು ಘೋಷಣೆ ಮಾಡುತ್ತಾರೆ. ಆದರೆ ಈ ವಾರ ಎಲಿಮಿನೇಷನ್ ಆಗುವ ಮುಂಚೆಯೇ ಚಂದ್ರಪ್ರಭ ಅವರು ಬಿಗ್ಬಾಸ್ ಮನೆ ಬಿಟ್ಟು ಹೊರ ಹೋಗಿದ್ದಾರೆ.
ಇದು ಮನೆ ಮಂದಿಗೆ ಶಾಕ್ ತಂದಿದೆ. ಮನೆ ಮಂದಿ ಮಾತ್ರವಲ್ಲ ಸ್ವತಃ ಸುದೀಪ್ ಅವರು ಸಹ ಚಂದ್ರಪ್ರಭ ಅವರ ವರ್ತನೆ ಕಂಡು ವಿಚಲಿತರಾದಂತಿದ್ದಾರೆ.
ಈ ಕುರಿತ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದ್ದು, ಧನುಷ್ ಗೌಡ ಊಸರವಳ್ಳಿ ಅಂತ ಬೋರ್ಡ್ ಕೊರಳಿಗೆ ಹಾಕಿದ್ದೇ ತಡ, ಕೆಲವು ಕ್ಷಣ ಕಣ್ಣೀರು ಹಾಕಿರೋ ಚಂದ್ರಪ್ರಭ ಅಲ್ಲಿಂದ ನಡೆದು ಹೊರಗೆ ಬಂದೇ ಬಿಟ್ಟಿದ್ದಾರೆ. ಇದನ್ನ ನೋಡಿದ ಸುದೀಪ್ ಕೂಡ ಶಾಕ್ ಆಗಿದ್ದಾರೆ.
ಗಿಲ್ಲಿ ನಟನನ್ನ ಹೊಡೆದ ರಿಷಾ ಗೌಡ ಡೊಡ್ಮನೆಯಿಂದ ಹೊರಗೆ ಬರ್ತಾರೆ ಅನ್ನೋದು ಪ್ರೇಕ್ಷಕರ ನಿರೀಕ್ಷೆ ಇತ್ತು. ಆದರೆ, ಸದ್ಯದ ಪ್ರೋಮೋ ನೋಡಿದ್ರೆ ಚಂದ್ರಪ್ರಭ ಹೊರಗೆ ಬಂದಿದ್ದಾರೆ.