ಪ್ರಿಯಾಂಕಾ ಮೋಹನ್ 
ಸಿನಿಮಾ ಸುದ್ದಿ

666 ಆಪರೇಷನ್ ಡ್ರೀಮ್ ಥಿಯೇಟರ್‌: ಮತ್ತೆ ಕನ್ನಡಕ್ಕೆ ಬಂದ ಪ್ರಿಯಾಂಕಾ ಮೋಹನ್

ಪೋಸ್ಟರ್ ಹಾಗೂ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಸೆಟ್, ಶೂಟಿಂಗ್ ವಿಚಾರವಾಗಿಯೂ ಸಿನಿಮಾ ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ.

ಹೇಮಂತ್ ಎಂ.ರಾವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ '666 ಆಪರೇಷನ್ ಡ್ರೀಮ್ ಥಿಯೇಟರ್'ಗೆ ದಕ್ಷಿಣ ಚಿತ್ರರಂಗದ ಜನಪ್ರಿಯ ತಾರೆಯ ಪ್ರವೇಶವಾಗಿದೆ.

ಫಸ್ಟ್‌ ಲುಕ್‌, ಪೋಸ್ಟರ್ಸ್, ಶೂಟಿಂಗ್​, ಮೇಕಿಂಗ್​ ವಿಡಿಯೋಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಹಾಗೂ ಡಾಲಿ ಧನಂಜಯ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರಕ್ಕೆ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್ ಎಂಟ್ರಿ ಕೊಟ್ಟಿದ್ದಾರೆ.

ಪೋಸ್ಟರ್ ಹಾಗೂ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಸೆಟ್, ಶೂಟಿಂಗ್ ವಿಚಾರವಾಗಿಯೂ ಸಿನಿಮಾ ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ.

ತಮ್ಮ ಅಭಿನಯದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಮೋಹನ್ ಈಗ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಭಾಗವಾಗಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್, ನಾನಿ, ಧನುಷ್ ಹಾಗೂ ಶಿವಕಾರ್ತಿಕೇಯನ್ ಜೊತೆ ಅಭಿನಯಿಸಿರುವ ಪ್ರಿಯಾಂಕಾ, ಹೇಮಂತ್ ಎಂ ರಾವ್ ನಿರ್ದೇಶನದ 80ರ ದಶಕದ ಬಾಂಡ್- ಸ್ಪೈ ಕಥೆ ಹೊಂದಿರುವ ಚಿತ್ರತಂಡ ಸೇರ್ಪಡೆಗೊಂಡಿದ್ದಾರೆ.

666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರತಂಡ ಸೇರ್ಪಡೆ ಬಗ್ಗೆ ಮಾತನಾಡಿರುವ ಅವರು, “ನಾನು ಡಾ. ಶಿವರಾಜ್ ಕುಮಾರ್ ಸರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ನ ಭಾಗವಾಗುವ ಮೂಲಕ ನನ್ನ ಕನಸು ನನಸಾಗಿದೆ.

ಪ್ರತಿಭಾನ್ವಿತ ಧನಂಜಯ ಅವರೊಂದಿಗೆ ಕೆಲಸ ಮಾಡುವುದು ಮತ್ತು ಇಂತಹ ಪಾತ್ರವರ್ಗದ ಭಾಗವಾಗುವುದು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಹೇಮಂತ್ ಎಂ ರಾವ್ ಅವರೊಂದಿಗೆ ಕೆಲಸ ಮಾಡುವ ಬಯಕೆ ವ್ಯಕ್ತಪಡಿಸಿದ್ದೆ, ಆದರೆ ಅದು ಇಷ್ಟು ಬೇಗ ಆಗುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಹೇಳಿದರು. ಈ ಹಿಂದೆ ಒಂದ್ ಕಥೆ ಹೇಳ್ಲಾ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಿದ್ದರು.

ಡಾ. ವೈಶಾಕ್ ಜೆ ಗೌಡ ಅವರ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಚಿತ್ರಕ್ಕೆ ಹೇಮಂತ್ ಎಂ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಡಿಸೆಂಬರ್ ಮೊದಲ ವಾರದಲ್ಲಿ ಮೂರನೇ ಹಂತದ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದೆ. ಶಿವಣ್ಣ ಹಾಗೂ ಧನಂಜಯ್ರ ರೆಟ್ರೋ ಲುಕ್, ಡಾ. ರಾಜ್ ಕುಮಾರ್ ಅವರ ಸ್ಪೈ ಸಿನಿಮಾಗಳನ್ನು ನೆನಪಿಸುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾವ ಕ್ರಾಂತಿಯು ಇಲ್ಲ, ಕೇವಲ ''ಮಾಧ್ಯಮ ಸೃಷ್ಟಿ''; ನನ್ನ ಸ್ಥಾನ ಈಗಲೂ ಗಟ್ಟಿ, ಮುಂದೆಯೂ ಗಟ್ಟಿ

Delhi Blast: ವೈದ್ಯನಾದರೂ ತಲೆ ತುಂಬ 'ಇಸ್ಲಾಮ್ ಮೂಲಭೂತವಾದ' ತುಂಬಿಕೊಂಡಿದ್ದ ಬಾಂಬರ್! ರೋಗಿಗಳಿಗೆ ಏನು ಹೇಳ್ತಿದ್ದ ಗೊತ್ತಾ?

Delhi Blast: ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಪರಿಶೀಲನೆ, 200 ವೈದ್ಯರು, ಸಿಬ್ಬಂದಿಗಳ ವಿಚಾರಣೆ

ಪಾಕ್ ಆಟಗಾರರೊಂದಿಗೆ 'ಹ್ಯಾಂಡ್ ಶೇಕ್ ಇಲ್ಲ' ನೀತಿಗೆ ತೀಲಾಂಜಲಿ: ಫ್ಯಾನ್ಸ್ ಗೆ ಅಚ್ಚರಿ ಮೂಡಿಸಿದ ಹರ್ಭಜನ್ ಸಿಂಗ್! Video

5th Generation Fighter: "ಭಾರತಕ್ಕೆ ಬೇಕಾದ್ದು ಕೊಡ್ತೇವೆ": ವಿಶ್ವದ ಯಾವುದೇ ರಾಷ್ಟ್ರ ಮಾಡದ 'ಸಾಹಸ' ಮಾಡಿದ ರಷ್ಯಾ!

SCROLL FOR NEXT