ಕನ್ನಡ ಚಿತ್ರರಂಗದಲ್ಲಿ ರುಕ್ಮಿಣಿ ವಸಂತ್ ರ ವೃತ್ತಿಜೀವನ ಸ್ಥಿರವಾದ ಪ್ರಯಾಣವಾಗಿದೆ. ತನ್ನ ಚೊಚ್ಚಲ ಚಿತ್ರ ಬೀರಬಲ್ ಟ್ರೈಲಾಜಿ (2019) ಯಿಂದ ಹಿಡಿದು 2023 ರಲ್ಲಿ ಬಾನದಾರಿಯಲ್ಲಿ, ಬಘೀರಾ (2024) ಅಥವಾ ಭೈರತಿ ರಣಗಲ್ (2024) ವರೆಗೆ ಚಂದನವನದಲ್ಲಿ ಅವರು ತನಗಾಗಿ ವಿಶಿಷ್ಟ ಜಾಗವನ್ನು ಪಡೆದುಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಎ & ಬಿ (2023) ಯೊಂದಿಗೆ ಆಕೆ ಕರ್ನಾಟಕದಿಂದ ಹೊರಗೂ ಕಾಲಿಟ್ಟರು. ಈ ಚಿತ್ರದ ಯಶಸ್ಸು ಅವರನ್ನು ತಮಿಳು ಚಿತ್ರರಂಗಕ್ಕೆ ಕರೆದೊಯ್ದಿತು. ಅಲ್ಲಿ ವಿಜಯ್ ಸೇತುಪತಿ (ACC) ಮತ್ತು ಶಿವಕಾರ್ತಿಕೇಯನ್ ( Madharaasi)ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಪ್ರಶಾಂತ್ ನೀಲ್-ಜೂನಿಯರ್ ಎನ್‌ಟಿಆರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ 'ಡ್ರ್ಯಾಗನ್' ಮತ್ತು ಯಶ್-ಗೀತು ಮೋಹನ್‌ದಾಸ್‌ರ 'ಟಾಕ್ಸಿಕ್'ನಂತಹ ಪ್ಯಾನ್-ಇಂಡಿಯನ್ ಕೆಲಸ ಮಾಡಿದ್ದಾರೆ. ರುಕ್ಮಿಣಿ ರಿಷಬ್ ಶೆಟ್ಟಿ ನಟಿಸಿರುವ ಬಹುನಿರೀಕ್ಷಿತ ಕಾಂತಾರ: ಚಾಪ್ಟರ್ 1 ನಾಳೆ ತೆರೆಗೆ ಅಪ್ಪಳಿಸಲಿದೆ. ಅವರೊಂದಿಗೆ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ರುಕ್ಮಿಣಿ, ನೀವು ಜನಪದ ಸಾಹಿತ್ಯ, ದೈವ ಮತ್ತು ತನ್ನದೇ ಆದ ಜಗತ್ತಿನೆಡೆಗೆ ಕಾಲಿಟ್ಟಾಗ ಆದ ಅನುಭವವೇನು?
ಕಾಂತಾರವನ್ನು ಅಪಾರ ಪ್ರೀತಿ ಮತ್ತು ದೈವ ಭಕ್ತಿಯಿಂದ ನಿರ್ಮಿಸಲಾಗಿದೆ ಎಂಬುದು ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಸ್ಪಷ್ಟವಾಗಿತ್ತು. ಆದ್ದರಿಂದ ಕಲಾವಿದರಾಗಿ ಈ ಜಗತ್ತಿಗೆ ಕಾಲಿಟ್ಟಾಗ, ಸಾಂಸ್ಕೃತಿಕ ಸಂದರ್ಭ ಮತ್ತು ಅದರ ಮೂಲವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಹೀಗಾಗಿ ನೀವು ಅದಕ್ಕೆ ನ್ಯಾಯವನ್ನು ಕೊಡಬೇಕಾಗುತ್ತದೆ. ತಾಳ್ಮೆಯಿಂದ ನನಗೆ ವಿವರಿಸಿದ ರಿಷಬ್ ಶೆಟ್ಟಿಗೆ ಮೊದಲ ಕ್ರೆಡಿಟ್ ಸಲ್ಲುತ್ತದೆ. ಅಲ್ಲಿಯವರೆಗೂ ನನಗೆ ಭೂತಕೋಲ, ದೈವ, ದಕ್ಷಿಣ ಕನ್ನಡದ ಹಲವು ಸಾಂಸ್ಕೃತಿಕ ಅಂಶಗಳ ಬಗ್ಗೆ ಅರಿವಿರಲಿಲ್ಲ. ಇದು ನನಗೆ ಕಾಂತಾರ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು.
ನೀವು ಎರಡು ಭಾಗಗಳ ಚಿತ್ರಗಳಿಗೆ ಹೊಸಬರಲ್ಲ, ಆದರೆ ಕನಕಾವತಿ ಪಾತ್ರ ಹೊಸ ಸವಾಲಾಗಿರಬಹುದು, ಸರಿಯೇ? ಈ ಚಿತ್ರಕ್ಕೆ ನೀವು ಹೊಸಬರು!
ಆರಂಭದಲ್ಲಿ ಸ್ವಲ್ಪ ನರ್ವಸ್ ಆಗಿದ್ದೆ. ಮೂಲ ತಂಡವು ಮತ್ತೆ ಒಂದಾಗುವುದರೊಂದಿಗೆ ಮತ್ತು ನಾನು ಹೊಸಬಳಾಗಿ ಪ್ರವೇಶಿಸಿದಾಗ ಭಯ ಇತ್ತು. ಆದರೆ ಇದನ್ನು ಪ್ರಿಕ್ವೆಲ್ ಆಗಿ ಮಾಡಲಾಗುತಿತ್ತು. ಹಳೆಯದರಲ್ಲಿ ನಾವು ನೋಡಿದ ಪ್ರಪಂಚದ ಸಂಪರ್ಕಗಳಿದ್ದರೂ, ಕಾಂತಾರ: ಚಾಪ್ಟರ್ 1, ಒಂದು ಸ್ವತಂತ್ರ ಕಥೆಯಾಗಿದೆ. ಇದು ಕೂಡಾ ಅದೇ ಜಗತ್ತು. ಆದರೆ ಬೇರೆ ಸಮಯದಲ್ಲಿ ಹೊಂದಿಸಲಾಗಿದೆ. ನಾವು ಹೊಸ ಚಿತ್ರವಾಗಿ ಪರಿಗಣಿಸಿದ್ದರಿಂದ ಯಾವುದೇ ಒತ್ತಡ ಇರಲಿಲ್ಲ.
ಟ್ರೇಲರ್ ವೈರಲ್ ಆಗಿದ್ದು, ಚಿತ್ರದಲ್ಲಿನ ನಿಮ್ಮ ಒಂದು ಪೋಸ್ ಬಗ್ಗೆ AI ನಿಂದಾದ ಮೀಮ್‌ಗಳು ಕೂಡ ವೈರಲ್ ಆಗಿವೆ.
ನಾನು ನಿಜವಾಗಿಯೂ ಮೀಮ್‌ಗಳನ್ನು ತುಂಬಾ ತಮಾಷೆಯಾಗಿ ಕಾಣ್ತೀನಿ. ಜನರು ತುಂಬಾ ಕ್ರಿಯೇಟಿವಿಯಿಂದ ಅವುಗಳನ್ನು ಮಾಡ್ತಾರೆ. ಅಂತಹುಗಳನ್ನು ನೋಡಿದ್ದೇನೆ. ಆದರೆ ಅವುಗಳನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತೇನೆ
ಕನಕವತಿ ಪಾತ್ರ ಮಾಡುವಾಗ ಸ್ವಲ್ಪ ಹೆದರಿಕೆ ಇತ್ತೇ?
ಕನಕವತಿಯಾಗಿ ಆಚರಣೆಗಳು, ಸಂಗೀತ ಮತ್ತು ವಾತಾವರಣದೊಂದಿಗೆ ಭಾವನಾತ್ಮಕವಾಗಿ ಹೊಂದಿಕೊಳ್ಳಬೇಕಾಗಿತ್ತು. ಪ್ರಾಮಾಣಿಕವಾಗಿ ಹೇಳುವುದಾದರೆ ಕನಕಾವತಿ ನನ್ನಂತಲ್ಲ. ಈ ಪಾತ್ರವು ಸಂಪೂರ್ಣವಾಗಿ ವಿಭಿನ್ನ ರೀತಿಯ ದೇಹ ಭಾಷೆಯನ್ನು ಹೊಂದಿದೆ. ವಿಭಿನ್ನ ಜಗತ್ತು ಮತ್ತು ಪಾತ್ರಗಳನ್ನು ಸಾಕಾರಗೊಳಿಸುವುದು ಕಲಾವಿದೆಯ ಅತ್ಯುತ್ತಮ ಭಾಗವಲ್ಲವೇ? ಮತ್ತು ನಾನು ಅದನ್ನು ನಂಬುವಂತೆ ಮಾಡಬೇಕು, ಪಾತ್ರಕ್ಕೆ ತಕ್ಕಂತೆ ಮಾಡದಿದ್ದರೆ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ.
ದೊಡ್ಡ ಪರದೆಯ ಮೇಲೆ ನೆಲದ ಕಥೆಗಳನ್ನು ಹೇಳುವುದರಿಂದ ಆಗುವ ಸಾಂಸ್ಕೃತಿಕ ಪರಿಣಾಮದ ಬಗ್ಗೆ ಏನಂತೀರಾ?
ರಾಮಾಯಣ ಮತ್ತು ಮಹಾಭಾರತಗಳು ನಮಗೆಲ್ಲರಿಗೂ ತಿಳಿದಿರುವುದಕ್ಕೆ ಪ್ರಮುಖ ಕಾರಣವೆಂದರೆ ಅವುಗಳನ್ನು ಪೀಳಿಗೆಯಿಂದ ಪೀಳಿಗೆಗೆ ತಿಳಿಸಲಾಗುತ್ತಿದೆ. ಅಂತೆಯೇ, ಇಂತಹ ನೆಲಮಟ್ಟದ ಕಥೆಗಳನ್ನು ಹೇಳಲು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್‌ನ ಜೊತೆಯಾಗಿದೆ. ಸಿನಿಮಾ ಒಂದು ಪ್ರಬಲ ಮತ್ತು ಬಹುಶಿಸ್ತೀಯ ಮಾಧ್ಯಮವಾಗಿದ್ದು ಈ ಕಥೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ.