ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತರ್ದ ಸೈಕೋ ಸೈತಾನ್ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ನಿನ್ನೆ ಸಂಜೆ 6.15ಕ್ಕೆ ಬಿಡುಗಡೆಯಾಗಿತ್ತು. ಆದರೆ ಹಾಡಿನ ಲಿರಿಕ್ಸ್ ಕೇಳಿದ ಮೇಲೆ ಅಭಿಮಾನಿಗಳು ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲಿ ಬಳಸಿದ್ದ ಜಲಗಾರ ಪದಕ್ಕೆ ಬದಲಿಗೆ ಭಾಗ್ಯದ ಬಳೆಗಾರ ಅಂತ ಅಭಿಮಾನಿಯೊಬ್ಬ ಪೋಸ್ಟ್ ಮಾಡಿದ್ದು ಚಿತ್ರದ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಶುರುವಾಗಿತ್ತು. ಅಲ್ಲದೆ ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಹೀಗಾಗಿ ಇದೀಗ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದ ಹಾಡನ್ನು ಸದ್ಯಕ್ಕೆ ಡಿಲೀಟ್ ಮಾಡಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡ. ನಮ್ಮ ಬಾದ್‌ಶಾ ಕಿಚ್ಚ ಸುದೀಪ್ ಅವರ MARK ಚಿತ್ರದ ಮೊದಲ ಸಿಂಗಲ್ ಸೈಕೋ ಸೈತಾನ್ ಬಗ್ಗೆ ತೋರಿಸಿದ ಎಲ್ಲಾ ಪ್ರೀತಿಗೆ ಧನ್ಯವಾದಗಳು. ಅನಿರೀಕ್ಷಿತ ತಾಂತ್ರಿಕ ದೋಷದಿಂದಾಗಿ ನಾವು MARKನ PsychoSaithan ಹಾಡನ್ನು ಮರುಪ್ರಾರಂಭಿಸಲು ನಿರ್ಧರಿಸಿದ್ದೇವೆ.
ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ನಿಮ್ಮ ತಾಳ್ಮೆ, ಪ್ರೀತಿ ಮತ್ತು ಅಚಲ ಬೆಂಬಲವನ್ನು ನಾವು ತುಂಬಾ ಪ್ರಶಂಸಿಸುತ್ತೇವೆ. ಮರುಪ್ರಾರಂಭಕ್ಕಾಗಿ ಟ್ಯೂನ್ ಆಗಿರಿ. ಇದು ಕಾಯಲು ಯೋಗ್ಯವಾಗಿರುತ್ತದೆ ಎಂದು ಚಿತ್ರತಂಡ ಹೇಳಿದೆ. ಮಾರ್ಕ್ ಸಿನಿಮಾವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶಿಸಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಅನೂಪ್ ಬಂಡಾರಿ ಹಾಡನ್ನು ಬರೆದಿದ್ದಾರೆ.