ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ನಿರ್ದೇಶಿಸಿರುವ ಕಾಂತಾರ: ಅಧ್ಯಾಯ 1 ಬಾಕ್ಸ್ ಆಫೀಸ್ ಕಲೆಕ್ಷನ್ 8ನೇ ದಿನಕ್ಕೆ ಅಂತರರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದೆ. ವಿಶ್ವಾದ್ಯಂತ ಕಾಂತಾರ ಚಿತ್ರ 500 ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಟ್ವೀಟ್ ಮಾಡಿದೆ.
ಕಾಂತಾರ: ಅಧ್ಯಾಯ 1 ಚಿತ್ರವನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಾಸಿದ್ದಾರೆ. 125 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದ್ದ ಚಿತ್ರ ಇದೀಗ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕಾಂತಾರ ಅಧ್ಯಾಯ 1 ಚಿತ್ರ 8ನೇ ದಿನದಂದು ವಿಶ್ವದಾದ್ಯಂತ 509.25 ಕೋಟಿ ಬಾಕ್ಸ್ ಆಫೀಸ್ ಸಂಗ್ರಹದೊಂದಿಗೆ 500 ಕೋಟಿ ಗಡಿ ದಾಟಿದೆ ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೊಂಬಾಳೆ ಫಿಲ್ಮ್ಸ್ ಚಿತ್ರದ ಪೋಸ್ಟರ್ ಚಿತ್ರವನ್ನು ಹಂಚಿಕೊಂಡಿದೆ. ಅದರೊಂದಿಗೆ ಅವರು ಚಿತ್ರದ ವಿಶ್ವಾದ್ಯಂತ ಸಂಗ್ರಹವನ್ನು ಘೋಷಿಸಿದರು. ದಿ ಡಿವೈನ್ ಸಿನಿಮೀಯ ಬಿರುಗಾಳಿಯು ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ಹೆಚ್ಚಿನ ಗಳಿಕೆಯನ್ನು ಮುಂದುವರಿಸಿದೆ ಕಾಂತಾರ ಅಧ್ಯಾಯ 1 ಮೊದಲ ವಾರದಲ್ಲಿ ವಿಶ್ವಾದ್ಯಂತ 509.25 ಕೋಟಿಗೂ ಹೆಚ್ಚು ಗಳಿಸಿದೆ. ಬ್ಲಾಕ್‌ಬಸ್ಟರ್ ಕಾಂತಾರ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ ಎಂದು ಟ್ವೀಟ್ ಮಾಡಿದೆ.