ಬಿಗ್ ಬಾಸ್ ಕನ್ನಡ ಸೀಸನ್ 12ರ ಹೋಸ್ಟ್ ಆಗಿ ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

'ತಪ್ಪು ನಮ್ಮದಲ್ಲ': 'ಅದು ಕೇವಲ ಖಾಲಿ ಜಾಗವಾಗಿತ್ತು, ಬಿಗ್ ಬಾಸ್ ಕನ್ನಡ ಅದಕ್ಕೆ ವಿಳಾಸ ನೀಡಿತು: ಕಿಚ್ಚ ಸುದೀಪ್

12 ಸೀಸನ್‌ಗಳ ಈ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗಿ ಮಾತ್ರ ಉಳಿದಿಲ್ಲ. ಎಷ್ಟೋ ಜನರಿಗೆ ಅನ್ನ ನೀಡಿದೆ, ಕೆಲಸ ನೀಡಿದೆ. ಎಷ್ಟೋ ಜೀವನಕ್ಕೆ ದಾರಿ ದೀಪವಾಗಿದೆ.

12 ವರ್ಷಗಳಿಂದ, ಬಿಗ್ ಬಾಸ್ ಕನ್ನಡ ಕೇವಲ ಟಿವಿ ಕಾರ್ಯಕ್ರಮ ಅಷ್ಟೇ ಆಗಿರದೆ ಕೋಟ್ಯಂತರ ಜನರ ಮೆಚ್ಚಿನ ಕಾರ್ಯಕ್ರಮವಾಗಿದೆ. ಆದರೆ, ಈ ಸೀಸನ್‌ನಲ್ಲಿ, ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಆರಂಭಗೊಂಡ ನಂತರ ಕೆಲವು ಅಡೆತಡೆಗಳನ್ನು ಎದುರಿಸಿತು. ಐಕಾನಿಕ್ ಬಿಗ್ ಬಾಸ್ ಕನ್ನಡ ಮನೆ ನಿರ್ಮಿಸಿರುವ ಜಾಲಿವುಡ್ ಸ್ಟುಡಿಯೋಸ್ ಅನ್ನು ಕೆಲವು ನಿಯಮ ಉಲ್ಲಂಘನೆಗಾಗಿ ಮುಚ್ಚಲಾಯಿತು. ಆಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾರ್ಯಕ್ರಮ ಅನಿರೀಕ್ಷಿತವಾಗಿ ಸ್ಥಗಿತಗೊಂಡಿತು.

ನಿರೂಪಕ ಕಿಚ್ಚ ಸುದೀಪ್ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡುವ ಮೂಲಕ ಕಾರ್ಯಕ್ರಮವನ್ನು ಮತ್ತೆ ಶುರು ಮಾಡುವಂತೆ ಮಾಡಿದರು ಎಂದು ವರದಿಯಾಗಿದೆ. ನಟ ಅಂತಿಮವಾಗಿ ತಮ್ಮ ವಾರಾಂತ್ಯದ ಕಾರ್ಯಕ್ರಮದಲ್ಲಿ ತಮ್ಮದೇ ಶೈಲಿಯನ್ನು ಘಟನೆಯನ್ನು ವಿವರಿಸಿದ್ದಾರೆ.

ಬಿಗ್ ಬಾಸ್ ಇದೊಂದು ಶೋ ಮಾತ್ರ ಅಲ್ಲ. ಇಡೀ ಕನ್ನಡಿಗರ ಹೆಮ್ಮೆ. ಇಡೀ ಕನ್ನಡಿಗರು ಹಚ್ಚಿ ಸಂಭ್ರಮಿಸುತ್ತಿರುವ ಮಹಾಜ್ಯೋತಿ. ಈ ಮನರಂಜನೆಯ ಪಯಣಕ್ಕೆ ತೊಂದರೆ ಬಂದಾಗ ಆ ಜ್ಯೋತಿ ಆರದಂತೆ ನೋಡಿಕೊಂಡ ಎಲ್ಲ ಕನ್ನಡಿಗರಿಗೂ ಧನ್ಯವಾದ. ಕಲರ್ಸ್ ಕನ್ನಡ ಅಥವಾ ಬಿಗ್ ಬಾಸ್ ತಂಡ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದರು.

ಏಳು ಬೀಳು ಏನೇ ಬಂದರೂ ಕನ್ನಡಿಗರ ಪ್ರೀತಿ ನಮ್ಮ ಜೊತೆ ಇರೋವರೆಗೂ ಮುಂದೆ ಹೋಗುತ್ತಲೇ ಇರುತ್ತದೆ. ಹೊರಗೆ ನಡೆದ ವಿಚಾರಕ್ಕೂ, ಬಿಗ್ ಬಾಸ್‌ಗೂ ಯಾವುದೇ ಸಂಬಂಧ ಇಲ್ಲ. ನಾವು ಕಾರ್ಯಕ್ರಮ ನಡೆಸುತ್ತಿರುವ ಸ್ಥಳಕ್ಕೂ ಮತ್ತು ಇತರರ ನಡುವಿನ ಸಮಸ್ಯೆ ಅದಾಗಿತ್ತು. ಖಾಲಿ ಜಾಗಕ್ಕೆ ಬೆಲೆ ಇರಲ್ಲ, ಅದಕ್ಕೊಂದು ಅಡ್ರೆಸ್ ಬೇಕಿತ್ತು. ಆ ವಿಳಾಸವೇ ಬಿಗ್ ಬಾಸ್ ಆಯಿತು ಎಂದು ತಿಳಿಸಿದರು.

12 ಸೀಸನ್‌ಗಳ ಈ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗಿ ಮಾತ್ರ ಉಳಿದಿಲ್ಲ. ಎಷ್ಟೋ ಜನರಿಗೆ ಅನ್ನ ನೀಡಿದೆ, ಕೆಲಸ ನೀಡಿದೆ. ಎಷ್ಟೋ ಜೀವನಕ್ಕೆ ದಾರಿ ದೀಪವಾಗಿದೆ. ಹೀಗಾಗಿ, ಕೆಲವರಿಗೆ ಈ ಶೋ ಕಣ್ಣು ಕುಕ್ಕುವಂತೆ ಮಾಡುವುದು ಸಹಜ. ನಮ್ಮ ಡಿಕೆ ಸಾಹೇಬರು ಮತ್ತು ನನ್ನ ಸ್ನೇಹಿತ ನಲಪಾಡ್ ಅವರಿಗೆ ಧನ್ಯವಾದಗಳು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ಮುಗಿದಿದೆ: 2 ವರ್ಷಗಳ ಬಳಿಕ ಎಲ್ಲಾ ಜೀವಂತ 20 ಒತ್ತೆಯಾಳುಗಳನ್ನು ಹಸ್ತಾಂತರಿಸಿದ ಹಮಾಸ್; ಇಸ್ರೇಲ್ ಸೆನೆಟ್‌ನಲ್ಲಿ ಟ್ರಂಪ್ ಭಾಷಣ

RSS ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಸಾವಿಗೆ ಶರಣಾದ ಕೇರಳದ ಸಾಫ್ಟ್‌ವೇರ್ ಎಂಜಿನಿಯರ್; ಪ್ರಿಯಾಂಕಾ ಆಕ್ರೋಶ!

ಮನೆ ಬಾಡಿಗೆ 1.25 ಲಕ್ಷ, ಮನೆ ಕೆಲಸದಾಕೆ ಸಂಬಳವೇ 45 ಸಾವಿರ ರೂ: ರಷ್ಯಾ ಮಹಿಳೆಯ ಬೆಂಗಳೂರು ಲೈಫ್, ವೈರಲ್ ಲೆಕ್ಕಾಚಾರ!

'Toxic' ದೃಶ್ಯಗಳು ಸೋರಿಕೆ: ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ Yash ಶರ್ಟ್‌ಲೆಸ್ ಲುಕ್; Video Viral

ನಾನು ಸಿಎಂ ಆಗಿದ್ರೆ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿರಲಿಲ್ಲ ಎಂದ ಆರ್‌ವಿ ದೇಶಪಾಂಡೆ; ಸ್ಪಷ್ಟನೆ ಕೋರಿದ ಸಿದ್ದರಾಮಯ್ಯ

SCROLL FOR NEXT