ಪತ್ನಿಯೊಂದಿಗೆ ನಿರ್ದೇಶಕ ರಾಜ್ ನಿಡಿಮೋರು 
ಸಿನಿಮಾ ಸುದ್ದಿ

ದುಬೈ ಪ್ರವಾಸದ ರೀಲ್ಸ್ ಹಂಚಿಕೊಂಡ ನಟಿ ಸಮಂತಾ; ರಾಜ್ ನಿಡಿಮೋರು ಪತ್ನಿ ಶ್ಯಾಮಲಿ ರಹಸ್ಯ ಪೋಸ್ಟ್!

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು, ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ಮತ್ತು ಸಿಟಾಡೆಲ್: ಹನಿ ಬನ್ನಿ ಯಲ್ಲಿ ನಟಿ ಮತ್ತು ನಿರ್ದೇಶಕನಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು ಇವೆರಡೂ ಪ್ರೈಮ್ ವಿಡಿಯೋ ವೆಬ್ ಸರಣಿಗಳಾಗಿವೆ.

ನವದೆಹಲಿ: ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಅವರ ನಡುವಿನ ಸಂಬಂಧದ ಬಗ್ಗೆ ದಿನದಿಂದ ದಿನಕ್ಕೆ ವದಂತಿಗಳು ಹೆಚ್ಚಾಗುತ್ತಲೇ ಇವೆ. ಆಗ್ಗಾಗ್ಗೆ ಸಮಂತಾ ಪ್ರವಾಸದ ವಿಡಿಯೋಗಳನ್ನು, ಫೋಟೊಗಳನ್ನು ಹಂಚಿಕೊಂಡಾಗಲೆಲ್ಲಾ ಈ ಇಬ್ಬರ ನಡುವೆ ಏನೋ ಇದೆ ಎಂಬುದನ್ನು ಇಂಟರ್ನೆಟ್ ಬಳಕೆದಾರರು ಎತ್ತಿ ತೋರಿಸಿದ್ದಾರೆ.

ನಟಿ ಸಮಂತಾ ರುತ್ ಪ್ರಭು ಮಂಗಳವಾರ ತಮ್ಮ ದುಬೈ ಪ್ರವಾಸದ ರೀಲ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ರಾಜ್ ನಿಡಿಮೋರು ಅವರ ಮುಖ ಕಾಣಿಸದಿದ್ದರೂ, ನಟಿ ಸಮಂತಾ ಅವರ ಜೊತೆಗೆ ರಾಜ್ ನಿಡಿಮೋರು ಕೂಡ ತೆರಳಿದ್ದಾರೆ ಎಂದು ಹಲವರು ಶಂಕಿಸಿದ್ದಾರೆ.

ಇದಾದ ಕೆಲವು ಗಂಟೆಗಳ ನಂತರ, ರಾಜ್ ನಿಡಿಮೋರು ಅವರ ಪತ್ನಿ ಶ್ಯಾಮಲಿ ದೇ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನಿಗೂಢವಾದ ಸಂದೇಶವನ್ನು ಹಂಚಿಕೊಂಡಿದ್ದಾರೆ.

ನಿರ್ಲಿಪ್ತತೆ ಎಂದರೆ ನಿಮ್ಮಲ್ಲಿರುವ ಎಲ್ಲವನ್ನೂ ನೀವು ತ್ಯಜಿಸುವ ಅಗತ್ಯವಿಲ್ಲ. ಆದರೆ, ನಿಮ್ಮಲ್ಲಿರುವ ಯಾವುದೂ ನಿಮ್ಮನ್ನು ನಿಯಂತ್ರಿಸಬಾರದು- Ali Ibn Abi Talib' ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು, ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ಮತ್ತು ಸಿಟಾಡೆಲ್: ಹನಿ ಬನ್ನಿ ಯಲ್ಲಿ ನಟಿ ಮತ್ತು ನಿರ್ದೇಶಕನಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು ಇವೆರಡೂ ಪ್ರೈಮ್ ವಿಡಿಯೋ ವೆಬ್ ಸರಣಿಗಳಾಗಿವೆ.

ಈ ವರ್ಷದ ಆರಂಭದಲ್ಲಿ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವರ್ಲ್ಡ್ ಪಿಕಲ್‌ಬಾಲ್ ಲೀಗ್ ಪಂದ್ಯದ ಹಲವಾರು ಫೋಟೊಗಳನ್ನು ಹಂಚಿಕೊಂಡಾಗ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಪ್ರಾರಂಭವಾದವು. ಸಮಂತಾ ರುತ್ ಪ್ರಭು, ಪಿಕಲ್‌ಬಾಲ್ ತಂಡವಾದ ಚೆನ್ನೈ ಸೂಪರ್ ಚಾಂಪ್ಸ್‌ನ ಮಾಲೀಕರಾಗಿದ್ದಾರೆ.

ಇತ್ತೀಚೆಗೆ ಸಮಂತಾ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಕೆಲವು ಫೋಟೊಗಳಲ್ಲಿ ರಾಜ್ ನಿಡಿಮೋರು ಇರುವುದು ಕಂಡುಬಂದಿದೆ. ಸಮಂತಾ ಈ ಹಿಂದೆ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು ಮತ್ತು 2021 ರಲ್ಲಿ ವಿಚ್ಛೇದನ ಪಡೆದರು.

ವದಂತಿಯ ಬಗ್ಗೆ ಸಮಂತಾ ರುತ್ ಪ್ರಭು ಅಥವಾ ರಾಜ್ ನಿಡಿಮೋರು ಇಬ್ಬರೂ ಸಾರ್ವಜನಿಕವಾಗಿ ಮಾತನಾಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

MUDA ಕೇಸ್: ಸಿಎಂಗೆ ಕ್ಲೀನ್ ಚಿಟ್ ನೀಡಿದ್ದ ದೇಸಾಯಿ ಆಯೋಗ ವರದಿಗೆ ಸಂಪುಟ ಅನುಮೋದನೆ, ಅಧಿಕಾರಿಗಳು-ಅಕ್ರಮ ಫಲಾನುಭವಿಗಳಿಂದ ನಷ್ಟ ವಸೂಲಿಗೆ ನಿರ್ಧಾರ

ಬೆಂಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮ; ನಗರದ ಹಲವಡೆ ಸಂಚಾರ ಬದಲಾವಣೆ, ಪರ್ಯಾಯ ಮಾರ್ಗಗಳು ಹೀಗಿವೆ...

"ಸ್ವತಂತ್ರ ಭಾರತದ ಅತಿದೊಡ್ಡ ಸುಧಾರಣೆ"- GST ಸುಧಾರಣೆ ಶ್ಲಾಘಿಸಿದ ಪ್ರಧಾನಿ ಮೋದಿ

ಜಿಎಸ್‌ಟಿ ಕಡಿತ ಲಾಭ ಗ್ರಾಹಕರಿಗೆ ವರ್ಗಾಯಿಸುವುದಾಗಿ ಮುಖೇಶ್ ಅಂಬಾನಿ ಭರವಸೆ

ಕನಕಪುರದಲ್ಲಿ ಮೆಡಿಕಲ್ ಕಾಲೇಜ್; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸಂಪುಟ ಅಸ್ತು

SCROLL FOR NEXT