ಸಮರ್ಜಿತ್ ಲಂಕೇಶ್ 
ಸಿನಿಮಾ ಸುದ್ದಿ

'ಗೌರಿ' ಚಿತ್ರಕ್ಕಾಗಿ SIIMA ಅತ್ಯುತ್ತಮ ಚೊಚ್ಚಲ ನಟ; ಲುಮಿಯರ್ ರಾಷ್ಟ್ರೀಯ ಪ್ರಶಸ್ತಿ ಪಡೆದ ಸಮರ್ಜಿತ್ ಲಂಕೇಶ್‌!

ಉದಯೋನ್ಮುಖ ನಟ ಸಮರ್ಜಿತ್ ಲಂಕೇಶ್ ಅವರು ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಗರಿ ಸೇರಿಸಿದ್ದಾರೆ.

ಉದಯೋನ್ಮುಖ ನಟ ಸಮರ್ಜಿತ್ ಲಂಕೇಶ್ ಅವರು ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಗರಿ ಸೇರಿಸಿದ್ದಾರೆ. ಸತತವಾಗಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸುವ ಮೂಲಕ ಅವರು ಭಾರತೀಯ ಚಿತ್ರರಂಗದ ಭರವಸೆಯ ಹೊಸ ಪ್ರತಿಭೆಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ದುಬೈನಲ್ಲಿ ನಡೆದ 13ನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) 2025ರ ಸಮಾರಂಭದಲ್ಲಿ, ಸಮರ್ಜಿತ್ ಅವರು ತಮ್ಮ ಪ್ರಥಮ ಚಿತ್ರ 'ಗೌರಿ' ಯಲ್ಲಿನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ಚೊಚ್ಚಲ ನಟ (ಕನ್ನಡ) ಪ್ರಶಸ್ತಿಯನ್ನು ಪಡೆದರು.

ಅಲ್ಲದೆ ಸಮರ್ಜಿತ್ ಅವರಿಗೆ ಅತ್ಯುತ್ತಮ ಉದಯೋನ್ಮುಖ ನಟನಿಗಾಗಿ ಲುಮಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನೂ ಸಹ ನೀಡಿ ಗೌರವಿಸಲಾಗಿದೆ. ಇದು ಅವರ ಪ್ರಭಾವಶಾಲಿ ಪಾದಾರ್ಪಣೆಯನ್ನು ಹಾಗೂ ಭಾರತೀಯ ಚಿತ್ರರಂಗದ ಪ್ರಮುಖ ನಟರಾಗಿ ಬೆಳೆಯುವ ಅವರ ಸಾಮರ್ಥ್ಯವನ್ನು ಮತ್ತಷ್ಟು ಗುರುತಿಸಿದೆ. ಈ ಎರಡೂ ಗೌರವಗಳು ಕನ್ನಡ ಚಿತ್ರರಂಗದ ಭವಿಷ್ಯವನ್ನು ರೂಪಿಸುತ್ತಿರುವ ಯುವ ನಟರ ಅಲೆಯನ್ನೇ ಎತ್ತಿ ತೋರಿಸುತ್ತಿವೆ. ಜೊತೆಗೆ, ಮುಂಬರುವ ವರ್ಷಗಳಲ್ಲಿ ಸಮರ್ಜಿತ್ ಲಂಕೇಶ್ ಅವರು ಕನ್ನಡ ಮತ್ತು ಭಾರತೀಯ ಚಿತ್ರರಂಗದಲ್ಲಿ ಗಮನಿಸಬೇಕಾದ ಹೆಸರು ಎಂಬುದನ್ನು ಈ ಪ್ರಶಸ್ತಿಗಳು ಸ್ಪಷ್ಟಪಡಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಸ್ರೇಲ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಜೆರುಸಲೆಮ್ ಬಸ್ ಮೇಲೆ ಗುಂಡಿನ ದಾಳಿ: 5 ಸಾವು, 12 ಜನರಿಗೆ ಗಾಯ

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 19 ಮಂದಿ ಸಾವು; ಸೇನೆ ನಿಯೋಜನೆ; Video!

ಕೋಮು ಘರ್ಷಣೆ: ಸೆಪ್ಟೆಂಬರ್ 9 ರಂದು ಮದ್ದೂರು ಬಂದ್‌ಗೆ ಬಿಜೆಪಿ ಕರೆ

ನಾಳೆ ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ BRS-BJD ದೂರ; ಇದು INDIA ಅಭ್ಯರ್ಥಿ ವಿರುದ್ಧ NDA ಅಭ್ಯರ್ಥಿ ಗೆಲುವಿಗೆ ವರವಾಗುತ್ತಾ?

ರಷ್ಯಾದಿಂದ ತೈಲ ಖರೀದಿ "ರಕ್ತದ ಹಣ": ಭಾರತದ ಮೇಲೆ ಮತ್ತೆ ಕಿಡಿ ಕಾರಿದ ವ್ಯಾಪಾರ ಸಲಹೆಗಾರ ಪೀಟರ್ ನವರೊ!

SCROLL FOR NEXT