ಮಿಸ್ ಯೂನಿವರ್ಸ್ ಇಂಡಿಯಾ 2025ರ ವಿಜೇತೆ ಮಣಿಕಾ ವಿಶ್ವಕರ್ಮ 
ಸಿನಿಮಾ ಸುದ್ದಿ

Ramayana: ಸೀತಾ ಪಾತ್ರಕ್ಕೆ Miss Universe India 2025 'ಮಣಿಕಾ' ಆಯ್ಕೆ!

ಈ ಬಗ್ಗೆ ಸ್ವತಃ ಮಣಿಕಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದು, 'ಈ ಪಾತ್ರವನ್ನು ನಿರ್ವಹಿಸಲು ತಾನು ಧನ್ಯಳಾಗಿದ್ದೇನೆ. ಶ್ರೀ ರಾಮನ ಆಶೀರ್ವಾದದೊಂದಿಗೆ....

ಮುಂಬೈ: ರಾಮಾಯಣದ ಸೀತಾ ಪಾತ್ರಕ್ಕೆ ಉದಯೋನ್ಮುಖ ನಟಿ ಹಾಗೂ ಮಿಸ್ ಯೂನಿವರ್ಸ್ ಇಂಡಿಯಾ 2025ರ ವಿಜೇತೆ ಮಣಿಕಾ ವಿಶ್ವಕರ್ಮ (Manika Vishwakarma) ಆಯ್ಕೆಯಾಗಿದ್ದಾರೆ.

ರಾಜಸ್ಥಾನದ ಮೂಲದ ಮಣಿಕಾ ಇತ್ತೀಚೆಗೆ ನಡೆದ Miss Universe India 2025 ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ಆಯ್ಕೆಯಾಗಿದ್ದರು. ಈ ಖುಷಿ ಮಾಸುವ ಮುನ್ನವೇ ಅವರಿಗೆ ಮತ್ತೊಂದು ಸಂತಸ ಎದುರಾಗಿದ್ದು, ರಾಮಾಯಣದಲ್ಲಿ ಸೀತಾ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಸ್ವತಃ ಮಣಿಕಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದು, 'ಈ ಪಾತ್ರವನ್ನು ನಿರ್ವಹಿಸಲು ತಾನು ಧನ್ಯಳಾಗಿದ್ದೇನೆ. ಶ್ರೀ ರಾಮನ ಆಶೀರ್ವಾದದೊಂದಿಗೆ, ನಾನು ಅಂತಿಮವಾಗಿ ಅಯೋಧ್ಯೆಗೆ ಸೀತಾ ಪಾತ್ರದಲ್ಲಿ ಹೋಗುತ್ತಿದ್ದೇನೆ, ಅದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ' ಎಂದು ಹೇಳಿದ್ದಾರೆ.

ರಾಮಾಯಣ 'ಚಿತ್ರವಲ್ಲ..' ಅಯೋಧ್ಯೆಯಲ್ಲಿ ನಡೆಯಲಿರುವ ನಾಟಕ ಪ್ರದರ್ಶನ

ಅರೆ ಇದೇನಿದು ರಾಮಾಯಣ ಚಿತ್ರಕ್ಕೆ ದಕ್ಷಿಣ ಭಾರತ ಖ್ಯಾತ ನಟಿ ಸಾಯಿ ಪಲ್ಲವಿ ಅಲ್ಲವೇ ನಾಯಕಿ.. ಆಕೆಯನ್ನು ಬದಲಿಸಿ ಬಿಟ್ಟರೆ ಎಂದು ಭಾವಿಸಬೇಡಿ.. ಇದು ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರವಲ್ಲ.. ಬದಲಿಗೆ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಾಯಣ ಚಿತ್ರದ ನಾಟಕ..

ಈ ನಾಟಕಕ್ಕೆ ರೂಪದರ್ಶಿ ಹಾಗೂ ಮಿಸ್ ಯೂನಿವರ್ಸ್ ಇಂಡಿಯಾ 2025ರ ವಿಜೇತೆ ಮಣಿಕಾ ವಿಶ್ವಕರ್ಮ ಆಯ್ಕೆಯಾಗಿದ್ದಾರೆ. ಮಿಸ್ ಯೂನಿವರ್ಸ್ ಇಂಡಿಯಾ 2025 ಮಣಿಕಾ ವಿಶ್ವಕರ್ಮ ಮುಂಬರುವ ವಾರ್ಷಿಕ ನಾಟಕ ಕಾರ್ಯಕ್ರಮವಾದ ಅಯೋಧ್ಯಾ ರಾಮಲೀಲಾದಲ್ಲಿ ಸೀತಾ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಬಗ್ಗೆ ಖುಷಿಯಿಂದ ಪೋಸ್ಟ್ ಹಂಚಿಕೊಂಡಿರುವ ಮಣಿಕಾ, 'ನಾನು ಬಹಳ ದಿನಗಳಿಂದ ಅಯೋಧ್ಯೆಗೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತಿದ್ದೆ, ಆದರೆ ಅದು ಕೆಲವು ಕಾರಣಗಳಿಂದ ವಿಳಂಬವಾಗುತ್ತಲೇ ಇತ್ತು. ಈಗ, ಭಗವಂತನ ಆಶೀರ್ವಾದಿಂದ ಈ ಅವಕಾಶ ನನಗೆ ಸಿಕ್ಕಿದೆ.

ನಾನು ಬಹಳ ದಿನಗಳಿಂದ ಅಯೋಧ್ಯೆಗೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತಿದ್ದೆ, ಆದರೆ ಅದು ಕೆಲವು ಕಾರಣಗಳಿಂದ ವಿಳಂಬವಾಗುತ್ತಲೇ ಇತ್ತು. ಈಗ, ಶ್ರೀ ರಾಮನ ಆಶೀರ್ವಾದದೊಂದಿಗೆ, ನಾನು ಅಂತಿಮವಾಗಿ ಅಯೋಧ್ಯೆಗೆ ಸೀತಾ ಪಾತ್ರದಲ್ಲಿ ಹೋಗುತ್ತಿದ್ದೇನೆ, ಅದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ.

ಈ ವರ್ಷ ನನಗೆ ಹಲವು ವಿಧಗಳಲ್ಲಿ ಬಹಳ ವಿಶೇಷವಾಗಿದೆ. ಭಗವಾನ್ ಶ್ರೀ ರಾಮನ ಆಶೀರ್ವಾದದಿಂದ, ವಿಶ್ವದ ಅತಿದೊಡ್ಡ ರಾಮಲೀಲಾದಲ್ಲಿ ಮಾ ಸೀತಾ ಪಾತ್ರದಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿದೆ ಮತ್ತು ನಾನು ತುಂಬಾ ಉತ್ಸುಕಳಾಗಿದ್ದೇನೆ' ಎಂದು ಹೇಳಿದ್ದಾರೆ.

ಜಗತ್ತಿನ ಅತಿದೊಡ್ಡ ರಾಮಲೀಲಾ

ಅಂದಹಾಗೆ ರಾಮಲೀಲಾ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಅಯೋಧ್ಯೆಯ ರಾಮ ಕಥಾ ಪಾರ್ಕ್‌ನಲ್ಲಿ ನಡೆಯಲಿದೆ. ಅಯೋಧ್ಯಾ ರಾಮಲೀಲಾವನ್ನು ವಿಶ್ವದ ಅತಿದೊಡ್ಡ ರಾಮಲೀಲಾ ನಾಟಕ ಎಂದು ಪರಿಗಣಿಸಲಾಗಿದೆ.

ಇತರೆ ತಾರಾಬಳಗದ ಈ ತಂಡದಲ್ಲಿ ಪರಶುರಾಮನಾಗಿ ಪುನೀತ್ ಇಸ್ಸಾರ್, ಬಾಲಿಯಾಗಿ ಮನೋಜ್ ತಿವಾರಿ, ಕೆವತ್ ಆಗಿ ರವಿ ಕಿಶನ್ ಮತ್ತು ಹನುಮಂತನಾಗಿ ರಾಜೇಶ್ ಪುರಿ ಇದ್ದಾರೆ. ಉಳಿದಂತೆ ಮನೀಷ್ ಶರ್ಮಾ ಮೂರನೇ ಬಾರಿಗೆ ರಾವಣನ ಪಾತ್ರವನ್ನು ನಿರ್ವಹಿಸಿದರೆ, ರಾಹುಲ್ ಗುಚ್ಚರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಮೇಘನಾಥ ಪಾತ್ರವನ್ನು ರಾಜಾ ಮುರಾದ್, ರಾಜಾ ಜನಕನ ಪಾತ್ರವನ್ನು ಅವತಾರ್ ಗಿಲ್, ವಿಭೀಷಣ ಪಾತ್ರವನ್ನು ರಾಕೇಶ್ ಬೇಡಿ ಮತ್ತು ಲಕ್ಷ್ಮಣ್ ಪಾತ್ರವನ್ನು ರಾಜನ್ ಮೋದಿ ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಅಂತೆಯೇ ಮುಂದಿನ ಮಿಸ್ ಯೂನಿವರ್ಸ್ 2025 ಸ್ಪರ್ಧೆಯು ನವೆಂಬರ್ 21 ರಂದು ಥೈಲ್ಯಾಂಡ್‌ನಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Operation Sindoor ಬಳಿಕ ಪಂಜಾಬ್ ಅಸ್ಥಿರಗೊಳಿಸಲು ಪಾಕ್ proxy war; 'ಸಂಘಟಿತ ಅಪರಾಧ ಬೇರುಸಹಿತ ಕಿತ್ತೊಗೆಯುತ್ತೇವೆ'!

UP: 2025 ರಲ್ಲಿ 2,500 ಕ್ಕೂ ಹೆಚ್ಚು ಎನ್‌ಕೌಂಟರ್‌; 48 ಸಾವು, 8 ವರ್ಷಗಳಲ್ಲಿ ಅತಿ ಹೆಚ್ಚು

'CEC ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ'; SIR ಕುರಿತು ನಮ್ಮ ಕಳವಳ ಪರಿಹರಿಸಿಲ್ಲ: ಅಭಿಷೇಕ್ ಬ್ಯಾನರ್ಜಿ

2012 ಪುಣೆ ಬಾಂಬ್ ಸ್ಫೋಟ ಆರೋಪಿ 'ಅನಾಮಿಕ'ರ ಗುಂಡೇಟಿಗೆ ಬಲಿ!

ಕೊಯಮತ್ತೂರು: ತಮಿಳು ಮಾತನಾಡದ್ದಕ್ಕೆ ವಲಸೆ ಕಾರ್ಮಿಕನಿಗೆ ಚಾಕು ಇರಿತ; ಆರೋಪಿಗಳಿಗೆ ಹುಡುಕಾಟ

SCROLL FOR NEXT