ನನ್ನ ಒಪ್ಪಿಗೆಯಿಲ್ಲದಿದ್ದರೂ ಚಿತ್ರವೊಂದರಲ್ಲಿ ಅಶ್ಲೀಲ ದೃಶ್ಯದಲ್ಲಿ ನಟಿಸುವಂತೆ ಒತ್ತಾಯಿಸಲಾಗಿತ್ತು ಎಂಬ ಅಸಲಿ ಸಂಗತಿಯೊಂದನ್ನು ಶ್ರೀರಾಮ ಚಂದ್ರ ಬೆಡಗಿ ಮೋಹಿನಿ ಬಿಚ್ಚಿಟ್ಟಿದ್ದಾರೆ.
ಕಲ್ಯಾಣ ಮಂಟಪ ಚಿತ್ರದಿಂದ 1992 ರಲ್ಲಿ ಕನ್ನಡ ಸಿನಿರಂಗ ಪ್ರವೇಶಿಸಿದ ನಟಿ ಮೋಹಿನಿ, ಶ್ರೀರಾಮ ಚಂದ್ರ, ಗಡಿಬಿಡಿ ಅಳಿಯ, ಗಡಿಬಿಡಿ ಕೃಷ್ಣ, ಲಾಲಿ,ನಿಶ್ಯಬ್ದ, ಕುಬೇರ, ಖಳನಾಯಕ ಸೇರಿದಂತೆ ಹಲವಾರು ಸೂಪರ್ ಹಿಟ್ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಅಂದಹಾಗೆ, ನಿರ್ದೇಶಕ ಆರ್‌ಕೆ ಸೆಲ್ವಮಣಿ ಅವರ 'ಕಣ್ಮಣಿ' ಚಿತ್ರದಲ್ಲಿ ಒಪ್ಪಿಗೆಯಿಲ್ಲದೆ ಅಶ್ಲೀಲ ದೃಶ್ಯದಲ್ಲಿ ನಟಿಸುವಂತೆ ಒತ್ತಾಯಿಸಲಾಗಿತ್ತು ಎಂದು ಮೋಹಿನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಅಂತಹ ದೃಶ್ಯ ಮಾಡಲು ನಿರಾಕರಿಸಿ, ಅಳುತ್ತಿದ್ದರೂ ಸಹ, ನಿರ್ಮಾಣಕ್ಕೆ ತೊಂದರೆಯಾಗದಂತೆ ಕೊನೆಗೆ ಒಪ್ಪಿಕೊಳ್ಳಬೇಕಾಯಿತು ಎಂದಿದ್ದಾರೆ.
ಈಜುಡುಗೆ ಸಿಕ್ವೇನ್ಸ್ ಮಾಡಲು ನಿರಾಕರಿಸಿದ್ದೆ. ಆದರೆ ಆ ದೃಶ್ಯದಲ್ಲಿ ಅಭಿನಯಿಸುವಂತೆ ಒತ್ತಾಯಿಸಲಾಯಿತು. ನಿರ್ದೇಶಕ ಆರ್‌ಕೆ ಸೆಲ್ವಮಣಿ ಈ ಸ್ವಿಮ್ಮಿಂಗ್ ಸೂಟ್ ಸೀಕ್ವೆನ್ಸ್ ಯೋಜಿಸಿದ್ದರು. ಆದರೆ ಆ ಪಾತ್ರ ಮಾಡಲು ನನಗೆ ಇಷ್ಟವಿರಲಿಲ್ಲ. ಅಳುತ್ತಾ ಅದನ್ನು ಮಾಡಲು ನಿರಾಕರಿಸಿದ್ದೆ. ಹೀಗಾಗಿ ಅರ್ಧ ದಿನ ಶೂಟಿಂಗ್ ನಿಲ್ಲಿಸಲಾಗಿತ್ತು ಎಂದು ಅವರು ಅವಲ್ ವಿಕಟನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನನಗೆ ಈಜಲು ಬರಲ್ಲ ಅಂತಾ ಹೇಳಲು ಪ್ರಯತ್ನಿಸಿದ್ದೆ. ಪುರುಷರ ಎದುರು ಅರೆಬರೆ ಉಡುಪು ಧರಿಸುವ ಬಗ್ಗೆ ಕೇಳುವುದು ಹೇಗೆ? ಆಗ, ಮಹಿಳಾ ಮಾರ್ಗದರ್ಶಕರು ಇರುತ್ತಿರಲಿಲ್ಲ. ಹಾಗಾಗೀ ಅದನ್ನು ಮಾಡುವುದನ್ನು ಕಲ್ಪಿಸಿಕೊಳ್ಳಲು ಆಗುತ್ತಿರಲಿಲ್ಲ ಎಂದಿದ್ದಾರೆ.
‘ಉದಲ್ ತಝುವ’ಸೀಕ್ವೆನ್ಸ್ ನಲ್ಲಿಯೂ ಆ ರೀತಿ ಮಾಡುವಂತೆ ಬಲವಂತ ಮಾಡಲಾಯಿತು. ಅರ್ಧ ದಿನ ಕೆಲಸ ಮಾಡಿದೆ. ಬಳಿಕ ಅದೇ ದೃಶ್ಯವನ್ನು ಊಟಿಯಲ್ಲಿ ಚಿತ್ರೀಕರಿಸಬೇಕು ಎಂದು ಹೇಳಿದಾಗ ನಿರಾಕರಿಸಿದೆ. ಶೂಟಿಂಗ್ ಮುಂದುವರಿಸುವುದಿಲ್ಲ ಎಂದು ಹೇಳಿದಾಗ ನಾನು "ಅದು ನಿಮ್ಮ ಸಮಸ್ಯೆ, ನನ್ನದಲ್ಲ ಹೇಳಿ ಹೊರಬಂದೆ. ಹಾಗಾಗಿ ಕಣ್ಮಣಿಯಲ್ಲಿ ಮಾತ್ರ ನನ್ನ ಒಪ್ಪಿಗೆಯಿಲ್ಲದೆ ಅತಿಯಾಗಿ ಗ್ಲಾಮರಸ್ ಆಗಿ ತೋರಿಸಲಾಗಿತ್ತು ಎಂದು ಹೇಳಿದರು. ಮೋಹಿನಿ ಕೊನೆಯದಾಗಿ 2011 ರ ಮಲಯಾಳಂ ಸಿನಿಮಾ 'ಕಲೆಕ್ಟರ್' ನಲ್ಲಿ ಕಾಣಿಸಿಕೊಂಡಿದ್ದರು.