'ಕಾಂತಾರ ಚಾಪ್ಟರ್ 1' ಬಿಡುಗಡೆಗೂ ಮುನ್ನವೇ ಸಾಕಷ್ಟು ಬ್ಯುಸಿನೆಸ್ ಮಾಡುವ ದೇಶದ ಬಾಕ್ಸ್ ಆಫೀಸ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. 2022 ರ ಬ್ಲಾಕ್‌ಬಸ್ಟರ್ 'ಕಾಂತಾರ'ದ ಬಹು ನಿರೀಕ್ಷಿತ ಪ್ರಿಕ್ವೇಲ್ ನನ್ನು ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ಬಂಡವಾಳ ಹೂಡಿರುವ ಈ ಚಿತ್ರ, ಅಕ್ಟೋಬರ್ 2, 2025 ರಂದು ಗಾಂಧಿ ಜಯಂತಿ ದಿನದಂದು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ.
ಬಿಡುಗಡೆಗೂ ಮುನ್ನವೇ ಬ್ಯುಸಿನೆಸ್ ವಲಯದಲ್ಲಿ ಸಾಕಷ್ಟು ದುಡ್ಡು ಮಾಡುತ್ತಿರುವ ಕಾಂತಾರಾ ಚಾಪ್ಟರ್ 1 ಡಿಜಿಟಲ್ ರೈಟ್ಸ್ ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video)ಪಾಲಾಗಿದೆ. ಬರೋಬ್ಬರಿ ರೂ.125 ಕೋಟಿಗೆ ಹಕ್ಕು ಖರೀದಿಸಿರುವುದಾಗಿ ಹಲವಾರು ಮಾಧ್ಯಮ ವರದಿಗಳು ದೃಢಪಡಿಸಿವೆ.
ಇದು ಅತಿದೊಡ್ಡ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಮಾರಾಟವಾದ ಎರಡನೇ ಕನ್ನಡ ಚಿತ್ರವಾಗಿದೆ. KGF ಚಾಪ್ಟರ್ 2 ಮೊದಲ ಚಿತ್ರವಾಗಿದೆ. ಇದು ಕೂಡಾ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಚಿತ್ರವಾಗಿದೆ.
ಯಾವಾಗ ಟ್ರೈಲರ್ ಬಿಡುಗಡೆ: ಹಾಲಿವುಡ್ ರೇಂಜ್ ನಂತೆ ಚಿತ್ರದ ತಾಂತ್ರಿಕ ಕೆಲಸ ನಡೆಯುತ್ತಿದ್ದು, ಜಗತ್ತಿನಾದ್ಯಂತ ಸುಮಾರು 20 ವಿಷುಯೆಲ್ ಎಫೆಕ್ಟ್ (visual effects) ಕಂಪನಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದೇ ಸೆಪ್ಟೆಂಬರ್ 20 ರಂದು ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಲು ಚಿತ್ರ ತಂಡ ಯೋಜಿಸಿದೆ.