ನಟಿ ರಮ್ಯಾ ಹಾಗೂ ನಟ ವಿನಯ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

ನಿಮ್ಮ ಕಲ್ಪನೆಗೂ ಒಂದು ಮಿತಿ ಇರಲಿ: ವಿನಯ್ ಜತೆ ಸುತ್ತಾಟ ಎಂದವರಿಗೆ ರಮ್ಯಾ ತಿರುಗೇಟು

ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ಕೆಲವರು ನಟಿ ರಮ್ಯಾ ಹಾಗೂ ವಿನಯ್ ಅವರ ಫೋಟೋಗಳನ್ನು ಟ್ರೋಲ್ ಮಾಡಿದ್ದರು.

ಬೆಂಗಳೂರು: ಮಾಜಿ ಸಂಸದೆ ಹಾಗೂ ಮೋಹಕತಾರೆ ನಟಿ ರಮ್ಯಾ ಅವರು ಅಮೆರಿಕದಲ್ಲಿ ನಡೆಯುವ ನಾವಿಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದಾರೆ. ಈ ಬಾರಿಯ ನಾವಿಕ ಸಮಾರಂಭಕ್ಕೆ ರಮ್ಯಾ ಜೊತೆ ನಟ ವಿನಯ್ ರಾಜ್‌ಕುಮಾರ್ ಸಹ ಹೋಗಿದ್ದಾರೆ. ವಿಶೇಷ ಅಂದ್ರೆ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ಕೂಡಾ ಇವರ ಜೊತೆಗಿದ್ದಾರೆ.

ಅಮೆರಿಕದಲ್ಲಿರುವ ನಟಿ ರಮ್ಯಾ ಅವರು ಸಮಾರಂಭದ ಬಿಡುವಿನ ವೇಳೆ ಅಮೆರಿಕದ ಬ್ಯೂಟಿಫುಲ್ ಲೊಕೇಶನ್‌ನಲ್ಲಿ ನಟ ವಿನಯ್ ರಾಜ್‌ಕುಮಾರ್ ಹಾಗೂ ವಂದಿತಾ ಜತೆ ಸುತ್ತಾಟ ನಡೆಸಿದ್ದಾರೆ.

ಅಮೆರಿಕದಲ್ಲಿ ಮೂವರೂ ಎಂಜಾಯ್ ಮಾಡ್ತಿರುವ ಫೋಟೋಗಳನ್ನ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿದ್ದು, ಫೋಟೋಗಳ ಜೊತೆಗೆ ಅದಕ್ಕೆ ಕ್ಯಾಪ್ಷನ್ ಹಾಕಿರುವ ರಮ್ಯಾ `ನಾನು ಹಾಗೂ ಬೆಸ್ಟ್ ಕಂಪನಿ’ ಎಂದು ವಿನಯ್ ರಾಜ್‌ಕುಮಾರ್ ಮತ್ತು ವಂದಿತಾ ಪುನೀತ್ ರಾಜ್‌ಕುಮಾರ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ರಮ್ಯಾ ಪೋಸ್ಟ್

ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ಕೆಲವರು ನಟಿ ರಮ್ಯಾ ಹಾಗೂ ವಿನಯ್ ಅವರ ಫೋಟೋಗಳನ್ನು ಟ್ರೋಲ್ ಮಾಡಿದ್ದಾರೆ. ಹಲವರು ಡೇಟಿಂಗ್‌ನಲ್ಲಿ ಇದ್ದಾರೆ ಎಂದು ಬರೆದುಕೊಂಡಿದ್ದರು.

ಇದೀಗ ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿರುವ ರಮ್ಯಾ, "ನೀವು ತುಂಬಾ ತಮಾಷೆ ಮಾಡುತ್ತಿದ್ದೀರಾ.. ವಿನಯ್ ರಾಜ್‌ಕುಮಾರ್ ನನಗೆ ತಮ್ಮನ ತರಹ. ನಿಮ್ಮೆಲ್ಲರ ಕಲ್ಪನೆಗೂ ಒಂದು ಮಿತಿ ಇರಲಿ’’ ಎಂದು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಾಹಸಸಿಂಹ ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ

'ರಷ್ಯಾದ ತೈಲ ಖರೀದಿಯನ್ನು ಭಾರತ ತಕ್ಷಣ ನಿಲ್ಲಿಸಲೇಬೇಕು, ಇಲ್ಲದಿದ್ದರೆ...: ಮತ್ತೆ ಬೆದರಿಕೆ ಹಾಕಿದ ಅಮೆರಿಕ ಸಚಿವ ಲುಟ್ನಿಕ್!

ಟ್ರಂಪ್ ಮಿತ್ರ ಚಾರ್ಲಿ ಕಿರ್ಕ್ ಹತ್ಯೆಗೆ ಬಳಸಿದ್ದ ರೈಫಲ್ ಪತ್ತೆ-ಎಫ್‌ಬಿಐ; 'ಕಾಲೇಜು ವಯಸ್ಸಿನ ಯುವಕನಿಂದ ಕೃತ್ಯ!

Manipur: ಪ್ರಧಾನಿ ಮೋದಿ ಮಣಿಪುರ ಭೇಟಿಗೂ ಮುನ್ನ ಬಿಜೆಪಿ ಸದಸ್ಯರ ಸಾಮೂಹಿಕ ರಾಜೀನಾಮೆ! ಕಾರಣವೇನು?

BCCI ಮುಂದಿನ ಅಧ್ಯಕ್ಷರಾಗಿ ಸಚಿನ್ ತೆಂಡೂಲ್ಕರ್?

SCROLL FOR NEXT