ಟೊವಿನೊ ಥಾಮಸ್ 
ಸಿನಿಮಾ ಸುದ್ದಿ

ಇಡೀ ವರ್ಷವನ್ನು ಒಂದೇ ಸಿನಿಮಾಗೆ ಮೀಸಲಿಡಲು ಸಾಧ್ಯವಿಲ್ಲ; ಪ್ರಶಾಂತ್ ನೀಲ್ 'ಡ್ಯ್ರಾಗನ್' ಒಪ್ಪಿಕೊಳ್ಳಲಿಲ್ಲ; ಟೊವಿನೊ ಥಾಮಸ್

'ಡ್ರ್ಯಾಗನ್' ಚಿತ್ರದಲ್ಲಿ ಯಾಕೆ ನಟಿಸಲಿಲ್ಲ ಎನ್ನುವ ಪ್ರಶ್ನೆಗೆ ಡೇಟ್ಸ್ ಸಮಸ್ಯೆಯಿಂದ ಒಪ್ಪಲಿಲ್ಲ ಎಂದು ನಟ ಟೊವಿನೊ ಥಾಮಸ್ ಹೇಳಿದ್ದಾರೆ. "ನಾನು ಒಮ್ಮೆಲೆ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಿಲ್ಲ

ಸಲಾರ್ ಬಳಿಕ ಜ್ಯೂ. ಎನ್‌ಟಿಆರ್ ನಟನೆಯ 'ಡ್ರ್ಯಾಗನ್' ಚಿತ್ರಕ್ಕೆ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಿದೆ. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಜೂನ್ 25ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಆದರೆ ಸದ್ಯಕ್ಕೆ ಆ ಪರಿಸ್ಥಿತಿ ಕಾಣ್ತಿಲ್ಲ. ಅದೇ ದಿನ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ತೆರೆಗೆ ಬರಲಿದೆ. ತಾರಕ್ ಹಾಗೂ ಪ್ರಶಾಂತ್ ನೀಲ್ ಜೋಡಿಯ ಚಿತ್ರದಲ್ಲಿ ನಟಿಸುವಂತೆ ಕೇಳಿದ್ರು. ಆದರೆ ನಾನೇ ಒಪ್ಪಲಿಲ್ಲ ಎಂದು ಟೊವಿನೊ ಥಾಮಸ್ ಹೇಳಿದ್ದಾರೆ. ಸದ್ಯ ಅವರು ನಟಿಸಿರುವ 'ಪಳ್ಳಿ ಚಟ್ಟಂಬಿ' ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಚಿತ್ರವನ್ನು ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆ ಮಾಡಲು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ಡ್ರ್ಯಾಗನ್' ಚಿತ್ರದಲ್ಲಿ ಯಾಕೆ ನಟಿಸಲಿಲ್ಲ ಎನ್ನುವ ಪ್ರಶ್ನೆಗೆ ಡೇಟ್ಸ್ ಸಮಸ್ಯೆಯಿಂದ ಒಪ್ಪಲಿಲ್ಲ ಎಂದು ನಟ ಟೊವಿನೊ ಥಾಮಸ್ ಹೇಳಿದ್ದಾರೆ. "ನಾನು ಒಮ್ಮೆಲೆ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಮಲಯಾಳಂನಲ್ಲಿ, ನಾವು ಒಂದು ಚಿತ್ರವನ್ನು ಒಂದೇ ಶೆಡ್ಯೂಲ್‌ನಲ್ಲಿ ಪೂರ್ಣಗೊಳಿಸುತ್ತೇವೆ.

ಆದರೆ ತೆಲುಗಿನಲ್ಲಿ, ಒಂದು ಚಿತ್ರವನ್ನು ಪೂರ್ಣಗೊಳಿಸಲು ಸುಮಾರು ಒಂದು ವರ್ಷ ಆಗುತ್ತೆ. ನಾನು ಯಾವುದೇ ಚಿತ್ರಕ್ಕೆ ಮೂರು ತಿಂಗಳು ಕಾಲ್‌ಶೀಟ್ ಕೊಡ್ತೀನಿ. ಇಡೀ ವರ್ಷ ಮೀಸಲಿಡಲು ಸಾಧ್ಯವಿಲ್ಲ. ನಾನು ಮಾಡಬಾರದು ಎಂದಲ್ಲ. ಆದರೆ ಇದರಿಂದ ನನ್ನ ಇತರ ಚಿತ್ರಗಳಿಗೆ ಅಡ್ಡಿಯಾಗುತ್ತದೆ" ಎಂದು ವಿವರಿಸಿದ್ದಾರೆ.

‘ಡ್ರ್ಯಾಗನ್’ ಸಿನಿಮಾ ಶೂಟಿಂಗ್ ಶುರುವಾಗಿ ಬಹು ಸಮಯ ಕಳೆದಿದೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಾಕಷ್ಟು ಸಮಯ ತೆಗೆದುಕೊಂಡು ಚಿತ್ರದ ಶೂಟ್ ಮಾಡುತ್ತಿದ್ದಾರೆ. ಹೀಗಾಗಿ, ಟುವಿನೋ ಅವರು ಈ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ.

ನಾವು ಮಲಯಾಳಂನಲ್ಲಿ ಭಿನ್ನವಾಗಿ ಕೆಲಸ ಮಾಡುತ್ತೇವೆ. ತೆಲುಗಿಗಿಂತ ನಾವು ಸಿನಿಮಾ ಶೂಟಿಂಗ್​​​ನ ಬೇಗನೆ ಮುಗಿಸುತ್ತೇವೆ. ನಾವು ವರ್ಷಕ್ಕೆ 4-5 ಚಲನಚಿತ್ರಗಳನ್ನು ಮಾಡುತ್ತೇವೆ. ಡ್ರ್ಯಾಗನ್‌ಗೆ ಡೇಟ್ಸ್ ನೀಡುವುದು 4-5 ಚಲನಚಿತ್ರಗಳಿಗೆ ತೊಂದರೆ ಮಾಡಿದಂತೆ’ ಎಂದಿದ್ದಾರೆ ಅವರು.

ಹಲವು ಹಿಟ್ ಸಿನಿಮಾಗಳಲ್ಲಿ ಟೊವಿನೊ ಥಾಮಸ್ ನಟಿಸಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ಕೊಟ್ಬಿಡಿ; ಇರಾನ್ ಗೆ ಮತ್ತೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಯುರೇನಿಯಂ ಹಸ್ತಾಂತರ, ಪರಮಾಣು ನಿರ್ಬಂಧ: 5 ಷರತ್ತುಗಳನ್ನು ಇರಾನ್ ಮುಂದಿಟ್ಟ ಅಮೆರಿಕ!

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ; ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

IPL 2026: RCB vs PBKS ಪಂದ್ಯದಲ್ಲಿ ಎರಡು ದೊಡ್ಡ ದಾಖಲೆ ನಿರ್ಮಿಸಿದ Virat Kohli

IPL 2026: ಕನ್ನಡಿಗ KL Rahul, ಪೊರೆಲ್ ಭರ್ಜರಿ ಬ್ಯಾಟಿಂಗ್, RR ವಿರುದ್ಧ DCಗೆ 5 ವಿಕೆಟ್ ಭರ್ಜರಿ ಜಯ, ಪ್ಲೇಆಫ್ ಕನಸಿಗೆ ಭಾರಿ ಪೆಟ್ಟು!

SCROLL FOR NEXT