ಜಂಗಲ್ ಬೂಗಿ ರಿಯಾಲಿಟಿ ಶೋ ತಂಡ 
ಸಿನಿಮಾ ಸುದ್ದಿ

ಪಂಚ ಭಾಷೆಯಲ್ಲಿ ಬರ್ತಿದೆ 'ಜಂಗಲ್ ಬೂಗಿ' ರಿಯಾಲಿಟಿ ಶೋ: 60 ದಿನ ಕಾಡಿನಲ್ಲಿ ಪಯಣ, ಗೆದ್ರೆ ಸಿಗುತ್ತೇ 80 ಲಕ್ಷ ರೂ ಹಣ!

ಈ ವಿಭಿನ್ನ ಬಗೆಯ ರಿಯಾಲಿಟಿ ಶೋ EIPK ಪ್ರೊಡಕ್ಷನ್ ಹೌಸ್ ನಡಿ ವಿನೋದ್ ಪಾರ್ಥ ಸಾರಥಿ ನಿರ್ಮಾಣ ಮಾಡುತ್ತಿದ್ದಾರೆ. ಯಶೋಧರ ವಿಕ್ರಮ್ ಈ ಶೋನ ಸಾರಥಿ ಅಂದರೆ ನಿರ್ದೇಶಕರು.

ಜಂಗಲ್ ಬೂಗಿ..ಇದು ಹೊಸ ರಿಯಾಲಿಟಿ ಶೋ..ಟೈಟಲ್ ಹೇಳುವಂತೆ ಕಾಡಿನಲ್ಲಿ ನಡೆಯುವ ಶೋ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ. ಒಂದು ಟೀಂನಲ್ಲಿ 12 ಜನ ಭಾಗಿಯಾಗಲಿದ್ದು, ಇವರು ಕಾಡಿನಲ್ಲಿ 60 ದಿನ ಕಳೆಯಬೇಕು.

ಈ ವಿಭಿನ್ನ ಬಗೆಯ ರಿಯಾಲಿಟಿ ಶೋ EIPK ಪ್ರೊಡಕ್ಷನ್ ಹೌಸ್ ನಡಿ ವಿನೋದ್ ಪಾರ್ಥ ಸಾರಥಿ ನಿರ್ಮಾಣ ಮಾಡುತ್ತಿದ್ದಾರೆ. ಯಶೋಧರ ವಿಕ್ರಮ್ ಈ ಶೋನ ಸಾರಥಿ ಅಂದರೆ ನಿರ್ದೇಶಕರು. ಪಾಲ್ಸ್ ನಾಗ ಹಾಗೂ ಸಂದೀಪ್ ತೀರ್ಥಹಳ್ಳಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಾಥ್ ಕೊಡುತ್ತಿದ್ದಾರೆ. ಆಡಿ ನಾಗಾರ್ಜುನ್ ಕ್ಯಾಮೆರಾ ಹಿಡಿಯಲಿದ್ದಾರೆ.

ಎಲ್ಲಿ ಯಾವಾಗ ಶೋ ಪ್ರಸಾರ? ಜಂಗಲ್ ಬೂಗಿ ರಿಯಾಲಿಟಿ ಶೋ ನ್ನು zeeಕನ್ನಡ ಪ್ರಸಾರ ಮಾಡಲಿದೆ. ಇದೇ ತಿಂಗಳ 15ರಿಂದ ಆಡಿಷನ್ ಶುರುವಾಗಲಿದ್ದು, ಮೇ ಕೊನೆಯಲ್ಲಿ ಶೂಟಿಂಗ್ ಆರಂಭವಾಗಲಿದೆ. ಜೂನ್ 10 ರಿಂದ zeeನಲ್ಲಿ ಶೋ ಪ್ರಸಾರವಾಗಲಿದೆ.

ಯಾರು ಭಾಗಿಯಾಗಬಹುದು? ಜಂಗಲ್ ಬೂಗಿ ರಿಯಾಲಿಟಿ ಶೋನಲ್ಲಿ ಸಾಮಾನ್ಯರು ಭಾಗಿಯಾಗುವ ಅವಕಾಶವಿದೆ. ಆದರೆ ವಯಸ್ಸು 18 ರಿಂದ 28 ಮೀರಬಾರದು. ಜಂಗಲ್ ಬೂಗಿ ಶೋ ಗೆದ್ದವರಿಗೆ 80 ಲಕ್ಷ ಹಣ ಸಿಗಲಿದೆ.

ಮೆಂಟರ್ ಯಾರು ಯಾರು? ಜಂಗಲ್ ಬೂಗಿಯ 5 ತಂಡಗಳಲ್ಲಿ ಕನ್ನಡ ಪ್ಯಾಂಥರ್ಸ್ ತಂಡಕ್ಕೆ ಕನ್ನಡದ ಖ್ಯಾತ ನಾಯಕ ರಮೇಶ್ ಅರವಿಂದ್ ರವರು ಮೆಂಟರ್ ಆಗಿರುತ್ತಾರೆ. ತೆಲುಗು ಲಯನ್ಸ್ ಗೆ ತೆಲುಗಿನ, ಮೇಕಾ ಶ್ರೀಕಾಂತ್, ತಮಿಳು ಟೈಗರ್ಸ್ ಗೆ ಅರ್ಜುನ್ ಸರ್ಜಾ, ಹಿಂದಿ ಹಾಕ್ಸ್ ಗೆ ಸೋನು ಸೂದ್ ಹಾಗೂ ಮಳಯಾಳಂ ಮೇವರಿಕ್ಸ್ ಗೆ ದುಲ್ಕರ್ ಸಲ್ಮಾನ್ ಅವರು ಮೆಂಟರ್ ಆಗಿರುತ್ತಾರೆ

ನಿಮಗೂ ಜಂಗಲ್ ಬೂಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಆಸಕ್ತಿ ಇದ್ರೆ ಈ ಕೆಳಕಂಡ Email ID ಸಂಪರ್ಕಿಸಿ. Jungleboogie931@gmail.com

ಕ್ಯಾಚ್ & ವಾಚ್ ಒಟಿಟಿ ಅನಾವರಣ: EIPK ಪ್ರೊಡಕ್ಷನ್ ಹೌಸ್ ನಡಿ VKZ ಎಂಟರ್ಟೈನ್ಮೆಂಟ್ ವತಿಯಿಂದ ವಿನೋದ್ ಪಾರ್ಥ ಸಾರಥಿ ಹೊಸ ರಿಯಾಲಿಟಿ ಶೋ ಶುರು‌ ಮಾಡುವುದರ ಜೊತೆಗೆ ಹೊಸದೊಂದು ಒಟಿಟಿ ಫ್ಲಾಟ್ ಫಾರ್ಮ್ ಆರಂಭಿಸಿದ್ದಾರೆ. ಅದಕ್ಕೆ ಕ್ಯಾಚ್ ಅಂಡ್ ವಾಚ್ ಎಂದು ಹೆಸರಿಡಲಾಗಿದ್ದು, ಆಗಸ್ಟ್ ನಿಂದ ಪ್ರೇಕ್ಷಕರ ವೀಕ್ಷಣೆಗೆ ಲಭ್ಯವಾಗಲಿದೆ. ಕನ್ನಡ, ತೆಲುಗು, ತಮಿಳು , ಹಿಂದಿ ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳು ಈ ಒಟಿಟಿಯಲ್ಲಿ ನೋಡಲು ಲಭ್ಯ ಇರಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತೀ ಹೆಚ್ಚು!

Yash’s Toxic: ನೆಗೆಟಿವ್ ರಿವ್ಯೂ ನಡುವೆ 'ರೇಟಿಂಗ್' ತೆಗೆದುಹಾಕಿದ ಬುಕ್ ಮೈ ಶೋ; ನಿರೀಕ್ಷಿತ ಕಲೆಕ್ಷನ್ ಇಲ್ವಾ? ನೆಟ್ಟಿಗರಿಂದ ತರಾಟೆ!

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್