ಕೆ.ಎಸ್.ಚಿತ್ರಾ 
ಸಿನಿಮಾ ಸುದ್ದಿ

AI ನಿಂದ ಉಪಯೋಗವೂ ಇದೆ, ದುರುಪಯೋಗವೂ ಇದೆ: ಭವಿಷ್ಯದ ಬಗ್ಗೆ ಗಾಯಕಿ ಚಿತ್ರಾ ಕಳವಳ

40 ವರ್ಷಗಳ ಸಂಗೀತ ಜೀವನದಲ್ಲಿ 18,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರು, ಇಂದಿನ ಸಂಗೀತ ಕ್ಷೇತ್ರದಲ್ಲಿ ತಂತ್ರಜ್ಞಾನ ಹೆಚ್ಚುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಭಾರತೀಯ ಸಂಗೀತ ಲೋಕದ ಖ್ಯಾತ ಗಾಯಕಿ, ಪದ್ಮಭೂಷಣ ಪುರಸ್ಕೃತ ಕೆ.ಎಸ್.ಚಿತ್ರಾ ಅವರು ಇತ್ತೀಚೆಗೆ ತಂತ್ರಜ್ಞಾನ, ಸಂಗೀತದ ಬದಲಾವಣೆಗಳು ಮತ್ತು ಎಐ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಫೀನಿಕ್ಸ್ ಮಾರ್ಕೆಟ್‌ಸಿಟಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿತ್ರಾ, ತಮ್ಮ ದೀರ್ಘ ಸಂಗೀತ ಪ್ರಯಾಣದ ನೆನಪುಗಳನ್ನು ಹಂಚಿಕೊಂಡರು.

40 ವರ್ಷಗಳ ಸಂಗೀತ ಜೀವನದಲ್ಲಿ 18,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರು, ಇಂದಿನ ಸಂಗೀತದಲ್ಲಿ ತಂತ್ರಜ್ಞಾನ ಪಾತ್ರ ಹೆಚ್ಚುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಇತ್ತೀಚೆಗೆ ತಮ್ಮ ಪ್ರಸಿದ್ಧ ಹಾಡು ‘ಪೊನ್ ಕಸವು’ ಅನ್ನು ಪಾಪ್ ಸೂಪರ್‌ಸ್ಟಾರ್ ಜಸ್ಟಿನ್ ಬೈಬರ್‌ ಅವರ ‘ಸ್ಟೇ’ ಹಾಡಿನೊಂದಿಗೆ ಮಿಕ್ಸ್ ಮಾಡಿರುವ ಬಗ್ಗೆ ಮಾತನಾಡಿದ ಚಿತ್ರಾ ಅವರು, “ನಾನು ಅದನ್ನು ನಿರೀಕ್ಷಿಸಲಿಲ್ಲ. ಜೆನ್ ಝಡ್‌ ಯುವಕರು ಈಗ ‘ಪೊನ್ ಕಸವು’ ಹಾಡನ್ನು ಹಾಡುತ್ತಿದ್ದಾರೆ. ಈ ಮಿಕ್ಸ್ ಮೂಲಕ ಹಾಡಿಗೆ ಹೊಸ ಜೀವ ಸಿಕ್ಕಿದೆ” ಎಂದು ಸಂತೋಷ ವ್ಯಕ್ತಪಡಿಸಿದರು. ಇದೇ ವೇಳೆ ತಾವು ಬೈಬರ್‌ ಅವರ ಅಭಿಮಾನಿಯಾಗಿರುವುದಾಗಿಯೂ ಹೇಳಿದರು.

ಹೊಸ ತಲೆಮಾರಿನ ಪ್ರತಿಭೆಗಳ ಬಗ್ಗೆ ಮಾತನಾಡಿ, ರಿಯಾಲಿಟಿ ಶೋಗಳ ಮೂಲಕ ಉತ್ತಮ ಗಾಯಕರನ್ನು ನೋಡುತ್ತಿದ್ದೇನೆ. ನನಗೆ ವಯಸ್ಸಾಗುತ್ತಿದ್ದು, ಸಾಧ್ಯವಾದಾಗಲೆಲ್ಲಾ ನಾನು ಹೊಸ ಪ್ರತಿಭೆಗಳನ್ನು ನನ್ನ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತೇನೆ. ನಾನು ಅವರಿಂದ ಶಕ್ತಿಯನ್ನು ಪಡೆಯುತ್ತೇನೆಂದು ತಿಳಿಸಿದರು.

ಬಳಿಕ ತಮ್ಮ ಸಂಗೀತ ಬದುಕಿನ ಆರಂಭದ ದಿನಗಳನ್ನು ಸ್ಮರಿಸಿದ ಅವರು, ತಮ್ಮ ತಂದೆಯೇ ಮೊದಲ ಗುರು ಎಂದು ಹೇಳಿದರು.

ಡಾ. ಕೆ.ಜೆ. ಯೇಸುದಾಸ್, ಎಸ್‌ಪಿಬಿ (ಎಸ್‌ಪಿ ಬಾಲಸುಬ್ರಹ್ಮಣ್ಯಂ), ಹರಿಹರನ್ ಮತ್ತು ಜಾನಕಿ ಅವರ ಮಾರ್ಗದರ್ಶನ ತಮ್ಮ ಮೇಲೆ ದೊಡ್ಡ ಪ್ರಭಾವ ಬೀರಿತು ಎಂದು ಹೇಳಿದರು. “ನಾನು ಅವರ ಮಗಳಂತೆ ಇದ್ದೇನೆ, ಅದೇ ನನ್ನ ದೊಡ್ಡ ಭಾಗ್ಯ” ಎಂದು ಹೇಳಿದರು.

ಸಂಗೀತ ಕ್ಷೇತ್ರದಲ್ಲಿ ತಂತ್ರಜ್ಞಾನದ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು, “ಹಿಂದೆ ಗಾಯಕರು ಒಂದೇ ಮೈಕ್‌ನಲ್ಲಿ ಹಾಡುತ್ತಿದ್ದರು. ಶಿಸ್ತು ಮುಖ್ಯವಾಗಿತ್ತು. ಈಗ ತಂತ್ರಜ್ಞಾನ ಸಹಾಯವಾಗುತ್ತಿದೆ, ಆದರೆ. ಅದನ್ನು ಸರಿಯಾಗಿ ಬಳಸಬೇಕು” ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ಸಂಗೀತ ಪ್ರಕ್ರಿಯೆಯ ಬದಲಾವಣೆಯ ಬಗ್ಗೆ ಮಾತನಾಡಿ, ಹಿಂದಿನ ಕಾಲದಲ್ಲಿ ಗಾಯಕನಿಗೆ ಅನುಗುಣವಾಗಿ ಹಾಡು ರಚಿಸಲಾಗುತ್ತಿತ್ತು. ಆದರೆ, ಈಗ ಸಂಗೀತ ನಿರ್ದೇಶಕರು ಮೊದಲು ಹಾಡು ರಚಿಸಿ, ನಂತರ ಅದಕ್ಕೆ ಸೂಕ್ತವಾದ ಗಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

AI ಬಗ್ಗೆ ಮಾತನಾಡಿ, ಎಐ ಉತ್ತಮ ಉಪಯೋಗಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರೂ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

AI ಮೂಲಕ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಬಹುದು. ಆದರೆ ಅದನ್ನು ತಪ್ಪಾಗಿ ಬಳಸುವವರೂ ಇದ್ದಾರೆ. ಅದಕ್ಕಾಗಿಯೇ ಭವಿಷ್ಯದ ಬಗ್ಗೆ ಭಯವೂ ಇದೆ” ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran war: ಶಾಂತಿ ಕರಡು ಪ್ರತಿಗೆ ತಿದ್ದುಪಡಿ: ಪರಮಾಣು ಮುಕ್ತ ಇರಾನ್‌ಗೆ ಟ್ರಂಪ್ ಪಟ್ಟು, ಕೊನೆ ಕ್ಷಣದಲ್ಲಿ ಬಿಗ್ ಶಾಕ್ ಕೊಟ್ಟ ಅಮೆರಿಕಾ..!

ರೂ.1,413 ಕೋಟಿ ಆಸ್ತಿ, ರೂ.900 ಕೋಟಿಯ ಮಾಲ್.. ಆದ್ರೆ ನಮ್ಮ ಮುಂದಿನ ಸಿಎಂ ಡಿಕೆಶಿ ಹೆಸರಲ್ಲಿರೋದು ಒಂದೇ ಒಂದು ಹಳೇ ಕ್ವಾಲಿಸ್ ಕಾರ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಅಣ್ವಸ್ತ್ರ ಹೊಂದಲು ಅವಕಾಶವೇ ಇಲ್ಲ, ಶಾಂತಿ ಮಾತುಕತೆ ವಿಫಲವಾದರೆ ದಾಳಿ ಖಚಿತ: ಅಮೆರಿಕಾ ಎಚ್ಚರಿಕೆ

ಸಮಗ್ರತೆ, ಸಮರ್ಪಣೆ ಉದ್ದೇಶದೊಂದಿಗೆ ಕರ್ನಾಟಕ ಜನತೆಗೆ ಸೇವೆ ಸಲ್ಲಿಸಲು ಬದ್ಧ: ಡಿಕೆ ಶಿವಕುಮಾರ್

ದೆಹಲಿಯ ಮೆಹ್ರೌಲಿಯಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ!

SCROLL FOR NEXT