ಡೈಸಿ ಶಾ 
ಸಿನಿಮಾ ಸುದ್ದಿ

ಆ ನಿರ್ದೇಶಕ ನನಗೆ ಕೆಟ್ಟದಾಗಿ ಮುಟ್ಟಿದರು; ಕಹಿ ಅನುಭವ ಬಿಚ್ಚಿಟ್ಟ 'ಭದ್ರ' ನಟಿ ಡೈಸಿ ಶಾ

ಆ ಆಡಿಷನ್ ಮುಂಬೈನಲ್ಲಿ ನಡೆದಿತ್ತು. ಅಲ್ಲಿ ಹಲವಾರು ಇತರ ದೊಡ್ಡ ದೊಡ್ಡ ನಟಿಯರು ಸಹ ಆಡಿಷನ್‌ಗೆ ಬಂದಿದ್ದರು. ಈ ವೇಳೆ ದಕ್ಷಿಣದ ನಿರ್ದೇಶಕರೊಬ್ಬರು ನನಗೆ ಕೆಟ್ಟದಾಗಿ ಮುಟ್ಟಿದರು ಎಂದು ಹೇಳಿದ್ದಾರೆ.

ನವದೆಹಲಿ: ಪ್ರಜ್ವಲ್ ದೇವರಾಜ್ ಅಭಿನಯದ ''ಭದ್ರ'' ಸೇರಿದಂತೆ ಮೂರು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಡೈಸಿ ಶಾ ಅವರು ಇತ್ತೀಚೆಗೆ ತಮಗೆ ಆದ ಅಹಿತಕರ ಕಾಸ್ಟಿಂಗ್ ಕೌಚ್ ಘಟನೆಯ ಬಗ್ಗೆ ಮಾತನಾಡಿದ್ದಾರೆ.

ಆ ಆಡಿಷನ್ ಮುಂಬೈನಲ್ಲಿ ನಡೆದಿತ್ತು. ಅಲ್ಲಿ ಹಲವಾರು ಇತರ ದೊಡ್ಡ ದೊಡ್ಡ ನಟಿಯರು ಸಹ ಆಡಿಷನ್‌ಗೆ ಬಂದಿದ್ದರು. ಈ ವೇಳೆ ದಕ್ಷಿಣದ ನಿರ್ದೇಶಕರೊಬ್ಬರು ನನಗೆ ಕೆಟ್ಟದಾಗಿ ಮುಟ್ಟಿದರು ಎಂದು ಹೇಳಿದ್ದಾರೆ.

ಮುಂಬೈಗೆ ದಕ್ಷಿಣದ ನಿರ್ದೇಶಕರೊಬ್ಬರು ತಮ್ಮ ಚಿತ್ರಕ್ಕೆ ಪಾತ್ರಧಾರಿಗಳನ್ನು ಆಯ್ಕೆ ಮಾಡಲು ಬಂದಿದ್ದರು. ಅವರು ಬರುತ್ತಿರುವ ಹಿನ್ನೆಲೆಯಲ್ಲಿ ನಾವು 6-7 ಹುಡುಗಿಯರು ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಅವರು ಎಲ್ಲರನ್ನೂ ಒಬ್ಬೊಬ್ಬರನ್ನಾಗಿಯೇ ಕರೆದು ವೈಯಕ್ತಿಕವಾಗಿ ಭೇಟಿ ಮಾಡುತ್ತಿದ್ದರು ಎಂದು ''ದಿ ಫ್ರೀ ಪ್ರೆಸ್ ಜರ್ನಲ್''ಗೆ ನೀಡಿದ ಸಂದರ್ಶನದಲ್ಲಿ ಡೈಸಿ ಶಾ ತಿಳಿಸಿದ್ದಾರೆ.

ನನ್ನ ಸರದಿ ಬಂದಾಗ ನಾನು ಹೋದೆ, ಆ ಸಮಯದಲ್ಲಿ ಅವರು ತುಂಬಾ ಅಸಭ್ಯವಾಗಿ ನನ್ನನ್ನು ಮುಟ್ಟಿದರು. ನನ್ನ ಕೈಯನ್ನು ಅವರು ಹಿಡಿದುಕೊಂಡರು ಎಂದು ಹೇಳಿದ್ದಾರೆ.

ಆ ನಿರ್ದೇಶಕರ ವರ್ತನೆ ನನಗೆ ಇಷ್ಟವಾಗಲಿಲ್ಲ. ನನಗೆ ಸಾಮಾನ್ಯವಾಗಿ ಯಾರಾದರೂ ಮುಟ್ಟಿದರೆ ಇಷ್ಟ ಆಗುವುದಿಲ್ಲ. ಇದೇ ಕಾರಣಕ್ಕೆ ನಾನು ಮಸಾಜ್ ಕೂಡ ಮಾಡಿಸಿಕೊಳ್ಳುವುದಿಲ್ಲ. ನನಗೆ ಅವರ ಆ ವರ್ತನೆಯಿಂದ ತುಂಬಾ ಬೇಸರವಾಯ್ತು ಎಂದು ಹೇಳಿದ್ದಾರೆ. ಆದರೆ ಆ ನಿರ್ದೇಶಕ ಯಾರು ಅಂತ ನಟಿ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!