ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ 
ಸಿನಿಮಾ ಸುದ್ದಿ

Vijay-Rashmika's Coorg Honeymoon: ಒಂದು ನೈಟ್ ಗೆ ರೆಸಾರ್ಟ್ ಗೆ ಕೊಟ್ಟಿದ್ದು ಎಷ್ಟು ಲಕ್ಷ ಗೊತ್ತಾ?

ಅಲ್ಲದೇ ಮಂದಣ್ಣ ತಮ್ಮ ಪ್ರೀತಿಪಾತ್ರರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರಿಂದ ಮತ್ತಷ್ಟು ವಿಶೇಷಗೊಳಿಸಿತು ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಫೆಬ್ರವರಿ 26 ರಂದು ಉದಯಪುರದಲ್ಲಿ ವಿವಾಹದ ನಂತರ ಪತಿ ವಿಜಯ್ ದೇವರಕೊಂಡ ಜೊತೆಗೆ ಇತ್ತೀಚಿಗೆ ಭೇಟಿ ನೀಡಿದ್ದ ರಶ್ಮೀಕಾ ಮಂದಣ್ಣ, ಕೂರ್ಗ್‌ನ ಎವೊಲ್ವ್ ಬ್ಯಾಕ್ ರೆಸಾರ್ಟ್‌ ನಲ್ಲಿ ಉಳಿದುಕೊಂಡಿದ್ದರು. ಇಲ್ಲಿಯೇ

ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕೊಡಗು ಸಂಪ್ರದಾಯದಂತೆ ಆರತಕ್ಷತೆ ಕೂಡಾ ನಡೆದಿತ್ತು. ರಶ್ಮಿಕಾ ಸಾಂಪ್ರದಾಯಿಕ ಕೂರ್ಗಿ ಸೀರೆ ಧರಿಸಿ ತಮ್ಮ ಪರಂಪರೆಗೆ ಗೌರವ ಸಲ್ಲಿಸಿದರು. ಬಳಿಕ Evolve Back Resorts, Coorg ತಾರಾ ದಂಪತಿಗೆ ಅತಿಥ್ಯ ನೀಡಿದ ಕುರಿತು ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದೆ.

ತವರಿಗೆ ಮರಳುವಿಕೆ, ಹುಟ್ಟುಹಬ್ಬ ಮತ್ತು ಸುಂದರವಾದ ಹೊಸ ಅಧ್ಯಾಯ. ಪ್ರಸಿದ್ಧ ಭಾರತೀಯ ಸ್ಟಾರ್ ದಂಪತಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಇತ್ತೀಚಿನ ಭೇಟಿಯ ಸಮಯದಲ್ಲಿ ಎವೊಲ್ವ್ ಬ್ಯಾಕ್ ನಲ್ಲಿ ಆತಿಥ್ಯ ವಹಿಸಲು ನಮಗೆ ಸಂತೋಷವಾಯಿತು. ಅಲ್ಲದೇ ಮಂದಣ್ಣ ತಮ್ಮ ಪ್ರೀತಿಪಾತ್ರರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರಿಂದ ಮತ್ತಷ್ಟು ವಿಶೇಷಗೊಳಿಸಿತು ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

"ಹೆಮ್ಮೆಯ ಕೊಡವತಿ ಮಂದಣ್ಣ ತಮ್ಮ ಪತಿಯನ್ನು ತಮ್ಮ ತಾಯ್ನಾಡಿಗೆ ಪರಿಚಯಿಸುವಲ್ಲಿ ಬಹಳ ಸಂತಸಪಟ್ಟರು. ಅವರು ನಮ್ಮೊಂದಿಗೆ ನಿಜವಾಗಿಯೂ ಸ್ಮರಣೀಯ ಸಮಯ ಕಳೆದರು. ಅವರನ್ನು ಮತ್ತೊಮ್ಮೆ ಎವಾಲ್ವ್ ಬ್ಯಾಕ್ ಕೂರ್ಗ್‌ಗೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದೆ.

ಎವಾಲ್ವ್ ಬ್ಯಾಕ್, ಕೂರ್ಗ್ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ 300 ಎಕರೆ ಕಾಫಿ ಮತ್ತು ಮಸಾಲೆ ತೋಟದಲ್ಲಿರುವ ಐಷಾರಾಮಿ ರೆಸಾರ್ಟ್ ಆಗಿದೆ. ಹಿಂದೆ ಆರೆಂಜ್ ಕೌಂಟಿ ಎಂದು ಕರೆಯಲಾಗುತ್ತಿದ್ದ ಈ ರೆಸಾರ್ಟ್ ಪ್ಲಾಂಟೇಶನ್-ಶೈಲಿಯ ಮತ್ತು ಕೊಡವ-ಪ್ರೇರಿತ ವಿಲ್ಲಾ ಸೌಕರ್ಯ ನೀಡುತ್ತದೆ. ಹಲವು ಖಾಸಗಿ ಈಜುಕೊಳಗಳು ಸಹ ಸೇರಿವೆ. ರೆಸಾರ್ಟ್ ಪ್ರಕೃತಿ ಆಧಾರಿತ ವಾಸ್ತವ್ಯ ಮತ್ತು ಪ್ರದೇಶದ ಸಂಸ್ಕೃತಿಗೆ ಸಂಬಂಧಿಸಿದ ಅನುಭವಗಳಿಂದ ಗಮನ ಸೆಳೆಯುತ್ತಿದೆ.

ರೆಸಾರ್ಟ್ ಬಹು ವಸತಿ ಆಯ್ಕೆಗಳನ್ನು ನೀಡುತ್ತದೆ. ಇಲ್ಲಿ ಉಪಹಾರ ಮತ್ತು ಭೋಜನ ಸೇರಿದಂತೆ ಒಂದು ರಾತ್ರಿಗೆ ಇಬ್ಬರು ಅತಿಥಿಗಳಿಗೆ 1,03,000 ರೂ. ಚಾರ್ಜ್ ಮಾಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

Toxic ಬೆನ್ನಲ್ಲೇ ಭಾರೀ ಹೈಪ್ ಕ್ರಿಯೆಟ್ ಮಾಡಿದ್ದ Paradiseಗೆ ತೆಲುಗರಿಂದಲೇ ತರಾಟೆ; ಆದರೂ ಮೊದಲ ದಿನ ದಾಖಲೆ ಕಲೆಕ್ಷನ್!

ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗಿ ಗವಿಸಿದ್ದೇಶ್ವರ ಸ್ವಾಮೀಜಿ ಆಯ್ಕೆ; ಗೊಂದಲಕ್ಕೆ ತೆರೆ

ಬಿಹಾರದಲ್ಲಿ ಜಮುಯಿ ಘಟನೆ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ: ಬಾಲಕಿಯನ್ನು ಹಿಡಿದು ಎಳೆದಾಡಿದ ಕೀಚಕರು; Video