ಚೇತನ್ ಅಹಿಂಸಾ-ಸಾರಾ ಗೋವಿಂದ್ 
ಸಿನಿಮಾ ಸುದ್ದಿ

ಲೇ ಮುಠಾಳ ಅರ್ಥ ಮಾಡ್ಕೋ, ಯೋಗತ್ಯೆ ಇದ್ದವರಿಗೆ ಎಲ್ಲವೂ ಸಿಗುತ್ತೆ: ಚೇತನ್ ಅಹಿಂಸಾ ವಿರುದ್ಧ ಸಾರಾ ಗೋವಿಂದ್ ಆಕ್ರೋಶ!

ವರನಟ ಡಾ. ರಾಜ್​ಕುಮಾರ್ ಸ್ಮಾರಕದ ಬಗ್ಗೆ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಮಾಡಿದ್ದ ಪೋಸ್ಟ್​​ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳು, ರಾಜ್​ಕುಮಾರ್ ಅಭಿಮಾನಿಗಳ ಸಂಘಗಳು ಚೇತನ್ ಅಹಿಂಸ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ

ವರನಟ ಡಾ. ರಾಜ್​ಕುಮಾರ್ ಸ್ಮಾರಕದ ಬಗ್ಗೆ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಮಾಡಿದ್ದ ಪೋಸ್ಟ್​​ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳು, ರಾಜ್​ಕುಮಾರ್ ಅಭಿಮಾನಿಗಳ ಸಂಘಗಳು ಚೇತನ್ ಅಹಿಂಸ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಈಗಾಗಲೇ ದೂರು ಸಹ ನೀಡಿವೆ. ಮತ್ತೊಂದೆಡೆ, ರಾಜ್​ಕುಮಾರ್ ಸಂಘದ ಅಧ್ಯಕ್ಷರಾಗಿದ್ದ ಸಾರಾ ಗೋವಿಂದು ಅವರು ಈ ಬಗ್ಗೆ ಮಾತನಾಡಿದ್ದು, ಚೇತನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಡಾ. ರಾಜ್​ಕುಮಾರ್ ಬಗ್ಗೆ ಆಗಲಿ, ಅವರ ಸಾಧನೆ, ಸೇವೆಯ ಬಗ್ಗೆ ಆತನಿಗೆ ಎಳ್ಳಷ್ಟೂ ಗೊತ್ತಿಲ್ಲ. ಸಾಮಾಜಿಕ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಅವನನ್ನು ಕೂಡಲೇ ಗಡಿಪಾರು ಮಾಡಬೇಕು. ಅವನು ರಾಜ್ಯದಲ್ಲೇ ಇದ್ದರೆ, ಅವನನ್ನು ಬದುಕಲು ಬಿಡಲ್ಲ. ಈ ಬಾರಿ ಜನ, ಅಭಿಮಾನಿಗಳು ಸುಮ್ಮನೆ ಬಿಡಲ್ಲ ಎಂದು ಸಾರಾ ಗೋವಿಂದು ಹೇಳಿದ್ದಾರೆ.

ಇನ್ನು ಕ್ಷಮೆ ಕೇಳುವುದಕ್ಕೂ ಸಹ ಅವನಿಗೆ ಯೋಗ್ಯತೆ ಇಲ್ಲ. ಹಾದಿ ಬೀದಿಯಲ್ಲಿ ಬೇಡಿಕೊಂಡು ತಿಂತಾನೇ? ನೀನು ಮೇರು ನಟರ ಬಗ್ಗೆ ಮಾತನಾಡುತ್ತೀಯ. ನಾವು ಸರ್ಕಾರದ ಮೇಲೆ ಒತ್ತಡ ಹಾಕುತ್ತೀವಿ, ಆತನನ್ನು ಈ ಕೂಡಲೇ ರಾಜ್ಯದಿಂದ ಹೊರಗೆ ಹಾಕಬೇಕು ಎಂದು ಹೇಳಿದರು. ಇಷ್ಟಕ್ಕೆ ಸುಮ್ಮನಾಗದ ಸಾರಾ ಗೋವಿಂದು ಕನ್ನಡ ಹೋರಾಟಗಾರರ ಜೊತೆ ಸೇರಿ ಚೇತನ್ ಅಹಿಂಸಾ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

‘ಪ್ರಜಾಪ್ರಭುತ್ವದ ಕರಾಳ ದಿನ’, 'ತಲೆ ಬಾಗಲ್ಲ, ಯಾರಿಗೂ ಶರಣಾಗಲ್ಲ'; ಮಮತಾ ಬ್ಯಾನರ್ಜಿ ಕೆಂಡಾಮಂಡಲ

ನವಜಾತ ಶಿಶುಗಳಿಗೆ ಒಂದು ಗ್ರಾಂ ಚಿನ್ನದ ಉಂಗುರ ಉಡುಗೊರೆ ಯೋಜನೆ: ಸೆ. 28 ರಂದು ಸಿಎಂ ವಿಜಯ್ ಅಧಿಕೃತವಾಗಿ ಚಾಲನೆ!

ತುಳು ಭಾಷೆಗೆ ಸಿಕ್ತು ಅಧಿಕೃತ ಸ್ಥಾನಮಾನ: ಕರ್ನಾಟಕದ 2ನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ, ಕರಾವಳಿಗೆ ಹೊಸ ಟೂರಿಸಂ ನೀತಿ! Video