ರುಕ್ಷ್ಮಿಣಿ ವಸಂತ್ 
ಸಿನಿಮಾ ಸುದ್ದಿ

Mollywoodಗೆ "ಪುಟ್ಟಿ" ಗ್ರಾಂಡ್ ಎಂಟ್ರಿ; ನಿವೀನ್ ಪೌಲಿಗೆ ಜೋಡಿಯಾದ ಕಾಂತಾರ ಬೆಡಗಿ ರುಕ್ಷ್ಮಿಣಿ ವಸಂತ್

26 ರಂದು ಟಾಕ್ಸಿಕ್ ಚಿತ್ರದ ಮೂಲಕ ಬೆಳ್ಳಿಪರದೆಯ ಮೇಲೆ, ಮತೊಮ್ಮೆ ಮಿಂಚಲು ರುಕ್ಮಿಣಿ ವಸಂತ್ ರೆಡಿಯಾಗಿದ್ದಾರೆ. ಇದರ ನಡುವೆಯೇ ಖ್ಯಾತ ಸ್ಟಾರ್ ನಟ ನಿವಿನ್ ಪೌಲಿ ಅವರ 51ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಅದ್ದೂರಿ ಎಂಟ್ರಿಗೆ ಸಿದ್ಧತೆ ನಡೆಸಿದ್ದಾರೆ.

ಇದೇ 26 ರಂದು ಟಾಕ್ಸಿಕ್ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ, ಮತೊಮ್ಮೆ ಮಿಂಚಲು ಕಾಂತಾರ ಚಲುವೆ ರುಕ್ಮಿಣಿ ವಸಂತ್ ರೆಡಿಯಾಗಿದ್ದಾರೆ. ಇದರ ನಡುವೆಯೇ ಮಲಯಾಳಂನ ಖ್ಯಾತ ಸ್ಟಾರ್ ನಟ ನಿವಿನ್ ಪೌಲಿ ಅವರ 51ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಕನ್ನಡ, ತೆಲುಗು ಹಾಗೂ ತಮಿಳಿನ ನಂತರ ಮಲಯಾಳಂ ಚಿತ್ರರಂಗಕ್ಕೆ ಅದ್ದೂರಿಯಾಗಿ ಎಂಟ್ರಿಗೆ ಸಿದ್ಧತೆ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನಿವಿನ್ ಪೌಲಿ ನಟನೆಯ 51ನೇ ಚಿತ್ರಕ್ಕೆ ರುಕ್ಮಿಣಿ

ಮಾಲಿವುಡ್ ಚಿತ್ರರಂಗದ ಸ್ಟಾರ್ ನಟ ನಿವಿನ್ ಪೌಲಿ ನಟನೆಯ 51ನೇ ಚಿತ್ರಕ್ಕೆ (ತಾತ್ಕಾಲಿಕ ಶೀರ್ಷಿಕೆ NP51) ರುಕ್ಷ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದು, ಇತ್ತೀಚೆಗಷ್ಟೇ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿರುವುದಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಒಂದು ಸಖತ್ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಎನ್ನಲಾಗಿದ್ದು, 'ಜಯ ಜಯ ಜಯ ಜಯ ಹೇ' ಸೂಪರ್ ಹಿಟ್ ಚಿತ್ರದ ಸಹ-ಬರಹಗಾರ ನಶೀದ್ ಮೊಹಮದ್ ಫ್ಯಾಮಿ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿರುವ ರುಕ್ಷ್ಮಿಣಿ, "ನಾವು ದೂರದಿಂದ ನೋಡಿ ಆರಾಧಿಸುವ ಜಾಗದಲ್ಲಿ ನಾವೇ ಇರುವುದು ವಿಶೇಷ ಅನುಭವ. ಮಲಯಾಳಂ ಚಿತ್ರರಂಗದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ" ಎಂದು ಬರೆದುಕೊಂಡಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾದ ಪುಟ್ಟಿ

ಕನ್ನಡದಲ್ಲಿ ಸ್ಟಾರ್ ನಟಿಯಾಗಿ ಹೊರಹೊಮ್ಮಿರುವ ರುಕ್ಷ್ಮಿಣಿ ವಸಂತ್ ಸದ್ಯ ದಕ್ಷಿಣ ಭಾರತದಾದ್ಯಂತ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅದರಂತೆ, ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲೂ ರುಕ್ಷ್ಮಿಣಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಇದರೊಂದಿಗೆ, ಜೂನಿಯರ್ NTR ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ತೆಲುಗಿನ ಬಿಗ್ ಬಜೆಟ್ ಸಿನಿಮಾ 'ಡ್ರಾಗನ್'ನಲ್ಲೂ ಇವರೇ ನಾಯಕಿಜಾಲತಾಣ

ಈಗಾಗಲೇ ತೆಲುಗಿನಲ್ಲಿ 'ಅಪ್ಪುಡೋ ಇಪ್ಪುಡೋ ಎಪ್ಪುಡೋ' ಮತ್ತು ತಮಿಳಿನಲ್ಲಿ 'ವಿಜಯ್ ಸೇತುಪತಿ' ಜೊತೆ 'ಏಸ್' ಚಿತ್ರಗಳಲ್ಲಿ ನಟಿಸುವ ಮೂಲಕ ಕಾಲಿವುಡ್ ಹಾಗೂ ಟಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಾನೇ ಲಾಸ್ಟ್, ಇನ್ನು ಇರಾನ್ ನಂಬಲ್ಲ, ಹಾರ್ಮುಜ್ ಅಮೆರಿಕ ನಿಯಂತ್ರದಣದಲ್ಲಿದೆ': Donald Trump

ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್ – ವಸತಿ ಖಾತೆ?

‘ರಾಂಗ್ ರೂಟ್’ ರಕ್ಕಸ SUVಗೆ ಯೋಧ ಬಲಿ; ಕಾರು ಗುದ್ದಿದ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ಸೈನಿಕ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

ಮುಂದುವರಿದ ಕೌತುಕ: ಅಮಾವಾಸ್ಯೆ ಕಳೆದ ಬಳಿಕವಷ್ಟೇ ಖಾತೆ ಹಂಚಿಕೆ 'ಗ್ರಹಣ ಮುಕ್ತ'!

'ನನ್ನ ಮುಂದೆ ನಿಂತು ಟೈಪ್ ಮಾಡಿಸಿ ಸಹಿ ಹಾಕಿಸಿದ್ರು: ಆಸ್ಪತ್ರೆಯಲ್ಲಿದ್ದಾಗಲೂ CM ರಾಜೀನಾಮೆ ನೀಡುವಂತೆ ಒತ್ತಡ; ಮನಸ್ಸಿಗೆ ನೋವಾಗಿದೆ'