ಯಶ್  
ಸಿನಿಮಾ ಸುದ್ದಿ

ಅಮ್ಮ, ಅಪ್ಪ, ಹೆಂಡತಿಯಲ್ಲ: ಇಡೀ ಜಗತ್ತಿನಲ್ಲೇ ಯಶ್‌ಗೆ ಮೋಸ್ಟ್ ಫೇವರಿಟ್ ವ್ಯಕ್ತಿ ಯಾರು ಗೊತ್ತೆ?

ಆದರೆ ಇಷ್ಟೊಂದು ದೊಡ್ಡ ಸ್ಟಾರ್ ಆಗಿದ್ದರೂ, ತಮ್ಮ ಜೀವನದಲ್ಲಿ ಅತ್ಯಂತ ವಿಶೇಷ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಯಶ್ ನೀಡಿರುವ ಉತ್ತರ ಇದೀಗ ಗಮನ ಸೆಳೆಯುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಇಂದು ದೇಶ-ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾದ ಬಳಿಕ ಯಶ್ ಖ್ಯಾತಿ ಮತ್ತಷ್ಟು ಹೆಚ್ಚಾಗಿದ್ದು, ಬಾಲಿವುಡ್‌ನಿಂದ ಹಿಡಿದು ಹಾಲಿವುಡ್‌ವರೆಗೂ ಯಶ್ ಹೆಸರು ಕೇಳಿಬರುತ್ತಿದೆ.

ಆದರೆ ಇಷ್ಟೊಂದು ದೊಡ್ಡ ಸ್ಟಾರ್ ಆಗಿದ್ದರೂ, ತಮ್ಮ ಜೀವನದಲ್ಲಿ ಅತ್ಯಂತ ವಿಶೇಷ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಯಶ್ ನೀಡಿರುವ ಉತ್ತರ ಇದೀಗ ಗಮನ ಸೆಳೆಯುತ್ತಿದೆ.

ಖ್ಯಾತ ನಿರೂಪಕ ರಜತ್ ಶರ್ಮಾ ನಡೆಸಿಕೊಡುವ ಜನಪ್ರಿಯ ಟಿವಿ ಕಾರ್ಯಕ್ರಮ ಆಪ್ ಕಿ ಅದಾಲತ್ ನಲ್ಲಿ ಯಶ್ ಭಾಗವಹಿಸಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದ್ದರು. ಇದೇ ವೇಳೆ ನಂದಿನಿ ಎಂಬ ವೀಕ್ಷಕರೊಬ್ಬರು, ನೀವು ಇಷ್ಟು ದೊಡ್ಡ ಸ್ಟಾರ್ ಆಗಿದ್ದೀರಿ. ನಿಮ್ಮ ಕಾಲೇಜು ಸ್ನೇಹಿತರು ಹಾಗೂ ಸಂಬಂಧಿಕರು ನಿಮ್ಮ ಯಶಸ್ಸನ್ನು ನೋಡಿ ಏನು ಹೇಳುತ್ತಾರೆ ? ಎಂಬ ರೀತಿಯ ಪ್ರಶ್ನೆಯನ್ನು ಕೇಳಿದ್ದಾರೆ.

ಈ ಪ್ರಶ್ನೆ ಕೇಳಿದ ವೀಕ್ಷಕರ ಹೆಸರು ನಂದಿನಿ ಎಂಬುದು ಗೊತ್ತಾಗುತ್ತಿದಂತೆ ಯಶ್ ಮುಖದಲ್ಲಿ ನಗು ಮೂಡಿದೆ ಅಷ್ಟೇ ಅಲ್ಲದೆ ಕೂಡಲೇ ಯಶ್, ನಿಮ್ಮ ಹೆಸರು ನಂದಿನಿ ಅಲ್ವಾ? ನನ್ನ ತಂಗಿಯ ಹೆಸರು ಕೂಡ ನಂದಿನಿ ಎಂದು ಹೇಳಿದ್ದಾರೆ. ಹಾಗೆಯೇ ತಮ್ಮ ತಂಗಿಯ ಮೇಲಿನ ಪ್ರೀತಿಯನ್ನು ಯಶ್ ಬಹಿರಂಗಪಡಿಸಿದ್ದಾರೆ.

ತಮ್ಮ ತಂಗಿ ನಂದಿನಿ ಬಗ್ಗೆ ಮಾತನಾಡುತ್ತಾ, ನನ್ನ ಮೋಸ್ಟ್ ಫೇವರಿಟ್ ಪರ್ಸನ್ ಇನ್ ದ ವರ್ಲ್ಡ್ ನನ್ನ ತಂಗಿ ನಂದಿನಿ ಎಂದು ಹೇಳಿದ್ದಾರೆ. ಯಶ್ ಈ ಮಾತು ಕೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದವರು ಹಾಗೂ ಅಭಿಮಾನಿಗಳು ಸಂತಸಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ: ಎಲ್ಲಿದೆ ನ್ಯಾಯ; VHP

ಬೆಂಗಳೂರು ಜಾತ್ರೆಗೆ ಡೇಟ್‌ ಫಿಕ್ಸ್‌; 10 ದಿನಗಳ ಊರ ಹಬ್ಬಕ್ಕೆ ಉದ್ಯಾನನಗರಿ ಸಜ್ಜು, ಏನೆಲ್ಲಾ ಇರಲಿದೆ? ಇಲ್ಲಿದೆ ವಿವರ...

ಭಾರತೀಯ ವಾಯುಪಡೆಗೆ ವರ್ಷಕ್ಕೆ 36-40 ಹೊಸ ಯುದ್ಧ ವಿಮಾನಗಳ ಅಗತ್ಯ: ವಾಯುಸೇನಾ ಮುಖ್ಯಸ್ಥ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?