ಟಾಕ್ಸಿಕ್ ಸ್ಟಿಲ್ ಮತ್ತು ರಾಧಿಕಾ ಪಂಡಿತ್ 
ಸಿನಿಮಾ ಸುದ್ದಿ

ಸುಳ್ಳು ಹೇಳಲು ನನಗೆ ಇಷ್ಟವಿಲ್ಲ, ಪ್ರತಿಯೊಬ್ಬ ಸಂಗಾತಿಗೂ...'ಟಾಕ್ಸಿಕ್' ಹಸಿಬಿಸಿ ಪ್ರಣಯ ದೃಶ್ಯಗಳು; ರಾಧಿಕಾ ಪಂಡಿತ್ ಬಗ್ಗೆ ಯಶ್ ಮಾತು

ಕೆಲವು ಕೆಲಸಗಳನ್ನು ಜನರು ತಮ್ಮ ನಂಬಿಕೆಗಾಗಿ ಮಾಡುತ್ತಾರೆ. ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಮಾಡುತ್ತಾರೆ. ಇನ್ನು ಕೆಲವು ಕೆಲಸಗಳನ್ನು ಮುಂದಿನ ಪೀಳಿಗೆಯೂ ನೋಡುತ್ತದೆ,

ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಅಭಿಮಾನಿಗಳು ಅವರ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ .

ಈ ನಡುವೆ ಸಿನಿಮಾದ ಟೀಸರ್ ನಲ್ಲಿರುವ ಹಸಿಬಿಸಿ ದೃಶ್ಯಗಳ ಸಂಬಂಧ ವಿವಾದ ಉಂಟಾಗಿತ್ತು. ಇಂತಹ ದೃಶ್ಯಗಳ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ಏನು ಹೇಳಿದರು ಎಂಬ ಬಗ್ಗೆ ಯಶ್ ಮನ ಬಿಚ್ಚಿ ಮಾತನಾಡಿದ್ದಾರೆ. ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಜೊತೆ ಮಾತನಾಡಿದ ಯಶ್, ಇತರ ಯಾವುದೇ ಸಂಗಾತಿಯಂತೆ ತನ್ನ ಪತ್ನಿಯೂ ಸಹ ಅನ್‌ಕಫರ್ಟ್‌ ಆಗಿದ್ದರು ಎಂದು ಹೇಳಿದ್ದಾರೆ.

ಇಂತಹ ವಿಚಾರದಲ್ಲಿ ಪ್ರತಿಯೊಬ್ಬ ಸಂಗಾತಿಗೂ ಅಸಮಾಧಾನವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಸುಳ್ಳು ಹೇಳಲು ನನಗೆ ಇಷ್ಟವಿಲ್ಲ. ಎಲ್ಲ ಸಂಗಾತಿಗಳಿಗೂ ಹಾಗೆಯೇ ಅನಿಸುತ್ತದೆ. ಆದರೆ, ಅಂತಿಮವಾಗಿ ಇದು ಒಂದು ಕಲೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಇದರ ಮೂಲಕ ಸಾಧಿಸಲು ಪ್ರಯತ್ನಿಸುತ್ತಿರುವುದು ವಿಭಿನ್ನವಾದ ವಿಚಾರ ಎಂದು ಹೇಳಿದ್ದಾರೆ.

ಕೆಲವು ಕೆಲಸಗಳನ್ನು ಜನರು ತಮ್ಮ ನಂಬಿಕೆಗಾಗಿ ಮಾಡುತ್ತಾರೆ. ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಮಾಡುತ್ತಾರೆ. ಇನ್ನು ಕೆಲವು ಕೆಲಸಗಳನ್ನು ಮುಂದಿನ ಪೀಳಿಗೆಯೂ ನೋಡುತ್ತದೆ, ಅದರಿಂದ ಕಲಿಯುತ್ತದೆ ಎಂಬ ಕಾರಣಕ್ಕೆ ದಾಖಲಿಸಲಾಗುತ್ತದೆ. ಹಾಗಾಗಿ ಕೆಲವು ವಿಚಾರಗಳನ್ನು ದಾಖಲಿಸುವುದು ಅಗತ್ಯ. ಈ ಕಥೆ ಕೂಡ ಮಹತ್ವದ್ದಾಗಿದೆ ಎಂದು ನನಗೆ ಅನಿಸುತ್ತದೆ ಎಂದಿದ್ದಾರೆ.

ಈ ಚಿತ್ರಕ್ಕಾಗಿ ತಾವು ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಬರಬೇಕಾಯಿತು. ಇಂತಹ ದೃಶ್ಯಗಳಲ್ಲಿ ನಟಿಸುವುದು ನನಗೂ ಸುಲಭವಲ್ಲ. ಆದರೆ ಕಥೆಗೆ ಅದು ಅಗತ್ಯವಾಗಿತ್ತು ಮತ್ತು ಚಿತ್ರದ ಪ್ರಮುಖ ಭಾಗವಾಗಿದೆ. ಸಹಜವಾಗಿಯೇ ರಾಧಿಕಾಗೆ ಇದು ಇಷ್ಟವಾಗುವುದಿಲ್ಲ. ಆದರೆ ಅದಕ್ಕಾಗಿ ಅವಳು ನನ್ನ ಮೇಲೆ ಬೇಸರಗೊಂಡಿದ್ದಾಳೆ ಎಂದರ್ಥವಲ್ಲ. ಆಕೆ ನನ್ನನ್ನು ನಂಬುತ್ತಾಳೆ ಎಂದು ತಿಳಿಸಿದ್ದಾರೆ.

ಮುಖ್ಯವಾಗಿ, ಆಕೆಯೂ ಒಬ್ಬ ನಟಿ. ಇದು ನಮ್ಮ ವೃತ್ತಿಯ ಭಾಗ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾಳೆ. ನಾನು ನಟಿಸುತ್ತಿರುವಾಗ, ಅಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಿರುವ ಒಬ್ಬ ನಟ ಇರುತ್ತಾನೆ. ಅದು ಆಕೆಯ ಪತಿ ಅಲ್ಲ ಎಂದು ಯಶ್‌ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'

ಬೆಂಗಳೂರು: ಮನೆಯಲ್ಲೇ ತಂದೆ-4 ವರ್ಷದ ಮಗ ನಿಗೂಢ ಸಾವು; ಬೆಡ್​ರೂಮ್​​ನಲ್ಲಿ ಮಲಗಿದ್ದ ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸರು!

‘ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ಮತ್ತೆ ಪ್ರತಿಭಟನೆ!’: ಕೇಂದ್ರಕ್ಕೆ ಬಾಬಾ ರಾಮದೇವ್ ಖಡಕ್ ಎಚ್ಚರಿಕೆ