ಟಾಕ್ಸಿಕ್ ನಲ್ಲಿ ಯಶ್ 
ಸಿನಿಮಾ ಸುದ್ದಿ

ಟಾಕ್ಸಿಕ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರವೇ ಉಲ್ಟಾ! ಎರಡೇ ದಿನದಲ್ಲಿ 190 ಕೋಟಿ ಬಾಚಿದ ಟಾಕ್ಸಿಕ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಬಾಕ್ಸ್ ಆಫೀಸ್ ನಲ್ಲಿ ನಿಜವಾದ ಸುನಾಮಿಯನ್ನೇ ಎಬ್ಬಿಸಿದೆ. ಬಿಡುಗಡೆಗೆ ಮುನ್ನವೇ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಈಗ ಕಲೆಕ್ಷನ್ ನಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿದೆ.

ಬೆಂಗಳೂರು: ವಿಶ್ವದಾದ್ಯಂತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿದೆ. ಈ ಮೂಲಕ ಕೇವಲ ಎರಡು ದಿನಗಳಲ್ಲೇ ಜಾಗತಿಕವಾಗಿ, 190 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ವಿಶೇಷವಾಗಿ ಉತ್ತರ ಭಾರತದ ಹಿಂದಿ ಬೆಲ್ಟ್ ನಲ್ಲಿ ಸಿನಿಮಾ ಸೃಷ್ಟಿಸಿರುವ ಸಂಚಲನ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

200 ಕೋಟಿಯತ್ತ ದಾಪುಗಾಲು ಇಟ್ಟ ಟಾಕ್ಸಿಕ್

ಮೊದಲ ದಿನವೇ ಟಾಕ್ಸಿಕ್ ಭರ್ಜರಿ ಆರಂಭ ಪಡೆದುಕೊಂಡಿತ್ತು. ವಿಶ್ವದಾದ್ಯಂತ ಮೊದಲ ದಿನ 140.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ ಭಾರತದಲ್ಲಿ ಮಾತ್ರ 101.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿತ್ತು. ಈ ಮೂಲಕ ಮೊದಲ ದಿನವೇ ನೂರು ಕೋಟಿ ಕ್ಲಬ್ ಸೇರಿತ್ತು. ಈಗ ಎರಡನೇ ದಿನದ ಕಲೆಕ್ಷನ್ ಕೂಡ ಹೊರಬಿದ್ದಿದ್ದು ಸಿನಿಮಾ 200 ಕೋಟಿಯತ್ತ ದಾಪುಗಾಲು ಇಡುತ್ತಿದೆ.

ಎರಡನೇ ದಿನ ಎಷ್ಟು ಕಲೆಕ್ಷನ್ ಆಯ್ತು?

ಗುರುವಾರ ವಾರದ ದಿನವಾಗಿದ್ದರೂ ಟಾಕ್ಸಿಕ್ ಹವಾ ಕಡಿಮೆಯಾಗಿಲ್ಲ. ಎರಡನೇ ದಿನ ದೇಶೀಯ ಮಾರುಕಟ್ಟೆಯಲ್ಲಿ ಸಿನಿಮಾ 36.40 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಎರಡು ದಿನದ ಒಟ್ಟು ನೆಟ್ ಕಲೆಕ್ಷನ್ 137.50 ಕೋಟಿ ರೂಪಾಯಿಗೆ ಏರಿದೆ. ಜಾಗತಿಕವಾಗಿ ಎರಡು ದಿನಕ್ಕೆ 190 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.

ಅದರಂತೆ, ಎರಡನೇ ದಿನದ ಭಾಷಾವಾರು ಗಳಿಕೆಯ ಪ್ರಕಾರ ಹಿಂದಿ ಆವೃತ್ತಿಯಿಂದ 23 ಕೋಟಿ ರೂಪಾಯಿ, ಕನ್ನಡ ಆವೃತ್ತಿಯಿಂದ 8.50 ಕೋಟಿ ರೂಪಾಯಿ, ತೆಲುಗಿನಿಂದ 3 ಕೋಟಿ ರೂಪಾಯಿ, ತಮಿಳಿಂದ 1.50 ಕೋಟಿ ರೂಪಾಯಿ ಹಾಗೂ ಮಲಯಾಳಂನಿಂದ 40 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಹಿಂದಿ ಬೆಲ್ಟ್ ನಲ್ಲಿ ಅಚ್ಚರಿ ಸೃಷ್ಟಿಸಿದ ಯಶ್

ಈ ಬಾರಿ ಟಾಕ್ಸಿಕ್ ಸೃಷ್ಟಿಸಿರುವ ದೊಡ್ಡ ಅಚ್ಚರಿ ಉತ್ತರ ಭಾರತದ ಹಿಂದಿ ಬೆಲ್ಟ್ ನಲ್ಲಿ. ಸಾಮಾನ್ಯವಾಗಿ ದಕ್ಷಿಣದ ಸಿನಿಮಾಗಳು ಹಿಂದಿ ಬೆಲ್ಟ್ ನಲ್ಲಿ ನಿಧಾನವಾಗಿ ಪಿಕ್ ಅಪ್ ಆಗುತ್ತವೆ. ಆದರೆ ಟಾಕ್ಸಿಕ್ ಮೊದಲ ದಿನದಿಂದಲೇ ಹಿಂದಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಯಶ್ ಅವರ ಕೆಜಿಎಫ್ ನಂತರದ ಕ್ರೇಜ್ ಹಿಂದಿ ಪ್ರೇಕ್ಷಕರಲ್ಲಿ ಇನ್ನೂ ಹೆಚ್ಚಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ವೀಕೆಂಡ್ ಗೆ ಭಾರಿ ಡಿಮ್ಯಾಂಡ್

ಇದೀಗ ವೀಕೆಂಡ್ ಸಮೀಪಿಸುತ್ತಿದ್ದಂತೆ ಟಾಕ್ಸಿಕ್ ಟಿಕೆಟ್ ಗೆ ಭಾರಿ ಬೇಡಿಕೆ ಶುರುವಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಸೇರಿದಂತೆ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್ ಗಳಲ್ಲಿ ಬಹುತೇಕ ಶೋಗಳು ಹೌಸ್ ಫುಲ್ ಆಗುತ್ತಿವೆ. ಅದರಂತೆ, ಈ ವೀಕೆಂಡ್ ನಲ್ಲಿ ಸಿನಿಮಾ 300 ಕೋಟಿ ಕ್ಲಬ್ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 392ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!

ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು; ಮಾರಕಾಸ್ತ್ರ ಹಿಡಿದು ಅಬ್ಬರಿಸುತ್ತಿದ್ದ ರೌಡಿಶೀಟರ್ ಹೆಡೆಮುರಿ ಕಟ್ಟಿದ ಬೆಂಗಳೂರಿನ ಪೊಲೀಸರು

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!