ಯಶ್ ನಟನೆಯ Toxic ಚಿತ್ರ ಬಿಡುಗಡೆಯಾಗಿದ್ದು ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಪ್ರೇಕ್ಷಕರು ಚಿತ್ರವನ್ನು ಟ್ರೋಲ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯಶ್ ತಾಯಿ ಪುಷ್ಪ ಅರುಣ್ ಕುಮಾರ್, ಸುಖಾ ಸುಮ್ಮನೆ ಟ್ರೋಲ್ ಮಾಡುತ್ತಿರುವವರಿಗೆ ಮೆಂಟಲ್ ಪ್ರಾಬ್ಲಂ ಇರಬಹುದು. ಯಶ್ ಕಾಲೆಳೆಯುವವರನ್ನು ನೋಡಿದರೆ ನನಗೆ ನಗು ಬರುತ್ತದೆ. ಅಂಥವರಿಗೆ ನಾವು ಕೇರ್ ಮಾಡಲ್ಲ ಎಂದು ಹೇಳಿದ್ದಾರೆ.
ಟಾಕ್ಸಿಕ್ ಸಿನಿಮಾ ವಯಸ್ಕರಿಗಾಗಿ ಎಂದು ಸ್ವತಃ ಯಶ್ ಕೆಲವೊಂದು ಸಂದರ್ಶಗಳಲ್ಲಿ ಹೇಳಿದ್ದರು. ಮಕ್ಕಳೊಂದಿಗೆ ಸಿನಿಮಾಗೆ ಬರಬೇಡಿ ಎಂದು ಸಹ ಮನವಿ ಮಾಡಿದ್ದರು. ಆದರೆ ಕೆಲವರು ಚಿತ್ರದಲ್ಲಿ ಹೆಚ್ಚು ಹಸಿಬಿಸಿ ದೃಶ್ಯಗಳಿವೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಯಶ್ ನಟನೆಯ ಟಾಕ್ಸಿಕ್ ಚಿತ್ರವನ್ನು ಟ್ರೋಲ್ ಮಾಡುತ್ತಿರುವವರು ಈ ಹಿಂದೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಯಶ್ ಆಡಿದ ಮಾತನ್ನು ಉಲ್ಲೇಖಿಸಿ ಟ್ರೋಲ್ ಮಾಡುತ್ತಿದ್ದಾರೆ. ಫ್ಯಾಮಿಲಿಗೆ ಮುಜುಗರ ಆಗುವಂತಹ ಸಿನಿಮಾ ಮಾಡಲ್ಲ ಎಂದು ಯಶ್ ಹೇಳಿದ್ದರು. ಆದರೆ ‘ಟಾಕ್ಸಿಕ್’ ಎಲ್ಲಾ ಗಡಿಗಳನ್ನು ಮೀರಿದೆ ಎಂದು ಹೇಳುತ್ತಿದ್ದಾರೆ.