ಕಮಲ್ ಹಾಸನ್, ರಜನಿಕಾಂತ್ 
ಸಿನಿಮಾ ಸುದ್ದಿ

ನೆಲ್ಸನ್ ನಿರ್ದೇಶನದ ಹೊಸ ಚಿತ್ರ KHxRK: 47 ವರ್ಷಗಳ ಬಳಿಕ ಒಂದಾದ ಕಮಲ್ ಹಾಸನ್, ರಜನಿಕಾಂತ್! Video

ಬೀಸ್ಟ್ , ಜೈಲರ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಈ ನಿಸಿನಿಮಾ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜಿಸುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಇಬ್ಬರು ದಂತಕಥೆಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು ಸುಮಾರು ನಾಲ್ಕು ದಶಕಗಳ ನಂತರ KHxRK ಎಂದು ತಾತ್ಕಾಲಿಕವಾಗಿ ಹೆಸರಿಸಲಾದ ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆ. ರಜನಿಕಾಂತ್ ಹಾಗೂ ಕಮಲ್ ಹಾಸನ ಅವರು ಕೊನೆಯದಾಗಿ 1970ರಲ್ಲಿ ಒಟ್ಟಿಗೆ ನಟಿಸಿದ್ದರು. ಈಗ 4 ದಶಕಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ.

ಬೀಸ್ಟ್ , ಜೈಲರ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಈ ನಿಸಿನಿಮಾ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜಿಸುತ್ತಿದ್ದಾರೆ.

ರೆಡ್ ಜೈಂಟ್ ಮೂವೀಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರೆಡ್ ಜೈಂಟ್ ಮೂವೀಸ್ ಸಂಸ್ಥೆ ಹೊಸ ಚಿತ್ರದ ಪ್ರಮೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನೆಲ್ಸನ್, ರವಿಚಂದರ್, ರಜನಿಕಾಂತ್ ಮತ್ತು ಹಾಸನ್ ನಡುವಿನ ತಮಾಷೆಯ ದೃಶ್ಯವನ್ನು ತೋರಿಸಲಾಗಿದೆ.

"The Glimpse of KH x RK Reunion' ಎಂಬ ಶೀರ್ಷಿಕೆಯ 3 ನಿಮಿಷ 46 ಸೆಕೆಂಡ್ ಗಳ ಪ್ರೊಮೋದಲ್ಲಿ ರಜನಿಕಾಂತ್ ತನ್ನದೇ ಆದ ಸಿಗ್ನೇಚರ್ ಶೈಲಿಯಲ್ಲಿ ಕಮಲ್ ಹಾಸನ್ ಕೈಗೆ ಕಾರಿನ ಕೀ ಎಸೆಯುತ್ತಾರೆ. ಬಳಿಕ ಇಬ್ಬರು ವಿಂಟೇಜ್ ಕಾರಿಗೆ ಹತ್ತುತ್ತಾರೆ.

ರೆಡ್ ಜೈಂಟ್ ಮೂವೀಸ್ ನ ವಕ್ತಾರರು ತಮ್ಮಅನಿಸಿಕೆ ಹಂಚಿಕೊಂಡಿದ್ದಾರೆ. ರಜನಿಕಾಂತ್ ಸರ್ ಮತ್ತು ಕಮಲ್ ಹಾಸನ್ ಸರ್ ಅವರನ್ನು ಈ ಚಿತ್ರಕ್ಕಾಗಿ ಒಂದೆಡೆ ಸೇರಿಸಿರುವುದು ರೆಡ್ ಜೈಂಟ್ ಮೂವೀಸ್ ನ ನಮ್ಮೆಲ್ಲರ ಪಾಲಿಗೆ ನಿಜಕ್ಕೂ ಕನಸು ನನಸಾದ ಕ್ಷಣ. 47 ವರ್ಷಗಳ ಬಳಿಕ ಈ ಪುನರ್ಮಿಲನಕ್ಕೆ ವೇದಿಕೆ ಕಲ್ಪಿಸುತ್ತಿರುವುದಕ್ಕೆ ನಮಗೆ ಹೆಮ್ಮೆ, ಕೃತಜ್ಞತೆ ಮತ್ತು ಅಪಾರ ಉತ್ಸಾಹವಿದೆ. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಐಸಿಹಾಸಿಕ ಮತ್ತು ಭಾವುಕ ಕ್ಷಣವಾಗಿದ್ದು, ನಾವು ಈ ಜರ್ನಿಯನ್ನು ಜವಾಬ್ದಾರಿಯಿಂದ ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್