ರಶ್ಮಿಕಾ -ವಿಜಯ್ ದೇವರಕೊಂಡ 
ಸಿನಿಮಾ ಸುದ್ದಿ

ಮಾರ್ಚ್ 4ರಂದು ರಶ್ಮಿಕಾ-ವಿಜಯ್ ಆರತಕ್ಷತೆ: ಶಿವಣ್ಣ, ಸುದೀಪ್‌ ಸೇರಿ ಕನ್ನಡ ಚಿತ್ರರಂಗದ 11ಮಂದಿಗಷ್ಟೇ ಆಮಂತ್ರಣ

ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ರಿಸೆಪ್ಷನ್‌ಗೆ ಕನ್ನಡದ ಕೆಲವು ಸ್ಟಾರ್‌ಗಳಿಗೆ ಮಾತ್ರ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ರಶ್ಮಿಕಾ ಸ್ವತಃ ವೈಯಕ್ತಿಕವಾಗಿ ಮೆಸೇಜ್ ಮಾಡಿ ಆಮಂತ್ರಣ ನೀಡಿರುವುದು ವಿಶೇಷವಾಗಿದೆ.

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ ವಿವಾಹ ಉದಯಪುರದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿದೆ. ಈ ಮಧ್ಯೆ ಕನ್ನಡದ ಯಾವ ನಟರಿಗೆ ರಶ್ಮಿಕಾ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ ಅನ್ನೋ ಕುತೂಹಲ ಹಲವರಲ್ಲಿದೆ.

ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ರಿಸೆಪ್ಷನ್‌ಗೆ ಕನ್ನಡದ ಕೆಲವು ಸ್ಟಾರ್‌ಗಳಿಗೆ ಮಾತ್ರ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ರಶ್ಮಿಕಾ ಸ್ವತಃ ವೈಯಕ್ತಿಕವಾಗಿ ಮೆಸೇಜ್ ಮಾಡಿ ಆಮಂತ್ರಣ ನೀಡಿರುವುದು ವಿಶೇಷವಾಗಿದೆ. ಸ್ಯಾಂಡಲ್​​ವುಡ್​​ ಬಹು ಬೇಡಿಕೆ ನಟರಿಗೆ ಮಾತ್ರ ಮದುವೆ ಆಹ್ವಾನ ಪತ್ರಿಕೆ ನೀಡಿರುವುದು ಇದೀಗ ಸ್ಯಾಂಡಲ್​ವುಡ್​​ನಲ್ಲಿ ಹಲವು ಚರ್ಚೆಗೂ ಕಾರಣವಾಗಿದೆ.

ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ಅಶ್ವಿನಿ ಪುನೀತ್ ರಾಜ್ ಕುಮಾರ್, ರವಿಚಂದ್ರನ್, ಧ್ರುವ ಸರ್ಜಾ, ಗಣೇಶ್, ನಿರ್ದೇಶಕ ಎ.ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ, ಅಶಿಕಾ ರಂಗನಾಥ್ ಗೆ ಮಾತ್ರ ಆಹ್ವಾನ ಪತ್ರಿಕೆ ನೀಡಲಾಗಿದೆ.

ರಶ್ಮಿಕಾಗೆ ಮೊದಲ ಅವಕಾಶ ಕೊಟ್ಟ ಶೆಟ್ಟಿ ಬಳಗ ಅಥವಾ ಆ ತಂಡದ ಮುಖ್ಯಸ್ಥರು ಈ ಪಟ್ಟಿಯಲ್ಲಿ ಇಲ್ಲ. ರಶ್ಮಿಕಾ ಮೊದಲು 'ಕಿರಿಕ್ ಪಾರ್ಟಿ'ಯಲ್ಲಿ ನಟಿಸಿದ್ದು, ಆ ಚಿತ್ರದಲ್ಲಿ ಶೆಟ್ಟಿ ತಂಡದವರು ದೊಡ್ಡ ಪಾತ್ರ ವಹಿಸಿದ್ದರು. ಆದರೆ ಈಗ ರಶ್ಮಿಕಾ ದೊಡ್ಡ ಸ್ಟಾರ್ ಆಗಿರುವಾಗ ಅವರಿಗೆ ಆಹ್ವಾನ ನೀಡದಿರುವುದು ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸಂಪುಟ ವಿಸ್ತರಣೆ ಕಸರತ್ತು: ಜೂನ್ 27ಕ್ಕೆ ದೆಹಲಿಗೆ CM ಡಿಕೆಶಿ; ಕೇರಳ ರೆಸಾರ್ಟ್‌ನಲ್ಲಿ ಸಿದ್ದು ‘ಕ್ಯಾಂಪ್’, ಹೆಚ್ಚಿದ ಕುತೂಹಲ

Cross voting ವಿವಾದ: BJP ಹೈಕಮಾಂಡ್‌ಗೆ ರಾಜ್ಯ ನಾಯಕರ ವರದಿ; ದ್ರೋಹ ಬಗೆದವರ ವಿರುದ್ಧ ಶಿಸ್ತು ಕ್ರಮಕ್ಕೆ ನಿತಿನ್ ನಬೀನ್ ಸೂಚನೆ?

ಕಬ್ಬನ್ ಪಾರ್ಕ್ Namma Metro ತಾಂತ್ರಿಕ ದೋಷ ಸರಿಪಡಿಸಿದ BMRCL; ನೇರಳೆ ಮಾರ್ಗದಲ್ಲಿ ಸಂಚಾರ ಪುನರಾರಂಭ

ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಕೆಟ್ಟುನಿಂತ ಮೆಟ್ರೋ ರೈಲು; ಇಂದಿರಾನಗರ - ಮೆಜೆಸ್ಟಿಕ್ ನಡುವೆ ಸಂಚಾರ ಸ್ಥಗಿತ!

ಅಮೆರಿಕ- ಇರಾನ್ ಶಾಂತಿ ಒಪ್ಪಂದ: ಜೂನ್ 17 ರಿಂದ ಹಾರ್ಮುಜ್ ಜಲಸಂಧಿ ದಾಟಿದ ಭಾರತದ 11 ಹಡಗುಗಳು! ಇನ್ನೂ ಎಷ್ಟಿವೆ ಗೊತ್ತಾ?