ಸೀಟ್ ಎಡ್ಜ್ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಸಿದ್ದು ಮೂಲಿಮನಿ ಅಭಿನಯದ 'ಸೀಟ್ ಎಡ್ಜ್' ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್!

ಚೇತನ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವು, ಘೋಸ್ಟ್ ಹಂಟಿಂಗ್‌ಗೆ ಹೋಗುವ ವ್ಲಾಗರ್ ಒಬ್ಬನ ಕಥೆಯನ್ನು ಅನುಸರಿಸುತ್ತದೆ.

ಸಿದ್ದು ಮೂಲಿಮನಿ ನಟನೆಯ 'ಸೀಟ್ ಎಡ್ಜ್' ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಜನವರಿ 30 ರಂದು ರಾಜ್ಯದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡದ ಪ್ರಕಾರ, ಚಿತ್ರವು ಕಾಮಿಡಿ, ಹಾರರ್ ಮತ್ತು ಸಸ್ಪೆನ್ಸ್ ಮಿಶ್ರಣವಾಗಿದೆ. ಎನ್ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಗಿರಿಧರ ಟಿ ವಸಂತಪುರ ನಿರ್ಮಿಸಿದ್ದಾರೆ. ಸುಜಾತಾ ಗಿರಿಧರ ಸಹ-ನಿರ್ಮಾಪಕರಾಗಿದ್ದಾರೆ. ಲವ್ ಯು ಮುದ್ದು ನಂತರ ಸಿದ್ದು ಮೂಲಿಮನಿ ಸೀಟ್ ಎಡ್ಜ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಆಧುನಿಕ ಯೂಟ್ಯೂಬ್ ವ್ಲಾಗರ್ ಆಗಿ ನಟಿಸಿದ್ದಾರೆ..

ಚೇತನ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವು, ಘೋಸ್ಟ್ ಹಂಟಿಂಗ್‌ಗೆ ಹೋಗುವ ವ್ಲಾಗರ್ ಒಬ್ಬನ ಕಥೆಯನ್ನು ಅನುಸರಿಸುತ್ತದೆ. ಆದರೆ, ಅನಿರೀಕ್ಷಿತ ಮತ್ತು ಆಘಾತಕಾರಿ ಸನ್ನಿವೇಶಗಳ ಸರಣಿಯಲ್ಲಿ ಅವನು ಸಿಲುಕಿಕೊಳ್ಳುತ್ತಾನೆ. ನಿರೂಪಣೆಯು ಹಾಸ್ಯಮಯ ಹಾರರ್ ಥ್ರಿಲ್ಲರ್ ಆಗಿ ತೆರೆದುಕೊಳ್ಳುತ್ತದೆ. ಹಾಸ್ಯದೊಂದಿಗೆ ವಿಲಕ್ಷಣ ಕ್ಷಣಗಳು ಮತ್ತು ಸಸ್ಪೆನ್ಸ್ ಅನ್ನು ಸಂಯೋಜಿಸುತ್ತದೆ.

ಸೀಟ್ ಎಡ್ಜ್‌ನಲ್ಲಿ ರವೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕ್, ಪುನೀತ್ ಬಾಬು, ತೇಜು ಪೊನ್ನಪ್ಪ ಮತ್ತು ಮನಮೋಹನ್ ರೈ ಸೇರಿದಂತೆ ಬಲವಾದ ಪೋಷಕ ಪಾತ್ರವರ್ಗವಿದೆ.

ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಕುದುರೆಮುಖದಲ್ಲಿ 45 ದಿನಗಳ ಕಾಲ ಚಿತ್ರೀಕರಣಗೊಂಡ ಈ ಚಿತ್ರಕ್ಕೆ ದೀಪಕ್ ಕುಮಾರ್ ಜೆಕೆ ಅವರ ಛಾಯಾಗ್ರಾಹಕ, ನಾಗೇಂದ್ರ ಕೆ ಉಜ್ಜನಿ ಅವರ ಸಂಕಲನ, ಆಕಾಶ್ ಪರ್ವ ಅವರ ಸಂಗೀತ ಸಂಯೋಜನೆ ಇದೆ ಮತ್ತು ರಘು ಆರ್‌ಜೆ ನೃತ್ಯ ಸಂಯೋಜಕರಾಗಿದ್ದಾರೆ.

ಇಲ್ಲಿಯವರೆಗೆ, ಚಿತ್ರತಂಡ ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ. ಅರ್ಮಾನ್ ಮಲಿಕ್ ಹಾಡಿರುವ 'ಸಾರಿ ಹೇಳುವೆ ಜಗಕ್ಕೆ' ಮತ್ತು ಟಿಪ್ಪು ಹಾಡಿರುವ ಹಂಗೋ ಹಿಂಗೋ ಹಾಡು ಬಿಡುಗಡೆಯಾಗಿದೆ. ಜೊತೆಗೆ ವ್ಲಾಗ್-1: ದಿ ಲೂಪ್ ಎಂಬ ಶೀರ್ಷಿಕೆಯ ಟೀಸರ್ ರಿಲೀಸ್ ಮಾಡಲಾಗಿದೆ. ನಾಗಾರ್ಜುನ್ ಶರ್ಮಾ ಬರೆದ ಮತ್ತು ಸಿದ್ಧಾರ್ಥ ಬೆಳ್ಮಣ್ಣು ಹಾಡಿರುವ 'ಲೈಫು ಯಾಕೋ ಖಾಲಿ ಖಾಲಿ' ಎಂಬ ಹೊಸ ಹಾಡು ಜನವರಿ 29 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವೆನೆಜುವೆಲಾ ಮೇಲೆ ಅಮೆರಿಕ ಮತ್ತೊಂದು ದಾಳಿ; ತೈಲ ಟ್ಯಾಂಕರ್ ವಶಕ್ಕೆ, ರಷ್ಯಾ ಖಂಡನೆ, Video

ಜನಗಣತಿ 2027: ಮನೆ ಪಟ್ಟಿಗಳನ್ನು ಒಳಗೊಂಡ ಮೊದಲ ಹಂತ ಏಪ್ರಿಲ್ 1 ರಿಂದ ಆರಂಭ

'ಹೊಡಿತಾಳೆ.. ಬಡಿತಾಳೆ ನನ್ ಹೆಡ್ತಿ': ನಟ Dhanush ಪೊಲೀಸ್ ದೂರು! ಮದುವೆಯಾದ 9 ತಿಂಗಳಿಗೇ ಬೀದಿಗೆ ಬಂದ ಸಂಸಾರ!

'ಗಂಡಸರ ಮನಸ್ಸೂ ಅರ್ಥವಾಗಲ್ಲ, ಯಾವಾಗ ರೇಪ್‌/ಕೊಲೆ ಮಾಡ್ತಾರೋ ಗೊತ್ತಿಲ್ಲ': ನಟಿ ರಮ್ಯಾ ವಿವಾದಾತ್ಮಕ ಪೋಸ್ಟ್

10 ವರ್ಷಗಳಲ್ಲಿ ಗುಜರಾತ್ ಬಿಜೆಪಿ ಸಂಸದರ ಆಸ್ತಿ ಹಲವು ಪಟ್ಟು ಹೆಚ್ಚಳ: ADR ವರದಿ

SCROLL FOR NEXT