ಬನಾರಸ್ ಚಿತ್ರದ ಬಳಿಕ ಇದೀಗ ಕಲ್ಟ್ ಚಿತ್ರದ ಮೂಲಕ ನಟ ಝೈದ್ ಖಾನ್ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಚಿತ್ರದ ಝೈದ್ ಖಾನ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಝೈದ್ ಖಾನ್ ಮುಸ್ಲಿಂ ಧರ್ಮದವರಾದರೂ ಎಲ್ಲಾ ಧರ್ಮಕ್ಕೂ ಸಮಾನ ಆದ್ಯತೆ ನೀಡುತ್ತಾರೆ. ಅದರಂತೆ ಇತ್ತೀಚೆಗೆ ಸಂಕ್ರಾಂತಿ ಹಬ್ಬ ಆಚರಿಸಿದ್ದರು. ನಾಯಕಿ ಜೊತೆ ದೇವಸ್ಥಾನದಲ್ಲಿ ಹಿಂದೂ ದೇವರ ದರ್ಶನ ಪಡೆದು ಮಂಗಳಾರತಿ ಸ್ವೀಕರಿಸಿದ್ದರು. ಈ ಬಗ್ಗೆ ಪ್ರಶ್ನೆಗಳು ಎದ್ದಿದ್ದು ಇದಕ್ಕೆ ಝೈದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಕಲ್ಟ್ ಸಿನಿಮಾ ಪ್ರಚಾರದ ವೇಳೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದರು. ಇದನ್ನು ನಿಮ್ಮ ಧರ್ಮದವರು ಪ್ರಶ್ನೆ ಮಾಡುವುದಿಲ್ಲವೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ನಾನು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತೇನೆ ಎಂದಿದ್ದಾರೆ. ಇನ್ನು ಸಿನಿಮಾದಲ್ಲಿ ಮದ್ಯ ಸೇವನೆ, ಹಿಂಸಾಚಾರದಂತ ದೃಶ್ಯಗಳಿದ್ದು ಇಸ್ಲಾಂನಲ್ಲಿ ಇದೆಲ್ಲವನ್ನು ಹರಾಮ್ ಎಂದು ಕರೆಯುತ್ತಾರೆ ಎಂದು ಪ್ರಶ್ನಿಸಿದ್ದಕ್ಕೆ ನಟನೆಯನ್ನು ನಟನೆಯಾಗಿ ಮಾತ್ರ ನೋಡುತ್ತೇನೆ. ಅದಕ್ಕೂ ನಿಜ ಜೀವನಕ್ಕೂ ಕನೆಕ್ಟ್ ಮಾಡಬಾರದು ಎಂದರು.
ಒಂದು ವೇಳೆ ನಾನು ಹರಾಮ್ ಹೌದೋ ಅಲ್ಲವೋ ಅನ್ನೋದನ್ನು ಸತ್ತ ಮೇಲೆ ನಾನು ದೇವರಿಕೆ ಲೆಕ್ಕ ಕೊಟ್ಟುಕೊಳ್ಳುತ್ತೇನೆ ಎಂದರು. ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಜನವರಿ 23ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಝೈದ್ ಜೊತೆ ರಂಗಾಯಣ ರಘು, ಮಲೈಕಾ ವಾಸುಪಾಲ್, ರಚಿತಾ ರಾಮ್, ಅಚ್ಯುತ್ ಕುಮಾರ್ ನಟಿಸಿದ್ದಾರೆ.