ರಚಿತಾ ರಾಮ್ ಅವರು ದಶಕಕ್ಕೂ ಹೆಚ್ಚುಕಾಲದಿಂದ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಈಗಲೂ ಸ್ಟಾರ್ ಸಿನಿಮಾಗಳಲ್ಲಿ ಚಾನ್ಸ್ ಗಿಟ್ಟಿಸುತ್ತಿರುವ ನಟಿ ರಚಿತಾ ರಾಮ್ ಅವರು ಇತ್ತೀಚೆಗೆ ವೇದಿಕೆಯೊಂದರಲ್ಲಿ 'ಬಾಡಿ ಶೇಮಿಂಗ್' ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಯೊಂದಕ್ಕೆ ಬೋಲ್ಡ್ ಆಗಿ ಉತ್ತರಿಸಿದ್ದಾರೆ.
ಪ್ರೆಸ್‌ಮೀಟ್ ಒಂದರಲ್ಲಿ ಪರ್ತಕರ್ತೆಯೊಬ್ಬರು ನಟಿ ರಚಿತಾ ರಾಮ್ ಅವರಿಗೆ 'ಇತ್ತೀಚೆಗೆ ಬಾಡಿ ಶೇಮಿಂಗ್ ಅನ್ನೋದು ಮಿತಿಮೀರಿದೆ. ಸ್ಟಾರ್ ನಟಿಯರನ್ನು, ಸ್ಟಾರ್ ನಟರ ಮಕ್ಕಳನ್ನೂ ಕೂಡ ಬಿಡೋದಿಲ್ಲ. ಇದಕ್ಕೆ ಪರಿಹಾರ ಯಾವತ್ತು ಮತ್ತು ಹೇಗೆ?' ಎಂದು ಕೇಳಿದ್ದಾರೆ.
ಹೆಣ್ಣು ಮಕ್ಕಳು ಯಾಕೆ ದಪ್ಪ ಆಗುತ್ತಾರೆ? ಅವರಿಗೆ ಎದುರಾಗುವ ದೈಹಿಕ ಸಮಸ್ಯೆಗಳ ಬಗ್ಗೆ ರಚಿತಾ ರಾಮ್ ಮಾತಾಡಿದ್ದು, ಯಾರೇ ಏನೇ ಅಂದರೂ ತಾವು ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಬಾಡಿ ಶೆಮಿಂಗ್‌ಗೆ ಒಳಾಗಾಗಿ ಜೀವ ಕಳೆದುಕೊಂಡವರನ್ನು ಮುಟ್ಟಾಳರು ಎಂದಿದ್ದಾರೆ. ಅವರವರ ದೇಹ ಅವರಿಗಷ್ಟೇ ಗೊತ್ತು "ಇಲ್ಲಿರೋ ಎಲ್ಲಾ ಹೆಣ್ಣು ಮಕ್ಕಳ ಬಾಡಿ ಟೈಪ್ ಒಂದೊಂದು ತರ ಇರುತ್ತೆ. ಇಲ್ಲಿ ಡಯೆಟ್ ಮಾಡಿದರೂ ದಪ್ಪ ಆಗುತ್ತಾರೆ. ಕೆಲವರಿಗೆ ಪಿಸಿಒಡಿ ಹಾಗೂ ಪಿಸಿಒಸಿ ಸಮಸ್ಯೆ ಇರುತ್ತೆ. ಕೆಲವರು ಮಾನಸಿಕ ಒತ್ತಡದಿಂದಲೂ ದಪ್ಪ ಆಗುತ್ತಾರೆ. ಅವರವರ ಬಾಡಿ ಟೈಪ್ ಅವರಿಗೆ ಮಾತ್ರ ಗೊತ್ತಿರುತ್ತೆ. ಎಲ್ಲರೂ ವರ್ಕ್ಔಟ್ ಮಾಡುತ್ತೇವೆ. ಎಲ್ಲರೂ ಡಯೆಟ್ ಮಾಡುತ್ತೇವೆ.
ಇಷ್ಟು ಓಪನ್ ಆಗಿ ಮಾತಾಡುತ್ತಿದ್ದೇವೆ ಅಂದಾಗ, ಮುಟ್ಟಾಗುವುದಕ್ಕೂ ಐದು ದಿನ ಮುನ್ನ ಬಾಡಿ ಕೋಲ್ಡ್ ಆಗುತ್ತೆ. ಮುಟ್ಟು ಮುಗಿದ ಐದು ದಿನಗಳು ಆದ್ಮೇಲೆ ನಾವು ಕುಗ್ಗಿ ಹೋಗುತ್ತೇವೆ. ಎಲ್ಲಾ ಗಂಡು ಮಕ್ಕಳಿಗೂ ನಾವು ನಾನು ಹೀಗಿದ್ದೇನೆ ಎಂದು ಮೆಚ್ಚಿಸುವುದಕ್ಕೆ ಆಗುವುದಿಲ್ಲ. ನಮ್ಮ ಬಾಡಿ.. ನಮ್ಮ ಇಷ್ಟ.. ನಮ್ಮ ಲೈಫ್.. ಕಿವಿ ಕೊಟ್ಕೊಂಡು ಹೋಗುತ್ತಿದ್ದರೆ, ಅಳಬೇಕಾಗುತ್ತೆ." ಎಂದು ರಚಿತಾ ರಾಮ್ ಹೇಳಿದ್ದಾರೆ.
ಕೆಲವರು ಏನೇ ತಿಂದ್ರೂ ದಪ್ಪ ಆಗ್ತಾರೆ, ಎಷ್ಟು ಕಡಿಮೆ ತಿಂದ್ರೂ ದಪ್ಪ ಆಗ್ತಾರೆ. ಎಲ್ಲರ ಬಾಡಿ ಒಂದೇ ತರ ಇರಲ್ಲ.. ಕೆಲವರಿಗೆ ನಿದ್ದೆ ಕಡಿಮೆ ಅದ್ರೆ ದೇಹ ದಪ್ಪ ಆಗುತ್ತೆ, ಕೆಲವರಿಗೆ ನಿದ್ದೆ ಹೆಚ್ಚಾದ್ರೂ ಆಗ್ಬಹುದು. ಎಲ್ಲರೂ ಒಂದೇ ರೀತಿ ಸ್ಲಿಮ್ ಆಗಿ ಇರ್ಬೇಕು ಅಂತ ನಿರೀಕ್ಷೆ ಮಾಡೋಕೆ ಆಗಲ್ಲ ಎಂದಿದ್ದಾರೆ.
ನಮ್ಮ ದೇಹವನ್ನು ನಾವು ಪೂಜಿಸಬೇಕು. ಇದು ನಮ್ಮ ದೇಹ. ನಾವು ಯಾಕೆ ಬೇರೆಯವರಿಗೋಸ್ಕರ ಖಿನ್ನತೆಗೆ ಒಳಗಾಗಬೇಕು. ನನಗೆ ಏನು ಬೇಕು ಅಂತ ನನಗೆ ಗೊತ್ತಿದೆ. ನಾನು ಹೇಗೆ ವರ್ಕ್‌ಔಟ್ ಮಾಡಬೇಕು. ಇನ್ನೊಂದು ಗೊತ್ತಾ ಕೆಲವರು ಐದು ಗಂಟೆ ನಿದ್ದೆ ಮಾಡಿದರೆ ದಪ್ಪ ಆಗುತ್ತಾರೆ. ಅವರಿಗೆ ಎಂಟು ಗಂಟೆ ನಿದ್ದೆ ಮಾಡಲೇ ಬೇಕಾಗುತ್ತೆ. ನನಗೆ ಏಳರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು. ಇಲ್ಲಾ ಅಂದರೆ, ನಾನು ದಪ್ಪಗೆ ಕಾಣುತ್ತೇನೆ." ಎಂದು ರಚಿತಾ ರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಡಿ ಶೇಮಿಂಗ್‌ನಿಂದ ಅವಮಾನಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡವರು ಮುಟ್ಟಾಳರು. ಅವರ ಬಗ್ಗೆ ಮಾತಾಡುವುದಕ್ಕೆ ಹೋಗುವುದಿಲ್ಲ. ಅದಕ್ಕೆ ಅವರು ಅರ್ಹರು ಅಲ್ಲ. ಒಂದು ಜೀವ.. ಒಂದು ಜೀವನ. ಯಾಕೆ ಎಲ್ಲರೂ ನೆಗೆಟಿವ್ ಕಾಮೆಂಟ್‌ಗಳಿಗೆ ಕಿವಿ ಕೊಡುತ್ತಿದ್ದಾರೆ. ಏನಕ್ಕೆ.. ಮಾತಾಡುವವರು ಮಾತಾಡುತ್ತಲೇ ಇರುತ್ತಾರೆ ಎಂದು ರಚಿತಾ ರಾಮ್ ಹೇಳಿದ್ದಾರೆ.