ತ್ರಿಶಾ 
ಸಿನಿಮಾ ಸುದ್ದಿ

ಇದು ನಿಜಕ್ಕೂ 'ಅಸಹ್ಯಕರ'; ಹೀಗೆ ಆಗುತ್ತಿರುವುದು ಮೂರನೇ ಬಾರಿ: ಆಕ್ರೋಶ ಹೊರಹಾಕಿದ ನಟಿ ತ್ರಿಶಾ!

ನಟಿ ತ್ರಿಶಾ, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ಸ್ಟೋರೀಸ್ ನಲ್ಲಿ ಸತತ ಮೂರನೇ ಬಾರಿಗೆ 'ದುರ್ವಾಸನೆ ಬೀರುವ' ಬಟ್ಟೆಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರು ಪ್ರಸಿದ್ಧ ಫ್ಯಾಷನ್ ರಿಟೇಲರ್ ಬ್ರ್ಯಾಂಡ್ 'ಝಾರಾ' ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ನಿಜಕ್ಕೂ 'ಅಸಹ್ಯಕರ' ಎಂದು ಕಿಡಿ ಕಾರಿದ್ದಾರೆ.

ನಟಿ ತ್ರಿಶಾ, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ಸ್ಟೋರೀಸ್ ನಲ್ಲಿ ಸತತ ಮೂರನೇ ಬಾರಿಗೆ 'ದುರ್ವಾಸನೆ ಬೀರುವ' ಬಟ್ಟೆಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತಾವು ಸತತವಾಗಿ ಮೂರು ಬಾರಿ ಆರ್ಡರ್ ಮಾಡಿ ತರಿಸಿಕೊಂಡ ಬಟ್ಟೆಗಳು ತೀವ್ರವಾದ ದುರ್ವಾಸನೆ ಹೊಂದಿದ್ದವು ಎಂದು ನಟಿ ತ್ರಿಶಾ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ನಟಿ ತ್ರಿಶಾ ಅವರು ಯಾವ ನಿರ್ದಿಷ್ಟ ಬಟ್ಟೆಗಳನ್ನು ಆರ್ಡರ್ ಮಾಡಿದ್ದರು ಎಂಬ ವಿವರಗಳನ್ನು ಮಾತ್ರ ತಮ್ಮ ಪೋಸ್ಟ್‌ನಲ್ಲಿ ಎಲ್ಲೂ ಉಲ್ಲೇಖಿಸಿಲ್ಲ.

ಇನ್‌ಸ್ಟಾಗ್ರಾಮ್ ಸ್ಟೋರೀಸ್

ಡಿಯರ್ @zara, @zaracare, ನನ್ನದೊಂದು ಸಣ್ಣ ವಿನಂತಿ. ಮುಂದಿನ ಬಾರಿ ನೀವು ಮನೆಗೆ ಬಟ್ಟೆಗಳನ್ನು ಡೆಲಿವರಿ ಮಾಡುವಾಗ, ದಯವಿಟ್ಟು ಆ ಬಟ್ಟೆಗಳಲ್ಲಿ ಸ್ವಲ್ಪವೂ ದೈಹಿಕ ದುರ್ವಾಸನೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ. ನನಗೆ ಸತತವಾಗಿ ಮೂರನೇ ಬಾರಿಗೆ ಈ ರೀತಿ ಆಗುತ್ತಿದೆ. ಇದು ನಿಜಕ್ಕೂ ಅತ್ಯಂತ ಅಸಹ್ಯಕರವಾಗಿದೆ. ಕನಿಷ್ಠ ಪ್ಯಾಕ್ ಮಾಡುವ ಮುನ್ನವಾದರೂ ಒಮ್ಮೆ ವಾಸನೆ ನೋಡಿ ಎಂದು ನಟಿ ತ್ರಿಶಾ ಕೃಷ್ಣನ್ ಬರೆದುಕೊಂಡಿದ್ದಾರೆ.

ನಟಿ ತ್ರಿಶಾ ಅವರ ಇನ್‌ಸ್ಟಾಗ್ರಾಮ್ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಹತ್ತಾರು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಯಾರೋ ಧರಿಸಿ ಮರಳಿಸಿದ ಬಟ್ಟೆಗಳನ್ನು ಈ ಬ್ರ್ಯಾಂಡ್ ಮರುಮಾರಾಟ ಮಾಡುತ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!