ಸಿನಿಮಾ ಸುದ್ದಿ

'ಪ್ರಕೃತಿಯ ಮಡಿಲಲ್ಲಿ ಪುಟ್ಟ, ಮುದ್ದಾದ ಮನೆ': ಹೊಸ ಮನೆಯ ವಿಡಿಯೋ ಹಂಚಿಕೊಂಡ ಅಕುಲ್‌ ಬಾಲಾಜಿ!

“ಪ್ರಕೃತಿಯ ಮಡಿಲಲ್ಲಿ ನಮ್ಮ ಪುಟ್ಟ, ಮುದ್ದಾದ ಮನೆ. ಮನಸ್ಸು ಮತ್ತೆ ಮತ್ತೆ ಮರಳಿಬರಲು ಬಯಸುವ ನೆಮ್ಮದಿಯ ತಾಣ”

ಬೆಂಗಳೂರು: ಕನ್ನಡದ ಜನಪ್ರಿಯ ನಿರೂಪಕ ಹಾಗೂ ನಟ ಅಕುಲ್‌ ಬಾಲಾಜಿ ಅವರು ಬೆಂಗಳೂರು ಸಮೀಪ ಪ್ರಕೃತಿಯ ಮಡಿಲಲ್ಲಿ ಬೃಹತ್‌ ಮನೆಯೊಂದನ್ನು ಕಟ್ಟಿದ್ದು, ಅದರ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಅಕುಲ್‌ ಬಾಲಾಜಿ ಮೂಲತಃ ಆಂಧ್ರ ಪ್ರದೇಶದವಾರದರೂ ಕನ್ನಡ ಕಲಿತು, ಕನ್ನಡದಲ್ಲಿ ಅತಿ ಹೆಚ್ಚು ನಿರೂಪಣೆ ಮಾಡಿ ಇಲ್ಲಿಯೇ ಜನಪ್ರಿಯತೆ ಗಳಿಸಿದ್ದಾರೆ.ಇದೀಗ ಹೊಸದಾಗಿ ಮನೆ ಕೂಡ ಕಟ್ಟಿದ್ದಾರೆ.

ಅಕುಲ್‌ ಬಾಲಾಜಿ ಬೆಟ್ಟ ಗುಡ್ಡಗಳ ಮಧ್ಯೆ ಒಂದು ಮನೆ ಕಟ್ಟಿದ್ದು, ಮನೆಯ ಸುತ್ತ ಎತ್ತ ನೋಡಿದರೂ ಹಚ್ಚ ಹಸಿರಿನ ಗಿಡಮರಗಳು ಕಣ್ಣಿಗೆ ಕಾಣುತ್ತವೆ. ಇನ್ನು ಈ ಕಾಲಕ್ಕೆ ತಕ್ಕಂತೆ ಇಂಟಿರಿಯರ್‌ ಡಿಸೈನ್‌ ಕೂಡ ಆಗಿದೆ.

ಹಸಿರಿನ ಮಧ್ಯೆ ಸುಂದರವಾದ, ವ್ಯವಸ್ಥಿತವಾದ ಮನೆ ಇದ್ದರೆ ಇನ್ನೇನು ಬೇಕು ಹೇಳಿ. ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ನೆಮ್ಮದಿ ಸಿಗುತ್ತದೆ.

ಪೋಸ್ಟ್‌ನಲ್ಲಿ ಅಕುಲ್‌ ಬಾಲಾಜಿ ಪತ್ನಿ ಹೇಳಿದ್ದೇನು?

“ಪ್ರಕೃತಿಯ ಮಡಿಲಲ್ಲಿ ನಮ್ಮ ಪುಟ್ಟ, ಮುದ್ದಾದ ಮನೆ. ಮನಸ್ಸು ಮತ್ತೆ ಮತ್ತೆ ಮರಳಿಬರಲು ಬಯಸುವ ನೆಮ್ಮದಿಯ ತಾಣ” ಎಂದು ಅಕುಲ್‌ ಬಾಲಾಜಿ ಅವರ ಪತ್ನಿ ಜ್ಯೋತಿ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಮ ಮಂದಿರ ಟ್ರಸ್ಟ್‌ನಿಂದ ಚಂಪತ್ ರಾಯ್‌ಗೆ ಗೇಟ್ ಪಾಸ್: ಪ್ರಧಾನ ಕಾರ್ಯದರ್ಶಿಯಾಗಿ ಬಜರಂಗ್ ಬಾಗ್ರಾ ನೇಮಕ?

Kishtwar ನಲ್ಲಿ ಭಾರೀ ಮಳೆ; ಕ್ವಾರ್ ಜಲವಿದ್ಯುತ್ ಯೋಜನೆ ಬಳಿ ಭೀಕರ ಭೂಕುಸಿತ, Video

4ನೇ ದಿನವೂ Indian Stock Market ಉತ್ತಮ ವಹಿವಾಟು; Sensex 500 ಅಂಕ ಏರಿಕೆ, 24,400 ಕ್ಕಿಂತ ಮೇಲೇರಿದ Nifty50

NEET UG 2026 ಮರುಪಾವತಿ ಆರಂಭ; ಜುಲೈ 7 ರೊಳಗೆ NEET UG 2026 ಪೋರ್ಟಲ್ ಮೂಲಕ ಬ್ಯಾಂಕ್ ವಿವರ ಸಲ್ಲಿಸಿ...

ಮುಂಗಾರು ಅಬ್ಬರ: ಮುಂಬೈ, ಥಾಣೆ, ರಾಯಗಡಕ್ಕೆ IMD ರೆಡ್ ಅಲರ್ಟ್; ಕನಿಷ್ಠ 13 ಸಾವು, ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ!