ನಾಗಬಂಧಂ ಯಶಸ್ಸಿನಲ್ಲಿ ನಭಾ ನಟೇಶ್ On;ine Desk
ಸಿನಿಮಾ ಸುದ್ದಿ

ಅಪಘಾತದ ನಂತರ ಪಟಾಕಿ ಪಾರ್ವತಿ ಭರ್ಜರಿ ಕಮ್ ಬ್ಯಾಕ್; ನಾಗಬಂಧಂ ಯಶಸ್ಸಿನಲ್ಲಿ ನಭಾ ನಟೇಶ್

ಕನ್ನಡ ಚಿತ್ರರಂಗದ ಸುಂದರಿ ನಭಾ ನಟೇಶ್ ಅವರು ಅಪಘಾತದ ನಂತರ ಮತ್ತೆ ಬಣ್ಣದ ಲೋಕದಲ್ಲಿ ‘ನಾಗಬಂಧಂ’ ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಇದರೊಂದಿಗೆ ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ ನಭಾ. ಆ ಕುರಿತ ವರದಿ ಇಲ್ಲಿದೆ.

Nabha Natesh: ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಭಾ ನಟೇಶ್ (Nabha Natesh) ನಂತರದಲ್ಲಿ ಟಾಲಿವುಡ್ ಪ್ರವೇಶಿಸಿ ಸಾಲು ಸಾಲು ಸೂಪರ್ ಹಿಟ್ ಚಿತ್ರಗಲ್ಲಿ ನಟಿಸಿ ತೆಲಗು ಜನರ ಮನಗೆದ್ದರು. ಆದರೆ, 2022ರ ಅಪಘಾತದ ನಂತರ ಬೆಳ್ಳಿಪರದೆಯಿಂದ ಸ್ವಲ್ಪ ದೂರವೇ ಉಳಿದ್ದರು. ಇದ್ರಿಂದ ಚೇತರಿಸಿಕೊಂಡ ಪಟಾಕಿ ಪಾರ್ವತಿ ಇದೀಗ ನಾಗಬಂಧಂ ಚಿತ್ರದ ಮೂಲಕ ಭರ್ಜರಿ ರೀ-ಎಂಟ್ರಿ ನೀಡಿದ್ದಾರೆ. ಇದರೊಂದಿಗೆ ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ ನಭಾ. ಆ ಕುರಿತ ವರದಿ ಇಲ್ಲಿದೆ.

ನಾಗಬಂಧಂ ಭರ್ಜರಿ ಯಶಸ್ಸು

ಅಪಘಾತದ ನಂತರ ನಾಗಬಂಧಂ ಎಂಬ ಪೌರಾಣಿಕ ಆಕ್ಷನ್-ಅಡ್ವೆಂಚರ್ ಚಿತ್ರದ ಮೂಲಕ ನಾಯಕ ನಟಿಯಾಗಿ ನಭಾ ನಟೇಶ್ ಸಿನಿರಂಗಕ್ಕೆ ರೀ-ಎಂಟ್ರಿ ನೀಡಿದ್ದಾರೆ. 110 ಕೋಟಿ ಬಿಗ್ ಬಜೆಟ್ನ ಈ ಚಿತ್ರ ಬಿಡುಗಡೆಯಾದ ಕೇವಲ 7 ದಿನಕ್ಕೆ 19.78 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅದರಲ್ಲೂ, ಚಿತ್ರದ ಮೊದಲ ದಿನವೇ 3.25 ಕೋಟಿ ಗಳಿಕೆಯೊಂದಿಗೆ ಉತ್ತಮ ಓಪನಿಂಗ್ ಪಡೆದುಕೊಂಡಿತ್ತು. ಇನ್ನು ಈ ಚಿತ್ರದಲ್ಲಿ ವಿರಾಟ್ ಕರ್ಣ ಮುಖ್ಯ ಪಾತ್ರದಲ್ಲಿದ್ದು, ನಭಾ ನಟೇಶ್ ಅವರೊಂದಿಗೆ ಐಶ್ವರ್ಯಾ ಮೆನನ್ ಸಹ ನಾಯಕಿಯಾಗಿ ನಟಿಸಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ

ನಾಗಬಂಧಂ ಭರ್ಜರಿ ಯಶಸ್ಸಿನೊಂದಿಗೆ ಬೀಗುತ್ತಿರುವ ನಭಾ ನಟೇಶ್ ಅವರ ಸ್ವಯಂಭು ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಅಪ್ಪಳಿಸಲಿದೆ. ನಿಖಿಲ್ ಸಿದ್ಧಾರ್ಥ್ ನಾಯಕ ನಟರಾಗಿ ನಟಿಸುತಿರುವ ಈ ಸಿನಿಮಾ ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ಐತಿಹಾಸಿಕ ಆಕ್ಷನ್ ಚಿತ್ರವಾಗಿದೆ. ಇದರಲ್ಲಿ ನಿಖಿಲ್‌ಗೆ ಜೋಡಿಯಾಗಿ ನಭಾ ನಟಿಸುತ್ತಿದ್ದಾರೆ. ಇದಾದ ನಂತರ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ನಾಯಕ ನಟರಾಗಿ ನಟಿಸುತ್ತಿರುವ ಟೈಸನ್ ನಾಯ್ಡು ಚಿತ್ರದಲ್ಲಿಯೂ ನಭಾ ನಟೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದರ ಜೊತೆಗೆ ಸಾಲು ಸಾಲು ಹೊಸ ಬಿಗ್ ಆಫರ್‌ಗಳು ಕೂಡಾ ನಭಾ ಅವರನ್ನು ಹುಡುಕಿಕೊಂಡು ಬರುತ್ತಿದ್ದು, ಮುಂಬರುವ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಈ ಮೂಲಕ 2022ರ ಅಪಘಾತದ ನಂತರ ಬೆಳ್ಳಿಪರದೆಯಲ್ಲಿ ಭರ್ಜರಿಯಾಗಿ ಮಿಂಚಲು ಸಿದ್ಧವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!