ಜಾಕಿ 42 ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಕಿರಣ್ ರಾಜ್ ನಟನೆಯ 'ಜಾಕಿ 42' ಚಿತ್ರದ ಮೊದಲ ಹಾಡು ರಿಲೀಸ್; ಧ್ವನಿ ನೀಡಿದ ಅರ್ಮಾನ್ ಮಲಿಕ್, ಪಲಾಶ್ ಮುಚ್ಚಲ್ ಸೋದರಿ!

ಗೋಲ್ಡನ್ ಗೇಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿರುವ 'ಜಾಕಿ 42' ಚಿತ್ರಕ್ಕೆ ಗುರುತೇಜ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ.

ಗುರುತೇಜ್ ಶೆಟ್ಟಿ ನಿರ್ದೇಶನದ ಮತ್ತು ಕಿರಣ್ ರಾಜ್ ನಾಯಕನಾಗಿ ನಟಿಸಿರುವ 'ಜಾಕಿ 42' ಚಿತ್ರತಂಡ ಇದೀಗ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.

'ಮುತ್ತು ಮುತ್ತು ಮತ್ತಾಯಿತಾ' ಎಂಬ ಹೆಸರಿನ ಈ ಗೀತೆಯನ್ನು ನಾಗಾರ್ಜುನ ಶರ್ಮಾ ಬರೆದಿದ್ದಾರೆ ಮತ್ತು ವಿನೋದ್ ಯಜಮಾನ್ಯ ಸಂಗೀತ ಸಂಯೋಜಿಸಿದ್ದಾರೆ. ಬಾಲಿವುಡ್‌ನ ಪ್ರಸಿದ್ಧ ಹಿನ್ನೆಲೆ ಗಾಯಕರಾದ ಅರ್ಮಾನ್ ಮಲಿಕ್ ಮತ್ತು ಪಾಲಕ್ ಮುಚ್ಚಲ್ ಈ ಗೀತೆಗೆ ಧ್ವನಿ ನೀಡಿದ್ದಾರೆ.

ಗೋಲ್ಡನ್ ಗೇಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿರುವ 'ಜಾಕಿ 42' ಚಿತ್ರಕ್ಕೆ ಗುರುತೇಜ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕುದುರೆ ಓಟದ ಹಿನ್ನೆಲೆಯಲ್ಲಿ ಹೆಣೆಯಲಾದ ಈ ಚಿತ್ರವು, ಈ ಕ್ರೀಡೆಯನ್ನು ಕೇಂದ್ರ ವಿಷಯವಾಗಿ ಅನ್ವೇಷಿಸಿದ ಮೊದಲ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಈ ಹಿಂದೆ ಬಿಡುಗಡೆಯಾದ ಟೀಸರ್, ಅದರ ವಿಶಿಷ್ಟ ಚಿತ್ರಣ ಮತ್ತು ಪ್ರಭಾವಶಾಲಿ ಮೇಕಿಂಗ್‌ಗಾಗಿ ಕುತೂಹಲ ಹುಟ್ಟುಹಾಕಿತು. ಚಿತ್ರದ ಮೊದಲ ಹಾಡಿಗೂ ಮೆಚ್ಚುಗೆ ವ್ಯಕ್ತವಾಗಿದೆ.

ಚಿತ್ರದಲ್ಲಿ ಕಿರಣ್ ರಾಜ್, ಹೃತಿಕ್ ಶ್ರೀನಿವಾಸ್, ಯುಕ್ತಾ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂಧನ್ ರಾವ್, ಗಿರೀಶ್ ಹೆಗಡೆ, ಅರುಣ್ ಆಚಾರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರಾಘವೇಂದ್ರ ಕೋಲಾರ್ ಅವರ ಛಾಯಾಗ್ರಹಣ ಮತ್ತು ಉಮೇಶ್ ಆರ್.ಬಿ. ಅವರ ಸಂಕಲನವಿರುವ 'ಜಾಕಿ 42' (Jockey 42) ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದೆ. ಚಿತ್ರತಂಡವು ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌದಿ ಮೇಲೆ ಕ್ಷಿಪಣಿ ದಾಳಿ; Houthi ಉಗ್ರರ ವಿರುದ್ಧ ಸಿಡಿದೆದ್ದ ಭಾರತ, 'ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ದಾಳಿ ಒಪ್ಪಲ್ಲ' ಎಂದು ಗುಡುಗು

ನಟ ಕಿರಣ್ ರಾಜ್ ಮೇಲೆ ಏಕಾಏಕಿ ಸಿಂಹ ದಾಳಿ, ಸ್ಪಷ್ಟನೆ ಕೊಟ್ಟ 'ಕರ್ಣ' ಹೇಳಿದ್ದೇನು? Video

ಬೆಂಗಳೂರು: ರೀಲ್ಸ್ ವಿಚಾರಕ್ಕೆ ಗಲಾಟೆ; ಬಿಯರ್ ಬಾಟಲ್‌ನಿಂದ ಪತ್ನಿ ಕೊಂದು ಪತಿ ಆತ್ಮಹತ್ಯೆ!

CJPಗೆ ಬಿಗ್ ಶಾಕ್; 2 ಕೋಟಿ ಮಾನನಷ್ಟ ಮೊಕದ್ದಮೆ, ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಹಿರಿಯ ವಕೀಲ Gaurav Bhatia!

"Angoor Khatte Hain": ರಿಯಾಲಿಟಿ ಶೋಗಳು 'ಫೇಕ್' ಎಂದಿದ್ದ ಸುನಿಧಿ ಚೌಹಾಣ್ ಗೆ ನೇಹಾ ಕಕ್ಕರ್ ತಿರುಗೇಟು! Video