ಜೆನಿಫರ್ ವಿಂಗೆಟ್ 
ಸಿನಿಮಾ ಸುದ್ದಿ

ಜೆನಿಫರ್ ವಿಂಗೆಟ್ ಗೆ 2ನೇ ಮದುವೆ: ಬ್ಯುಸಿನೆಸ್‌ಮ್ಯಾನ್‌ ವಿಲಿಯಂ ಇಸ್ಮಾಯಿಲ್ ಕೈ ಹಿಡಿದ ಖ್ಯಾತ ಕಿರುತೆರೆ ನಟಿ!

ಜೆನಿಫರ್ ವಿಂಗೆಟ್ ಮೊದಲ ಪತಿ ಯಾರು? ಜೆನಿಫರ್ ವಿಂಗೆಟ್, 'ದಿಲ್ ಮಿಲ್ ಗಯೆ' ಸೀರಿಯಲ್‌ನ ಸಹನಟ ಕರಣ್ ಸಿಂಗ್ ಗ್ರೋವರ್ ಜೊತೆ ಮೊದಲ ಮದುವೆಯಾಗಿದ್ದರು.

ಟಿವಿ ನಟಿ ಜೆನ್ನಿಫರ್ ವಿಂಗತ್ ಎರಡನೇ ಮದುವೆಯಾಗಿದ್ದು,ಸಿಂಗಾಪುರದ ಬ್ಯುಸಿನೆಸ್‌ಮ್ಯಾನ್‌ ವಿಲಿಯಂ ಇಸ್ಮಾಯಿಲ್ ಅವರ ಕೈಹಿಡಿದಿದ್ದಾರೆ. ವಿಂಗತ್ ಬೇಹದ್ ಮತ್ತು 'ಸರಸ್ವತಿಚಂದ್ರ'ದಂತಹ ಧಾರವಾಹಿಗಳ ಮೂಲಕ ಅವರು ಜನಪ್ರಿಯರಾಗಿದ್ದರು. ಈ ಸೀರಿಯಲ್ ಮನೆ ಮಾತಾಯಿತು. ಶನಿವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊ ಪೋಸ್ಟ್ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಈ ವೀಡಿಯೊದಲ್ಲಿ ಹಲವು ಫೋಟೋಗಳ ಸರಣಿಯಿದ್ದು, ವೀಡಿಯೊದ ಒಂದು ಸ್ಲೈಡ್‌ನಲ್ಲಿ, ಸಭಿಕರೇ, ದಯವಿಟ್ಟು ಎದ್ದು ನಿಲ್ಲಿ. ನನ್ನ ಪತಿ 'ವಿಲ್' ಅವರನ್ನು ಅಧಿಕೃತವಾಗಿ ನಿಮಗೆ ಪರಿಚಯಿಸುತ್ತಿದ್ದೇನೆ ಎಂದು ಬರೆಯಲಾಗಿದೆ. ಇದಾದ ನಂತರದ ಸ್ಲೈಡ್‌ನಲ್ಲಿ ಉಂಗುರಗಳ ಚಿತ್ರವಿದ್ದು, ಅದರ ಮೇಲೆ "ಜಸ್ಟ್ ಮ್ಯಾರೀಡ್" (ನೂತನ ದಂಪತಿ) ಎಂದು ಬರೆಯಲಾಗಿದೆ.

ವಿಂಗೆಟ್ ಬಿಳಿ ಬಣ್ಣದ 'ಆಫ್-ಶೋಲ್ಡರ್ ಕಾರ್ಸೆಟ್' ಉಡುಪನ್ನು ಧರಿಸಿದ್ದರೆ, ಇಸ್ಮಾಯಿಲ್ ನೀಲಿ ಬಣ್ಣದ ಸೂಟ್ ಮತ್ತು ಬಿಳಿ ವೇಸ್ಟ್‌ಕೋಟ್ (waistcoat)ಧರಿಸಿದ್ದರು. "ಅಂತಿಮವಾಗಿ ನಮ್ಮ ನಕ್ಷತ್ರಗಳು ಒಂದಾದವು! ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಜೆನಿಫರ್ ವಿಂಗೆಟ್ ಮೊದಲ ಪತಿ ಯಾರು? ಜೆನಿಫರ್ ವಿಂಗೆಟ್, 'ದಿಲ್ ಮಿಲ್ ಗಯೆ' ಸೀರಿಯಲ್‌ನ ಸಹನಟ ಕರಣ್ ಸಿಂಗ್ ಗ್ರೋವರ್ ಜೊತೆ ಮೊದಲ ಮದುವೆಯಾಗಿದ್ದರು. ಟಿವಿ ಶೋ ಸೆಟ್‌ನಲ್ಲಿ ಇಬ್ಬರಿಗೂ ಪ್ರೀತಿಯಾಗಿ, ಕೆಲವು ವರ್ಷಗಳ ಡೇಟಿಂಗ್ ನಂತರ ಮದುವೆಯಾಗಲು ನಿರ್ಧರಿಸಿದ್ದರು.

2012ರಲ್ಲಿ ಮದುವೆಯಾದ ಈ ಜೋಡಿ, ಹೆಚ್ಚು ದಿನ ಜೊತೆಗಿರಲಿಲ್ಲ. 2014ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ, ಕರಣ್ ಬಾಲಿವುಡ್ ನಟಿ ಬಿಪಾಶಾ ಬಸು ಅವರನ್ನು ಮದುವೆಯಾದರು. ಈ ದಂಪತಿಗೆ ದೇವಿ ಎಂಬ ಮಗಳಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!