ನಿತೀಶ್ ಭಾರದ್ವಾಜ್ ಮತ್ತು ರಣಬೀರ್ ಕಪೂರ್  
ಸಿನಿಮಾ ಸುದ್ದಿ

ರಾಮಾಯಣ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ರಣಬೀರ್ ಕಪೂರ್ ಗೆ ನಿತೀಶ್ ಭಾರದ್ವಾಜ್ ಕಿವಿಮಾತು!

ಬಿ.ಆರ್. ಚೋಪ್ರಾ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿದ್ದ ಹಿರಿಯ ನಟ ನಿತೀಶ್ ಭಾರದ್ವಾಜ್ ಹೊಸ ರಾಮಾಯಣ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಮುಂಬಯಿ: ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ ಒನ್’ ಸಿನಿಮಾದ ಟ್ರೈಲರ್ ಜುಲೈ 31ರಂದು ಬಿಡುಗಡೆಯಾಗಿದೆ.

ಬಿ.ಆರ್. ಚೋಪ್ರಾ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿದ್ದ ಹಿರಿಯ ನಟ ನಿತೀಶ್ ಭಾರದ್ವಾಜ್ ಹೊಸ ರಾಮಾಯಣ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಮಾಯಣ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಶೇ. 100ರಷ್ಟು ಆಸ್ಕರ್ ಪ್ರಶಸ್ತಿ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಅವರನ್ನು ಸತ್ಯಜಿತ್ ರೇ ಮತ್ತು ಶೇಖರ್ ಕಪೂರ್ ಅವರಿಗೆ ಹೋಲಿಸಿದ್ದಾರೆ. ನಟ ನಿತೀಶ್ ಭಾರದ್ವಾಜ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ರಣಬೀರ್ ಕಪೂರ್ ಈಗ ರಣವೀರ್ ಸಿಂಗ್ ಅವರಷ್ಟೇ ಪ್ರತಿಭಾವಂತ ನಟ ಎಂದು ನಿತೀಶ್ ಹೊಗಳಿದ್ದಾರೆ. ಭಾರತೀಯ ಚಿತ್ರರಂಗದ ಇಬ್ಬರು ಅಜೇಯ ಧುರಂಧರರಲ್ಲಿ ರಣಬೀರ್ ಕೂಡ ಒಬ್ಬರಾಗಿದ್ದಾರೆ ಎಂದಿದ್ದಾರೆ. ಇದೇ ವೇಳೆ ರಾವಣನ ಪಾತ್ರ ಮಾಡಿರುವ ನಟ ಯಶ್ ಅವರನ್ನು ಜಾಗತಿಕ ಚಿತ್ರರಂಗಕ್ಕೆ ಸ್ವಾಗತಿಸಿದ್ದಾರೆ.

ನಟ ರಣಬೀರ್ ಕಪೂರ್‌ಗೆ ನಿತೀಶ್ ಭಾರದ್ವಾಜ್ ಒಂದು ಕಿವಿಮಾತು ಹೇಳಿದ್ದಾರೆ. ಇನ್ನು ಮುಂದೆ ‘ಅನಿಮಲ್’ ತರಹದ ಸಿನಿಮಾಗಳನ್ನು ಮಾಡಬೇಡಿ ಎಂದು ವಿನಂತಿಸಿದ್ದಾರೆ.

ಕೋಟಿ ಕೋಟಿ ಹಣ ಸಿಕ್ಕರೂ ಇಂತಹ ಚಿತ್ರಗಳಿಂದ ದೂರವಿರಿ ಎಂದಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಈಗ ರಣಬೀರ್ ಮೇಲಿದೆ ಎಂದು ನೆನಪಿಸಿದ್ದಾರೆ. ಇನ್ನೂ ನಟು ಸಾಯಿ ಪಲ್ಲವಿಯ ಸೀತೆಯ ಪಾತ್ರವನ್ನು ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತೆರಿಗೆ ನೀತಿ ಚರ್ಚೆಗಳು ವಲಯ ಹಿತಾಸಕ್ತಿ ಮೀರಬೇಕು: ಒಟ್ಟಾರೆ ಆರ್ಥಿಕತೆಯ ಅಗತ್ಯತೆಗಳ ಮೇಲೆ ಗಮನ ಹರಿಸಬೇಕು- ನಿರ್ಮಲಾ ಸೀತಾರಾಮನ್

ಸಚಿನ್ ತೆಂಡುಲ್ಕರ್‌ರ ದೀರ್ಘಕಾಲೀನ ODI ದಾಖಲೆ ಮುರಿದ ಬ್ರೆಂಡನ್ ಟೇಲರ್; ಆದ್ರೆ ಒಂದು ಟ್ವಿಸ್ಟ್ ಇದೆ!

ಉಮರ್ ಖಾಲಿದ್ ನ್ಯಾಷನಲಿಸ್ಟ್ ಹೇಳಿಕೆ: KPCC ಅಧ್ಯಕ್ಷ ಬಿಕೆ ಹರಿಪ್ರಸಾದ್ ವಿರುದ್ಧ ದೂರು

ಇದೇ ಮೊದಲ ಬಾರಿಗೆ ಮೆಕ್ಕಾ ಬಳಿ ಮೊಳಗಿದ ಸೈರನ್: ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ!

ಸಕಲೇಶಪುರದ ಲಾಡ್ಜ್‌ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿ ಸಾವು!