ಶ್ವೇತಾ ಮೆನನ್ 
ಸಿನಿಮಾ ಸುದ್ದಿ

ಮಲಯಾಳಂ ಚಲನಚಿತ್ರ ಕಲಾವಿದರ ಸಂಘ AMMA ಅಧ್ಯಕ್ಷೆ ಸ್ಥಾನಕ್ಕೆ ಶ್ವೇತಾ ಮೆನನ್ ಗುಡ್ ಬೈ! ಇಡೀ ಕಾರ್ಯಕಾರಿ ಸಮಿತಿ ರಾಜೀನಾಮೆ!

ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ಹಾಗೂ ಅಕೌಂಟ್ ಸ್ಟೇಟ್ ಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ನಂತರ ಈ ಬೆಳವಣಿಗೆಯಾಗಿದೆ.

ಕೊಚ್ಚಿ: ಕೇರಳದ ಮಲಯಾಳಂ ಚಲನಚಿತ್ರ ಕಲಾವಿದರ ಸಂಘವಾದ 'AMMA' (Association of Malayalam Movie Artistes)ದ ಅಧ್ಯಕ್ಷ ಸ್ಥಾನಕ್ಕೆ ಶ್ವೇತಾ ಮೆನನ್ ಹಾಗೂ ಅವರ ನೇತೃತ್ವದ ಕಾರ್ಯಕಾರಿ ಸಮಿತಿಯ 17 ಸದಸ್ಯರು ಭಾನುವಾರ ರಾಜೀನಾಮೆ ನೀಡಿದ್ದಾರೆ.

ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ಹಾಗೂ ಅಕೌಂಟ್ ಸ್ಟೇಟ್ ಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ನಂತರ ಈ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ವಿಚಾರಗಳಲ್ಲಿ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದೊಳಗೆ ಭಿನ್ನಾಭಿಪ್ರಾಯಗಳು ಕೇಳಿಬರುತಿತ್ತು.

ಈ ನಡುವೆ ಈ ವಿದ್ಯಮಾನ ನಡೆದಿದೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ವಾರ್ಷಿಕ ವರದಿಯ ಅಂಗೀಕಾರ ಮತ್ತು ಲೆಕ್ಕಪತ್ರಗಳ ಹೇಳಿಕೆ ಕುರಿತು ಸದಸ್ಯರ ನಡುವೆ ಗಂಟೆಗಂಟಲೇ ಮಾತಿನ ಚಕಮಕಿ ನಡೆದಿದೆ. ತದನಂತರ ರಾಜೀನಾಮೆ ನೀಡಲಾಗಿದೆ ಎಂದು ವರದಿಯಾಗಿದೆ.

ಸಂಘದ ಪ್ರಧಾನ ಕಾರ್ಯದರ್ಶಿ ಕುಕು ಪರಮೇಶ್ವರನ್ ಮಂಡಿಸಿದ ವಾರ್ಷಿಕ ವರದಿಯಲ್ಲಿರುವ ಆದಾಯ ಮತ್ತು ವೆಚ್ಚದ ವಿವರಗಳಲ್ಲಿ ಸ್ಪಷ್ಟತೆಯ ಕೊರತೆಯಿದೆ ಎಂದು ಹಲವು ಸದಸ್ಯರು ಆಕ್ಷೇಪಿಸಿದ್ದಾರೆ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ವಿವಾದ ಉಲ್ಬಣಗೊಳ್ಳುತ್ತಿದ್ದಂತೆ ಶ್ವೇತಾ ಮೆನನ್ ಸಂಘದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದ್ದಾರೆ.

ತದನಂತರ ಅವರ ನೇತೃತ್ವದ ಇಡೀ ಕಾರ್ಯಕಾರಿ ಸಮಿತಿಯೂ ರಾಜೀನಾಮೆ ನೀಡಿದೆ. ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ನಾನು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ಸಂಘದಿಂದ ಹೊರಬಂದಿದ್ದೇನೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಸಂಸ್ಥೆಯ ಖಜಾಂಚಿ ಪರಾರಿಯಾಗಿದ್ದರು. ಅಮ್ಮಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿ ನಂತರ ದೂರು ದಾಖಲಿಸಿದಾಗ, ಈ ಸಮಸ್ಯೆಯನ್ನು ಬಗೆಹರಿಸಲಾಗಿಲ್ಲ. ಬದಲಾಗಿ, ಖಜಾಂಚಿ ನಾಪತ್ತೆಯಾಗಿದ್ದರು, ಆದ್ದರಿಂದ ನಾವು ಆ ಅವಧಿಯ ಲೆಕ್ಕಪತ್ರಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ರಾಜ್ಯ ಸಂಸ್ಕೃತಿ ಸಚಿವ ಪಿ. ಸಿ. ವಿಷ್ಣುನಾಥ್, ಅದು ಸಂಸ್ಥೆಯ ಆಂತರಿಕ ವಿಚಾರವಾಗಿದ್ದು, ಅದರಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tri Series Final: ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ; ಶ್ರೀಲಂಕಾ ಹುಟ್ಟಡಗಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ!

ರಾಮನ ಹೆಸರಿನಲ್ಲಿ ಲೂಟಿ: ಸುಮಾರು 5,000 ಕೋಟಿ ರೂ. ಹಣ ದುರ್ಬಳಕೆ, ಬಿಜೆಪಿ ವಿರುದ್ಧ ಖರ್ಗೆ ಕಿಡಿ!

ಕಾಂಗ್ರೆಸ್ ಸಮಾವೇಶದಿಂದ ಟ್ರಾಫಿಕ್ ಜಾಮ್ ? : NEET ಪರೀಕ್ಷೆಗೆ ತಡವಾಗಿ ಬಂದರೆಂದು ಪ್ರವೇಶ ನಿರಾಕರಣೆ, ಕಣ್ಣೀರು ಹಾಕಿದ ವಿದ್ಯಾರ್ಥಿಗಳು-Video

ತಮಿಳುನಾಡು ಸಮುದ್ರಾಹಾರ ರಫ್ತು ಘಟಕದಲ್ಲಿ ಅನಿಲ ಸೋರಿಕೆ: ಇಬ್ಬರು ಸಾವು, 46 ಮಂದಿ ಆಸ್ಪತ್ರೆಗೆ ದಾಖಲು

ಅಡ್ಡ ಮತದಾನ: ಯಾವುದೇ ಒಂದು ಘಟನೆಯಿಂದ ನಾಯಕತ್ವ ಕೊರತೆ ಎನ್ನುವುದು ತಪ್ಪು- ಪ್ರಲ್ಹಾದ್ ಜೋಶಿ