ಇತ್ತೀಚಿಗೆ ನಟ ಕಿಶನ್ ಜೊತೆಗೆ ನವಿಲುಗರಿ ಬಳಸಿ ನೃತ್ಯ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ, ಇದೀಗ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಹಸುವಿನ ಕೆಚ್ಚಲಿಗೆ ಕೈ ಹಾಕಿ ಹಾಲು ಕರೆದು ಸಂಭ್ರಮಿಸಿದ್ದಾರೆ.
ಎಸ್‌ಪಿಬಿ ಹಾಡಿರುವ 'ಹಳ್ಳಿ ಹಾಡು..' ಗೀತೆಯೊಂದಿಗೆಈ ರೀಲ್ಸ್‌ಅನ್ನು ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಪೋಸ್ಟ್ ಮಾಡಿದ ಐದು ಗಂಟೆಯಲ್ಲಿ 5 ಲಕ್ಷ ವೀಕ್ಷಣೆ ಕಂಡಿದೆ.
ಹೆಚ್ಚಿನವರು ನಿವೇದಿತಾ ಗೌಡ ಅವರ ಈ ರೀಲ್ಸ್ ನ್ನು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
28 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿದ್ದು ಎಂದಿನಂತೆ ನಿವೇದಿತಾ ಅವರ ವಿಡಿಯೋಗೆ ಸಾಕಷ್ಟು ಭಿನ್ನ ವಿಭಿನ್ನ ಕಾಮೆಂಟ್‌ಗಳೂ ಬಂದಿವೆ. ಗುಲಾಬಿ ಬಣ್ಣದ ಟಾಪ್ ಹಾಗೂ ತಿಳಿ ನೀಲಿ ಜೀನ್ಸ್ ತೊಟ್ಟಿರುವ ನಿವೇದಿತಾ ಗೌಡ ಅವರ ಡ್ರೆಸ್ಸಿಂಗ್ ಸೆನ್ಸ್ ಅನ್ನೂ ಹಲವರು ಮೆಚ್ಚಿದ್ದಾರೆ.