ದಳಪತಿ ವಿಜಯ್, ಸಂಗೀತ 
ಸಿನಿಮಾ ಸುದ್ದಿ

'ಆ ಮನೆಯಲ್ಲಿ ವಾಸಿಸಲು ನಾನು ಸಂಪೂರ್ಣ ಹಕ್ಕುದಾರೆ': ಮತ್ತೆ ಕೋರ್ಟ್ ಮೆಟ್ಟಿಲೇರಿದ ವಿಜಯ್ ಪತ್ನಿ ಸಂಗೀತ

ಈ ಅರ್ಜಿಯನ್ನು ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿಯೇ ಸಲ್ಲಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 30ಕ್ಕೆ ನಿಗದಿಪಡಿಸಲಾಗಿದ್ದು, ಆ ದಿನ ದಳಪತಿ ವಿಜಯ್ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ನಟ–ರಾಜಕಾರಣಿ ದಳಪತಿ ವಿಜಯ್ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ, ವಿಚ್ಛೇದನ ಅರ್ಜಿ ಸಲ್ಲಿಸಿದ ಕೆಲವೇ ದಿನಗಳ ನಂತರ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ. ಚೆಂಗಲ್ಪಟ್ಟು ಫ್ಯಾಮಿಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ಅವರು, ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ತಮಗೆ ನೀಲಂಕರೈಯಲ್ಲಿರುವ ವಿಜಯ್ ಮನೆಯಲ್ಲಿ ವಾಸಿಸಲು ಅವಕಾಶ ನೀಡುವಂತೆ ವಿಜಯ್ ಅವರಿಗೆ ನಿರ್ದೇಶಿಸಲು ನ್ಯಾಯಾಲಯವನ್ನು ಕೇಳಿದ್ದಾರೆ.

1999ರಲ್ಲಿ ವಿಜಯ್ ಅವರೊಂದಿಗೆ ವಿವಾಹವಾಗಿರುವ ಸಂಗೀತಾ, ಫೆಬ್ರವರಿ 27ರಂದು ತಮ್ಮ ದಾಂಪತ್ಯ ಜೀವನದಲ್ಲಿ ಸರಿಹೊಂದಿಸಲಾಗದ ಭಿನ್ನಾಭಿಪ್ರಾಯಗಳು, ವ್ಯಭಿಚಾರದ ಆರೋಪಗಳು ಮತ್ತು ಮಾನಸಿಕ ಒತ್ತಡದ ಆಧಾರದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಇದೀಗ ಮತ್ತೆ ಹೊಸದಾಗಿ ಸಲ್ಲಿಸಿದ ಅರ್ಜಿಯಲ್ಲಿ ಅವರು, ತಾವು ಬ್ರಿಟಿಷ್ ನಾಗರಿಕತ್ವ ಹೊಂದಿದ್ದು ಪ್ರಸ್ತುತ ಲಂಡನ್ ನಲ್ಲಿ ವಾಸಿಸುತ್ತಿರುವುದರಿಂದ, ಚೆನ್ನೈಯಲ್ಲಿ ತಮ್ಮದೇ ಮನೆ ಇಲ್ಲ ಎಂದು ಉಲ್ಲೇಖಿಸಿ, ವಿಚ್ಛೇದನದ ನಂತರ ಬೇರೆ ಮನೆಗೆ ಸ್ಥಳಾಂತರವಾಗುವವರೆಗೆ ನೀಲಂಕರೈ ಮನೆಯಲ್ಲೇ ವಾಸಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ವಿಚ್ಛೇದನ ಅರ್ಜಿಯಲ್ಲಿ ಸಂಗೀತಾ ಅವರು, 2021ರಿಂದ ವಿಜಯ್ ಒಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದಾರೆ. ಜೊತೆಗೆ, ತಮ್ಮ ಮೇಲೆ ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ನಿರ್ಲಕ್ಷ್ಯ ತೋರಿಸಲಾಗಿದೆ ಹಾಗೂ ಮಾತಿನ ಅವಮಾನಕ್ಕೂ ಒಳಗಾಗಿದ್ದೆ ಎಂದು ಹೇಳಿದ್ದಾರೆ.

ಅವರ ಆರ್ಥಿಕ ಸ್ವಾತಂತ್ರ್ಯಕ್ಕೂ ನಿರ್ಬಂಧ ಹಾಕಲಾಗಿದ್ದು, ಮುಕ್ತವಾಗಿ ಸಂಚರಿಸುವುದಕ್ಕೂ ಅಡ್ಡಿಪಡಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ನವೆಂಬರ್ 2025ರಲ್ಲಿ ವಿವಾಹ ಜೀವನದಿಂದ ಪರಸ್ಪರ ಗೌರವಪೂರ್ಣವಾಗಿ ಹೊರಬರುವ ಸಾಧ್ಯತೆ ಕುರಿತು ಇಬ್ಬರ ನಡುವೆ ಕೊನೆಯ ಮಾತುಕತೆ ನಡೆದಿತ್ತು ಎಂದು ಕೂಡ ಅವರು ತಿಳಿಸಿದ್ದಾರೆ.

ಈ ಅರ್ಜಿಯನ್ನು ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿಯೇ ಸಲ್ಲಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 30ಕ್ಕೆ ನಿಗದಿಪಡಿಸಲಾಗಿದ್ದು, ಆ ದಿನ ದಳಪತಿ ವಿಜಯ್ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಕಾನೂನು ಕ್ರಮ
ಸಂಗೀತಾ ಅವರು ಕಾನೂನು ಪ್ರಕ್ರಿಯೆಯ ಭಾಗವಾಗಿ ತಮ್ಮ ವೈವಾಹಿಕ ಜೀವನದ ಸಮಯದಲ್ಲಿ ಚೆನ್ನೈಯಲ್ಲಿ ವಾಸಿಸುತ್ತಿದ್ದ ಮನೆಯಲ್ಲಿ ಇನ್ನು ಮುಂದೆ ಕೂಡ ವಾಸಿಸುವ ಹಕ್ಕನ್ನು ಉಳಿಸಿಕೊಳ್ಳಲು ನ್ಯಾಯಾಲಯವನ್ನು ಕೇಳಿದ್ದಾರೆ. ಸಂಗೀತ ತಮ್ಮ ಅರ್ಜಿಯಲ್ಲಿ, ತಾನು ಸದಾ ಕರ್ತವ್ಯನಿಷ್ಠ ಪತ್ನಿ ಮತ್ತು ತಾಯಿ ಆಗಿದ್ದರೂ ಆ ಮನೆಯಲ್ಲಿ ವಾಸಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ಹೇಳಿ, ಅಲ್ಲಿ ವಾಸಿಸುವ ಹಕ್ಕನ್ನು ನೀಡುವಂತೆ ನ್ಯಾಯಾಲಯವನ್ನು ಕೇಳಿದ್ದಾರೆ.

ವಿಜಯ್ ಮತ್ತು ಸಂಗೀತಾ 1999ರಲ್ಲಿ ವಿವಾಹವಾಗಿದ್ದು, ಕಳೆದೆರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 9ನೇ ಶತಕ ಸಿಡಿಸಿದ KL Rahul: 10,000 ಅಂತಾರಾಷ್ಟ್ರೀಯ ರನ್!

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

'ಅಶ್ಲೀಲ, ಅಸಭ್ಯ, ವಿಕೃತಿ': TVK ಮಹಿಳಾ ಅಭ್ಯರ್ಥಿ ಕುರಿತ ಸ್ಟಾಲಿನ್ ಹೇಳಿ ಖಂಡಿಸಿದ CM ವಿಜಯ್; ಚುನಾವಣಾ ಆಯೋಗಕ್ಕೆ ದೂರು

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video