ಹನ್ಸಿಕಾ ಮೊಟ್ವಾನಿ ಮತ್ತು ಸೊಹೇಲ್‌ ಖತುರಿಯಾ 
ಸಿನಿಮಾ ಸುದ್ದಿ

'ಬಿಂದಾಸ್' ನಟಿ ಬಾಳಲ್ಲಿ ಬಿರುಗಾಳಿ: ಬೆಸ್ಟ್​ಫ್ರೆಂಡ್ ಪತಿಯನ್ನೇ ಮದುವೆ ಆಗಿದ್ದ ಹನ್ಸಿಕಾ ಮೊಟ್ವಾನಿ; ನಾಲ್ಕೇ ವರ್ಷಕ್ಕೆ ವಿಚ್ಛೇದನ!

ಮುಂಬೈನ ಬಾಂದ್ರಾ ಉಪನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯವು ನಟಿ ಹನ್ಸಿಕಾ ಮೊಟ್ವಾನಿ ಮತ್ತು ಉದ್ಯಮಿ ಸೊಹೇಲ್ ಖತುರಿಯಾ ಅವರಿಗೆ ವಿಚ್ಛೇದನ ನೀಡಿದೆ ಎಂದು ಅವರ ವಕೀಲ ಅದ್ನಾನ್ ಶೇಖ್ ದೃಢಪಡಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ನಟನೆಯ ‘ಬಿಂದಾಸ್’‌ಸಿನಿಮಾದಲ್ಲಿ ಅಭಿನಯಿಸಿದ್ದ ಹನ್ಸಿಕಾ ಮೊಟ್ವಾನಿ ನಾಲ್ಕು ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಉದ್ಯಮಿ ಸೊಹೇಲ್‌ ಖತುರಿಯಾ ಅವರಿಂದ ಹನ್ಸಿಕಾ ವಿಚ್ಛೇದನ ಪಡೆದಿದ್ದಾರೆ.

ಮುಂಬೈನ ಬಾಂದ್ರಾ ಉಪನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯವು ನಟಿ ಹನ್ಸಿಕಾ ಮೊಟ್ವಾನಿ ಮತ್ತು ಉದ್ಯಮಿ ಸೊಹೇಲ್ ಖತುರಿಯಾ ಅವರಿಗೆ ವಿಚ್ಛೇದನ ನೀಡಿದೆ ಎಂದು ಅವರ ವಕೀಲ ಅದ್ನಾನ್ ಶೇಖ್ ದೃಢಪಡಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಹನ್ಸಿಕಾ ಮೋಟ್ವಾನಿ ಮತ್ತು ಸೊಹೇಲ್ ಖತುರಿಯಾ ಬೇರ್ಪಟ್ಟಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿದ್ದವು. ದಂಪತಿ ಕೆಲವು ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿತ್ತು.

ಕನ್ನಡದ ಬಿಂದಾಸ್‌ ಹಾಗೂ ಆಪ್ ಕಾ ಸುರೂರ್, ಒರು ಕಲ್ ಒರು ಕನ್ನಡಿ, ಮತ್ತು ಮೈ ನೇಮ್ ಈಸ್ ಶ್ರುತಿ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ 2022ರ ಡಿಸೆಂಬರ್‌ನಲ್ಲಿ ಜೈಪುರದ ಮುಂಡೋಟಾ ಫೋರ್ಟ್ ಮತ್ತು ಅರಮನೆಯಲ್ಲಿ ಸೋಹೆಲ್‌ ಖತುರಿಯಾ ಅವರನ್ನು ವಿವಾಹವಾದರು.

ನಮ್ಮ ಕಕ್ಷಿದಾರ ಹನ್ಸಿಕಾ ಮೋಟ್ವಾನಿ ಅವರಿಗೆ ಬಾಂದ್ರಾದ ಗೌರವಾನ್ವಿತ ಕುಟುಂಬ ನ್ಯಾಯಾಲಯವು ವಿಚ್ಛೇದನದ ತೀರ್ಪು ನೀಡಿದೆ. ಎರಡೂ ಕಡೆಯವರು ಒಪ್ಪಿಕೊಂಡ ನಂತರ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನವನ್ನು ನೀಡಲಾಗಿದೆ. ಸೊಹೇಲ್ ಅವರಿಂದ ನಟಿ ಯಾವುದೇ ಜೀವನಾಂಶ ಕೇಳಿಲ್ಲ ಎಂದು ವಕೀಲ ಅದ್ನಾನ್ ಶೇಖ್ ತಿಳಿಸಿದ್ದಾರೆ.‌

ಸೋಹೈಲ್ ಈ ಮೊದಲು ಮದುವೆ ಆಗಿದ್ದರು. ಅವರ ಮಾಜಿ ಪತ್ನಿಯ ಹೆಸರು ರಿಂಕಿ. ರಿಂಕಿ ಮತ್ತು ಹನ್ಸಿಕಾ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಸೋಹೈಲ್ ಹಾಗೂ ರಿಂಕಿ ಮದುವೆಯಲ್ಲಿ ಹನ್ಸಿಕಾ ಕೂಡ ಭಾಗಿ ಆಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: 'Quad' ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ಥೇಟ್ 'ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ! ನೋಡಲು ಮುಗಿಬಿದ್ದ ಜನರು, Video ವೈರಲ್

ಹಂಪಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಲಕ್ಷ್ಮಿ ಆನೆ ಸ್ಥಳಾಂತರಕ್ಕೆ ಸ್ಥಳೀಯರಿಂದ ಭಾರೀ ವಿರೋಧ; ಭಾವನಾತ್ಮಕ ಪ್ರತಿಭಟನೆ

ದೆಹಲಿಯಲ್ಲಿ ಸಿದ್ದರಾಮಯ್ಯ-ಡಿಕೆ.ಶಿವಕುಮಾರ್; ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಬೀಳುತ್ತಾ ತೆರೆ? ಕುತೂಹಲ ಮೂಡಿಸಿದ ಕಾಂಗ್ರೆಸ್ ಸಭೆ..!

SCROLL FOR NEXT