ಕೆಡಿ ಚಿತ್ರದ ಹಾಡು ಮತ್ತು ಗೀತರಚನೆಕಾರ ರಕೀಬ್ ಆಲಂ 
ಸಿನಿಮಾ ಸುದ್ದಿ

KD ಚಿತ್ರ ವಿವಾದ: 'ಅನುವಾದ ಮಾತ್ರ ನನ್ನದು.. ಹಾಡು ಪ್ರೇಮ್ ಅವರದ್ದು.. ಇದೊಂದರಿಂದ ಅವಮಾನವಾಗುತ್ತಿದೆ'; ಗೀತ ರಚನೆಕಾರ ಶಾಕಿಂಗ್ ಹೇಳಿಕೆ

ಈ ಹಾಡನ್ನು ಬರೆದಿರುವ ನಿರ್ದೇಶಕ ಪ್ರೇಮ್.. ಕನ್ನಡಕ್ಕೆ ಅವರು ಬರೆದ ಸಾಹಿತ್ಯವನ್ನೇ ಇತರೆ ಭಾಷೆಗಳಿಗೆ ಅನುವಾದ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

ನವದೆಹಲಿ: ಜೋಗಿ ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ 'ಕೆಡಿ ದಿ ಡೆವಿಲ್' ಚಿತ್ರದ ಹಾಡಿನ ವಿವಾದ ತಾರಕಕ್ಕೇರಿರುವಂತೆಯೇ ಇದೀಗ ಇದೇ ಮೊದಲ ಬಾರಿಗೆ ಗೀತರಚನೆಕಾರ ವಿವಾದದ ಕುರಿತು ಮಾತನಾಡಿದ್ದಾರೆ.

ಹೌದು.. ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಮತ್ತು ನಟ ಸಂಜಯ್ ದತ್ ಕಾಣಿಸಿಕೊಂಡಿರುವ ಕೆಡಿ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಭಾರಿ ವಿವಾದಕ್ಕೆ ಗುರಿಯಾಗಿದೆ.

ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಮಹಿಳೆಯರಿಗೆ ಅವಮಾನಕಾರಿಯಾಗಿವೆ ಎಂಬ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಹಿಂದಿ ವರ್ಷನ್ (Sarke Chunar Teri) ಹಾಡನ್ನು ಅಧಿಕೃತ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ.

ಅಂದಹಾಗೆ ಈ ಹಾಡನ್ನು ಬರೆದಿರುವ ನಿರ್ದೇಶಕ ಪ್ರೇಮ್.. ಕನ್ನಡಕ್ಕೆ ಅವರು ಬರೆದ ಸಾಹಿತ್ಯವನ್ನೇ ಇತರೆ ಭಾಷೆಗಳಿಗೆ ಅನುವಾದ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

ಈ ನಡುವೆ ‘ಕೆಡಿ’ ಸಿನಿಮಾದ ವಿವಾದಾತ್ಮಕ ಹಾಡಿನ ಕುರಿತಂತೆ ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಬಾಲಿವುಡ್ ಗೀತ ರಚನೆಕಾರ ರಕೀಬ್ ಆಲಂ ಮೌನ ಮುರಿದಿದ್ದಾರೆ.

ಹಿಂದಿ ವರ್ಷನ್ ಬಗ್ಗೆ ಪ್ರತಿಕ್ರಿಯಿಸಿರುವ ಗೀತರಚನೆಕಾರ ರಕೀಬ್ ಆಲಂ, ‘ನಾನು ಕೇವಲ ಮೂಲ ಕನ್ನಡ ಸಾಹಿತ್ಯವನ್ನು ಹಿಂದಿಗೆ ಅನುವಾದ ಮಾಡಿದ್ದೇನೆ ಅಷ್ಟೇ, ಇದರಲ್ಲಿ ನನ್ನದೇನೂ ತಪ್ಪಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಅಂತೆಯೇ 'ಆರಂಭದಲ್ಲಿ ಹಾಡಿನಲ್ಲಿ ಕೆಲಸ ಮಾಡಲು ನಿರಾಕರಿಸಿದ್ದೆ, ಏಕೆಂದರೆ ಅಂತಹ ಸಾಹಿತ್ಯವು ಕೆಲಸ ಮಾಡುವುದಿಲ್ಲ ಮತ್ತು ಸೆನ್ಸಾರ್ಶಿಪ್ ಎದುರಿಸಬೇಕಾಗುತ್ತದೆ' ಎಂದು ರಕೀಬ್ ಹೇಳಿದರು.

ಆದಾಗ್ಯೂ, ನಂತರ ಕನ್ನಡ ಸಾಹಿತ್ಯದ ಭಾಗವಾಗಿರುವ ಕೆಲವು ಆಕ್ರಮಣಕಾರಿ ಪದಗಳನ್ನು ಒಳಗೊಂಡಂತೆ ಮೂಲ ಆವೃತ್ತಿಯನ್ನು ಹಿಂದಿಗೆ ಮಾತ್ರ ಅನುವಾದಿಸಲು ಕೇಳಲಾಯಿತು. ನಂತರ ಅವರು ಅದನ್ನು ಹಾಡಿನ ಮೀಟರ್‌ಗೆ ಹೊಂದಿಸುತ್ತಿದ್ದರು. 'ಛ**ಸೆಗಾ', 'ಚಾ**ಗ' ಮುಂತಾದ ಪದಗಳು ಮೂಲ ಆವೃತ್ತಿಯಲ್ಲಿವೆ" ಎಂದು ಅವರು ಹೇಳಿದ್ದಾರೆ.

ಸಾಹಿತ್ಯವು ಡಬಲ್ ಮೀನಿಂಗ್ ಹೊಂದಿದೆ ಎಂದು ಹೇಳಿದ ರಕೀಬ್ ಆಲಂ, ಹಾಡು ಅಂತಿಮವಾಗಿ ಮದ್ಯದ ಬಾಟಲಿಯ ಬಗ್ಗೆ ಎಂದು ಬಹಿರಂಗಪಡಿಸಿದರೂ, ಅದರ ಮೊದಲು ಪ್ರದರ್ಶಿಸಲಾದ ಹೆಚ್ಚಿನವು ಅನುಚಿತವಾಗಿ ತೋರುತ್ತದೆ ಎಂದು ಒಪ್ಪಿಕೊಂಡರು. ಅವರು ಅಂತಹ ಸಾಹಿತ್ಯವನ್ನು ಬರೆಯಲು ನಿರಾಕರಿಸಿದ್ದರು ಮತ್ತು ಅಂತಹ ಹಾಡಿನೊಂದಿಗೆ ತಮ್ಮನ್ನು ಏಕೆ ಸಂಯೋಜಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾಗಿ ಹೇಳಿದ್ದಾರೆ.

ಇದೊಂದು ಹಾಡಿನಿಂದ ಅವಮಾನ

ಅಂತೆಯೇ "ನಾನು ಸಾಕಷ್ಟು ಒಳ್ಳೆಯ ಹಾಡುಗಳನ್ನು ಬರೆದಿದ್ದಾನೆ. ಆದರೆ ಅದನ್ನು ಜನರು ಗಮನಿಸುವುದಿಲ್ಲ. ರಾಮ್ ಚರಣ್ ಅವರ ಮುಂಬರುವ ಚಿತ್ರ ಪೆದ್ದಿ ಚಿತ್ರಕ್ಕಾಗಿ ನಾನು ಹಿಂದಿಯಲ್ಲಿ 'ಚಿಕ್ರಿ ಚಿಕ್ರಿ'ಯನ್ನು ಬರೆದಿದ್ದೇನೆ. ಹಿಂದಿಯಲ್ಲಿ ಪುಷ್ಪಾ ಚಿತ್ರದ ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಆದರೆ 'ಸರ್ಕೆ ಚುನಾರ್‌' ಹಾಡಿನಿಂದಾಗಿ ನನಗೆ ಅವಮಾನವಾಗುತ್ತಿದೆ' ಎಂದು ರಕೀಬ್ ಆಲಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video

ಏಷ್ಯನ್ ಗೇಮ್ಸ್ 2026 ಫೈನಲ್: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಭರ್ಜರಿ ಅರ್ಧ ಶತಕ, ಪಾಕ್ ಗೆಲ್ಲಲು 212 ರನ್ ಗಳ ಗುರಿ ನೀಡಿದ ಭಾರತ!

'ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ’: ಭಾರತದ ಯುವ ಆಟಗಾರನ ಕುರಿತು ಕಡ್ಡಿ ಮುರಿದಂತೆ ಹೇಳಿದ Ajinkya Rahane!