ಮಾಲ್ ಹೊರಗೆ ಮಾತಿನ ಚಕಮಕಿ  
ಸಿನಿಮಾ ಸುದ್ದಿ

'ಧುರಂಧರ್ 2' ಚಿತ್ರ ವೀಕ್ಷಿಸಲು ಥಿಯೇಟರ್ ಒಳಗೆ ಬಿಡದೆ ಬಾಲಕನಿಗೆ ತಡೆ; ಭದ್ರತಾ ಸಿಬ್ಬಂದಿ-ತಂದೆ ನಡುವೆ ತೀವ್ರ ವಾಗ್ವಾದ; Viral Video

ಇನ್ನೊಂದೆಡೆ ಸಮಾಜದ ಒಂದು ವರ್ಗದ ಜನತೆ ಚಿತ್ರವನ್ನು ಟೀಕಿಸುತ್ತಲೇ ಇದ್ದಾರೆ. ಇದು ಬಿಜೆಪಿ ಪ್ರಚಾರದ ಚಿತ್ರ ಎಂದು ಟೀಕಿಸುತ್ತಿದ್ದಾರೆ.

ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ಬಾಲಿವುಡ್ ಚಿತ್ರ ಧುರಂಧರ್ 2 ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಕಾಣುತ್ತಿದ್ದು, ಚಿತ್ರಪ್ರೇಮಿಗಳಿಂದಲೂ ಮೆಚ್ಚುಗೆ ಗಳಿಸಿದೆ.

ಇನ್ನೊಂದೆಡೆ ಸಮಾಜದ ಒಂದು ವರ್ಗದ ಜನತೆ ಚಿತ್ರವನ್ನು ಟೀಕಿಸುತ್ತಲೇ ಇದ್ದಾರೆ. ಇದು ಬಿಜೆಪಿ ಪ್ರಚಾರದ ಚಿತ್ರ ಎಂದು ಟೀಕಿಸುತ್ತಿದ್ದಾರೆ. ಹೀಗಿರುವಾಗ ನಿನ್ನೆ ಭಾನುವಾರ ಮಧ್ಯಾಹ್ನ ಲಕ್ನೊದ ಎಮೆರಾಲ್ಡ್ ಮಾಲ್‌ನಲ್ಲಿರುವ INOX ಮೆಗಾಪ್ಲೆಕ್ಸ್‌ನಲ್ಲಿ ಒಂದು ಘಟನೆ ನಡೆದಿದೆ.

ಅಲ್ಲಿ ಹಳದಿ ಶರ್ಟ್ ಧರಿಸಿದ್ದ ಭದ್ರತಾ ಸಿಬ್ಬಂದಿ, ರಣವೀರ್ ಸಿಂಗ್ ಅಭಿನಯದ ಸ್ಪೈ ಥ್ರಿಲ್ಲರ್ ಸಿನಿಮಾಗೆ Central Board of Film Certification (CBFC) ನೀಡಿರುವ ‘A’ ರೇಟಿಂಗ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರು. ಈ ನಿಯಮಗಳ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಥಿಯೇಟರ್ ನಲ್ಲಿ ಚಿತ್ರ ವೀಕ್ಷಿಸುವ ಹಾಗಿಲ್ಲ.

ತಂದೆ ತನ್ನ ಮಗ ಸಾಕಷ್ಟು ಪ್ರೌಢನಾಗಿದ್ದು, ಚಿತ್ರ ವೀಕ್ಷಿಸಲು ಅವನನ್ನೂ ಥಿಯೇಟರ್ ಒಳಗೆ ಬಿಡಿ ಎಂದು ಭದ್ರತಾ ಸಿಬ್ಬಂದಿ ಜೊತೆ ತಂದೆ ವಾದಿಸುತ್ತಿದ್ದಾರೆ. ಸಿಬ್ಬಂದಿ ತಮ್ಮ ನಿರ್ಧಾರದಲ್ಲಿ ದೃಢವಾಗಿ ನಿಂತು ಯಾವುದೇ ಪೊಲೀಸ್ ಹಸ್ತಕ್ಷೇಪ ಅಥವಾ ಪರಿಸ್ಥಿತಿ ವಿಕೋಪಕ್ಕೆ ಹೋಗದೆ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆಗಿದೆ. ಸಿಬ್ಬಂದಿಯ ದೃಢತೆಗೆ ಶ್ಲಾಘನೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಚಿತ್ರಮಂದಿರಗಳಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಚಿತ್ರ ವೀಕ್ಷಣೆಗೆ ನಿಷೇಧ ಹೇರಿರುವಾಗ ಆನ್‌ಲೈನ್‌ನಲ್ಲಿ ಏಕೆ ಇಲ್ಲ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಚಿತ್ರವು ಬಿಡುಗಡೆಯಾಗಿ ನಾಲ್ಕನೇ ದಿನಕ್ಕೆ ವಿಶ್ವದಾದ್ಯಂತ 500 ಕೋಟಿ ಗಳಿಕೆ ಕಂಡಿದ್ದು, ಚರ್ಚೆಗಳು ಹೆಚ್ಚಾಗುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಂಗಾಳದಲ್ಲಿ ಬದಲಾವಣೆಯ ಪರ್ವ: ಗಡಿ ಸುರಕ್ಷತೆಗೆ ಆದ್ಯತೆ: BSFಗೆ ಭೂಮಿ ಹಸ್ತಾಂತರಿಸಲು ಸುವೇಂದು ಸರ್ಕಾರ ಅಸ್ತು, ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ..!

IPL 2026: RCB ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಬಗ್ಗೆ ಮೌನ ಮುರಿದ MI; ಹೇಳಿದ್ದೇನು?

ಕಾಂಗ್ರೆಸ್ ಊಸರವಳ್ಳಿಗಿಂತ ಬೇಗ ಬಣ್ಣ ಬದಲಿಸುತ್ತೆ: ಶಶಿ ತರೂರ್ ಎದುರೇ ಅಣ್ಣಾಮಲೈ ತೀವ್ರ ಟೀಕೆ- ಪ್ರತಿಕ್ರಿಯೆ ಏನು?| video

ಪ್ರಧಾನಿ ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ: ಬೆಂಗಳೂರಿಗೆ ದೌಡಾಯಿಸಿದ NIA, ಓರ್ವ ಆರೋಪಿಯ ಬಂಧನ!

ನೇಪಾಳದಿಂದ ಭಾರತಕ್ಕೆ ಅಪಮಾನ?; ಹುದ್ದೆ ಅಂತರದ ಕಾರಣ ನೀಡಿ ವಿದೇಶಾಂಗ ಕಾರ್ಯದರ್ಶಿ ಭೇಟಿಗೆ ನಿರಾಕರಿಸಿದ ಪ್ರಧಾನಿ ಬಾಲೇನ್ ಶಾ: ವರದಿ

SCROLL FOR NEXT