ಪ್ರಶಾಂತ್ ಸಂಬರಗಿ-ರಮ್ಯಾ 
ಸಿನಿಮಾ ಸುದ್ದಿ

ನೀವು ನಟಿಯ ವೇಷ ಧರಿಸಿದ ಕಾಂಗ್ರೆಸ್ಸಿನ ಚಿಯರ್‌ಲೀಡರ್ ಅಷ್ಟೆ; ಧುರಂಧರ್ ಟೀಕಿಸಿದ್ದ ರಮ್ಯಾಗೆ ಪ್ರಶಾಂತ್ ಸಂಬರಗಿ ತಿರುಗೇಟು

ಧುರಂಧರ್-2 ಸಿನಿಮಾ ತುಂಬಾ ಬೋರ್, ಈ ಚಿತ್ರ ನೋಡಲು ಹಣ ಮತ್ತು ಸಮಯ ವ್ಯರ್ಥ ಮಾಡಬೇಡಿ ಎಂದು ವ್ಯಂಗ್ಯವಾಡಿದ್ದ ನಟಿ, ಮಾಜಿ ಸಂಸದೆ ರಮ್ಯಾಗೆ ಚಿತ್ರ ನಿರ್ಮಾಪಕ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ತಿರುಗೇಟು ನೀಡಿದ್ದಾರೆ.

ಧುರಂಧರ್-2 ಸಿನಿಮಾ ತುಂಬಾ ಬೋರ್, ಈ ಚಿತ್ರ ನೋಡಲು ಹಣ ಮತ್ತು ಸಮಯ ವ್ಯರ್ಥ ಮಾಡಬೇಡಿ ಎಂದು ವ್ಯಂಗ್ಯವಾಡಿದ್ದ ನಟಿ, ಮಾಜಿ ಸಂಸದೆ ರಮ್ಯಾಗೆ ಚಿತ್ರ ನಿರ್ಮಾಪಕ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ತಿರುಗೇಟು ನೀಡಿದ್ದಾರೆ.

ರಮ್ಯಾ ಅವರೇ, ನೀವು ಸಿನಿಮಾ ತಜ್ಞರಲ್ಲ, ನಟಿಯ ವೇಷ ಧರಿಸಿದ ಕಾಂಗ್ರೆಸ್ಸಿನ ಚಿಯರ್‌ಲೀಡರ್ ಅಷ್ಟೆ. ಒಬ್ಬ ಸಿನಿಮಾ ವಿತರಕನಾಗಿ, ನಿರ್ಮಾಪಕನಾಗಿ, ದೊಡ್ಡ ದೊಡ್ಡ ಸ್ಟುಡಿಯೋ ಮತ್ತು ರೇಡಿಯೋ ಸ್ಟೇಷನ್‌ಗಳಲ್ಲಿ ಕೆಲಸ ಮಾಡಿದ ಅನುಭವಿ ವ್ಯಕ್ತಿಯಾಗಿ, ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಒಬ್ಬ ಇಂಡಸ್ಟ್ರಿ ವ್ಯಕ್ತಿಯಾಗಿ...'ಧುರಂಧರ್ 2' ಬಗ್ಗೆ ನೀವು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಟೀಕೆಗೆ ನಾನು ಉತ್ತರ ಕೊಡಲೇಬೇಕಿದೆ. ಯಾಕೆಂದರೆ ನನ್ನ ರಕ್ತ ಕುದಿಯುತ್ತಿದೆ. ನಿಮಗೆ ಇದೊಂದು 'ವೇಕ್-ಅಪ್ ಕಾಲ್'. ನಿಮ್ಮ ಅಭಿಪ್ರಾಯಗಳು ರಾಜಕೀಯ ಪ್ರಭಾವದಿಂದ ಪ್ರೇರಿತವಾಗಿದ್ದು, ನೀವು ಸಿನಿಮಾವನ್ನು ಒಬ್ಬ ಪ್ರೇಕ್ಷಕಿಯಾಗಿ ನೋಡುತ್ತಿಲ್ಲ, ಬದಲಾಗಿ ಕಾಂಗ್ರೆಸ್‌ನ ಚಿಯರ್ ಲೀಡರ್ ಆಗಿ ನೋಡಿದ್ದೀರಿ ಎಂದು ನೇರವಾಗಿ ಲೇವಡಿ ಮಾಡಿದ್ದಾರೆ.

2019ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಬಂದ ನಂತರ ಅದು ನರಕವಲ್ಲ, ಸ್ವರ್ಗ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ನೀವು ಇತ್ತೀಚಿನ ಗ್ಲೋಬಲ್ ಟೆರರಿಸಂ ಇಂಡೆಕ್ಸ್ ಪ್ರಕಾರ ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಅಗ್ರ ಸ್ಥಾನದಲ್ಲಿದೆ. 'ಧುರಂಧರ್ 2 ಇಂತಹದ್ದೇ ಅಪಾಯದ ಆಧಾರದ ಮೇಲೆ ನಿರ್ಮಾಣವಾದ ಸಿನಿಮಾ. ಚಿತ್ರ ಬಿಡುಗಡೆಯಾದ ನಂತರ ಅದನ್ನು ತಿರಸ್ಕರಿಸಿದವರು ನೀವೊಬ್ಬರೇ ಅಲ್ಲ; ನಿಮ್ಮಂತಹ ರಾಜಕೀಯ ಮನೋಭಾವ ಹೊಂದಿದ ಹಲವರು ಇದೇ ರೀತಿ ಪ್ರತಿಕ್ರಿಯಿಸಿದ್ದಾರೆ. ನೀವು ಸ್ವಲ್ಪ ತಡವಾಗಿ ಸೇರಿದ್ದೀರಷ್ಟೆ ಎಂದು ಬರೆದುಕೊಂಡಿದ್ದಾರೆ. 'ಧುರಂಧರ್ 2' ಸಿನಿಮಾದಲ್ಲಿರೋ ಒಂದು ಪಾತ್ರ, ಒಂದು ಸೀನ್ ಅಥವಾ ಯಾವುದಾದರೂ ಒಂದು ವಿಷಯ ತಪ್ಪು ಅಥವಾ ಸುಳ್ಳು ಅಂತ ಬೆರಳು ಮಾಡಿ ತೋರಿಸಿ ನೋಡೋಣ? ನಾನೂ ನಿಮ್ಮ ಹಾಗೆ ಚಿತ್ರರಂಗದವನೇ, ನಿಮಗೆ ಇದು ನನ್ನದೊಂದು ಸವಾಲು ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ತುಷ್ಟೀಕರಣ ನೀತಿಗಳು ಬಹಳ ಹಿಂದಿನಿಂದಲೂ ರಾಷ್ಟ್ರೀಯತೆಯನ್ನು ಬದಿಗಿಟ್ಟಿವೆ. ಧುರಂಧರ್ 2 ಭಾರತೀಯ ಮುಸ್ಲಿಮರ ಬಗ್ಗೆ ಅಲ್ಲ, ಪಾಕಿಸ್ತಾನಿ ಮುಸ್ಲಿಮರ ಬಗ್ಗೆ ಮಾತನಾಡುತ್ತದೆ. ಭಾರತದಲ್ಲಿ ನಿಜವಾದ ಜಾತ್ಯತೀತತೆಯು ಸತ್ಯಗಳನ್ನು ಎದುರಿಸುವುದನ್ನು ಬಯಸುತ್ತದೆ. ಆಯ್ದ ಆಕ್ರೋಶವನ್ನಲ್ಲ. ಜಾತ್ಯತೀತ ಹಿಂದೂ ಆಗಿರುವುದು ಭಾರತದಲ್ಲಿ ಒಂದು ರೋಗ. ಅದಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆಯಿರಿ. ನಾನು ನಿಮ್ಮ ಬಗ್ಗೆ ವಿಷಾದಿಸುತ್ತೇನೆ.

Get well soon ರಮ್ಯಾ ಎಂದು ಪ್ರಶಾಂತ್ ಸಂಬರಗಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್