ವಿಜಯ್ ರಾಘವೇಂದ್ರ 
ಸಿನಿಮಾ ಸುದ್ದಿ

'ಶ್ರೀಮತಿ ಸಿಂದೂರ' ಸಂಪೂರ್ಣ ಕೌಟುಂಬಿಕ ಮನರಂಜನಾ ಚಿತ್ರ: ವಿಜಯ್ ರಾಘವೇಂದ್ರ

ಚಿತ್ರ ರಿಲೀಸ್ ಗೂ ಮುನ್ನಾ ಅದ್ದೂರಿ ಸಮಾರಂಭದಲ್ಲಿ ಟೀಸರ್ ಹಾಗೂ ಸಾಂಗ್ ಗಳನ್ನು ಚಿತ್ರ ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.

ವಿಜಯ್ ರಾಘವೇಂದ್ರ ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ಕೇಸ್ ಆಫ್ ಕೊಂಡಾಣ' ಮತ್ತು ವೆಬ್ ಸರಣಿ 'ರಾಕ್ಷಸ' ನಂತರ ಇದೀಗ, ಶ್ರೀಮತಿ ಸಿಂದೂರ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರದ ಶೂಟಂಗ್ ಮುಗಿದಿದ್ದು, ಮೇ ತಿಂಗಳೊಳಗೆ ತೆರೆಗೆ ಅಪ್ಪಳಿಸುವ ಸಾಧ್ಯತೆಯಿದೆ.

ಚಿತ್ರ ರಿಲೀಸ್ ಗೂ ಮುನ್ನಾ ಅದ್ದೂರಿ ಸಮಾರಂಭದಲ್ಲಿ ಟೀಸರ್ ಹಾಗೂ ಸಾಂಗ್ ಗಳನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಶ್ರೀಮತಿ ಸಿಂಧೂರವನ್ನು ಡಿಎನ್ ನಾಗಿರೆಡ್ಡಿ ಬೆಂಬಲದೊಂದಿಗೆ ಆರ್ ಮತ್ತು ಆರ್ ಎಂಟರ್‌ಪ್ರೈಸಸ್ ಅಡಿಯಲ್ಲಿ ನಿರ್ಮಿಸಲಾಗಿದೆ. ನಾಗಿರೆಡ್ಡಿ ಕಥೆ ಬರೆದಿದ್ದು, ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಆರ್ ಅನಂತರಾಜು ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ.

ಸಿನಿಮಾ ಕುರಿತು ಮಾತನಾಡಿದ ನಿರ್ಮಾಪಕ ಡಿಎನ್ ನಾಗಿರೆಡ್ಡಿ, ಶ್ರೀಮತಿ ಸಿಂದೂರ 20 ವರ್ಷಗಳ ಕನಸು. ಚಿತ್ರದ ಹಿಂದಿನ ಉದ್ದೇಶ ಕೇವಲ ಕಥೆ ಹೇಳುವುದಲ್ಲ. ಅರ್ಥಪೂರ್ಣ ಕೌಟುಂಬಿಕ ಮನರಂಜನಾ ಚಿತ್ರ ನೀಡುವುದರ ಜೊತೆಗೆ ಚಲನಚಿತ್ರ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿದೆ ಎಂದು ಹೇಳಿದರು.

'ಹೂ ಮಳೆ ಹಾಡನ್ನು ಪ್ರಮುಖವಾಗಿ ಹೈಲೈಟ್ ಮಾಡಿದ ಅವರು, ಈ ಸಾಂಗ್ ಬಿಡುಗಡೆ ಸಮಯದಲ್ಲಿ ಹವಾಮಾನವೂ ಹೇಗೆ ಪ್ರತಿಬಿಂಬಿಸುತ್ತಿದೆ ಎಂಬುದನ್ನು ತಿಳಿಸಿದರು. ಕೈಲಾಶ್ ಖೇರ್ ಹಾಡಿದ ಹನುಮಾನ್ ಹಾಡಿನ ಬಗ್ಗೆಯೂ ಅವರು ಮಾತನಾಡಿದರು. ಇದು ಕರ್ನಾಟಕವನ್ನು ಮೀರಿ ಭಾರತದಾದ್ಯಂತ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದರು.

ಚಿತ್ರದ ಕಥೆಯನ್ನು ವಿವರಿಸಿದ ನಾಗಿರೆಡ್ಡಿ, ನಟ ಪುನೀತ್ ರಾಜ್‌ಕುಮಾರ್ ಜೊತೆಗಿನ ದೀರ್ಘಕಾಲದ ಒಡನಾಟವನ್ನು ನೆನಪಿಸಿಕೊಂಡರು. ಈಗ ವಿಜಯ್ ರಾಘವೇಂದ್ರ ಅವರೊಂದಿಗೆ ಕೆಲಸ ಮಾಡುವುದು ಮಹತ್ವದ್ದಾಗಿದೆ ಎಂದರು. ಚಿತ್ರದ ಪ್ರತಿಯೊಂದು ಚೌಕಟ್ಟಿನಲ್ಲೂ ನಿರ್ಮಾಪಕರ ಉತ್ಸಾಹ ಕಂಡುಬರುತ್ತದೆ. ಶ್ರೀಮತಿ ಸಿಂದೂರ ಆಕ್ಷನ್, ಹಾರರ್ ಅಥವಾ ಥ್ರಿಲ್ಲರ್‌ ಮೀರಿದ ಆರೋಗ್ಯಕರ ಕೌಟುಂಬಿಕ ಮನರಂಜನಾ ಚಿತ್ರವಾಗಿದೆ. ಇದು ಎಲ್ಲಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ವಿಜಯ್ ರಾಘವೇಂದ್ರ ಹೇಳಿದರು.

ನಿರ್ದೇಶಕ ಆರ್ ಅನಂತರಾಜು ಮಾತನಾಡಿ, ಎಲ್ಲರ ಪ್ರಯತ್ನದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದರು. ಹೊಸಪೇಟೆಯ 6.4 ಅಡಿ ಎತ್ತರದ ಬಾಡಿಬಿಲ್ಡರ್ ಹನುಮಂತನ ಪಾತ್ರ ಮಾಡಿದ್ದಾರೆ. ಈ ಚಿತ್ರವನ್ನು ಮೂಡಿಗೆರೆ, ಸಕಲೇಶಪುರ ಮತ್ತು ಚಿಕ್ಕಮಗಳೂರಿನಂತಹ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ಅವರು ಹೇಳಿದರು. ರಾಜೇಶ್ ರಾಮನಾಥ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಕವಿರಾಜ್, ಕೆ ಕಲ್ಯಾಣ್ ಮತ್ತು ನಿರ್ದೇಶಕರು ಆರ್ ಅನಂತರಾಜು ಕೂಡಾ ಸ್ವತಃ ಸಾಹಿತ್ಯ ಬರೆದಿದ್ದಾರೆ. ಪಿಕೆಹೆಚ್ ದಾಸ್ ಛಾಯಾಗ್ರಹಣ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ವಿಜಯ್‌ಗೆ ಕಾಂಗ್ರೆಸ್‌ ಬೆಂಬಲ? ಕೆ.ಸಿ ವೇಣುಗೋಪಾಲ್ ಹೇಳಿದ್ದೇನು?

ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ: 95.23 ರೂ ಗೆ ಇಳಿಕೆ!

ಕಾರು ಚಾಲಕನ ಪುತ್ರನಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದ ವಿಜಯ್‌; ಡ್ರೈವರ್ ಮಗ ಈಗ MLA! ಹೃದಯಸ್ಪರ್ಶಿ Video ನೋಡಿ

Video: ಉಪ ಚುನಾವಣೆ ಸೋಲಿನಲ್ಲೂ ಲಡ್ಡು, ಚುರುಮುರಿ ವಿತರಿಸಿ ವಿಜಯೋತ್ಸವ ಆಚರಿಸಿದ ಬಿಜೆಪಿ!

ತಮಿಳುನಾಡಿನಲ್ಲಿ 'ಜನ ನಾಯಕ' ಆಗಿ ಹೊರಹೊಮ್ಮಿದ ವಿಜಯ್‌ಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಸುರಿಮಳೆ! ಹೇಳಿದ್ದೇನು?

SCROLL FOR NEXT