ನಟ ಚೇತನ್, ಡಾ ರಾಜ್ ಕುಮಾರ್ ಮತ್ತು ಜಗ್ಗೇಶ್(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

'ಉತ್ತಮ ಚಿತ್ರ ಮಾಡಿ ಪ್ರೇಕ್ಷಕರ ರಂಜಿಸಿ, ಪ್ರಚಾರಕ್ಕಾಗಿ ಹಿರಿಯರನ್ನು ನಿಂದಿಸಬೇಡಿ': ಚೇತನ್ ಅಹಿಂಸಾಗೆ ಹಿರಿಯ ನಟ ಜಗ್ಗೇಶ್ ಕಿವಿಮಾತು

ಮೇರು ನಟ ರಾಜಣ್ಣನ ಸಮಾಧಿಯ ಬಗ್ಗೆ ಒಬ್ಬ ನಟ ಆಡಿದ ಮಾತು, ಮನಸ್ಸಿಗೆ ಬಹಳ ನೋವುಂಟು ಮಾಡಿತು ಎಂದಿದ್ದಾರೆ ಜಗ್ಗೇಶ್.

ಡಾ ರಾಜ್​ಕುಮಾರ್ ಸಮಾಧಿಗೆ ಎರಡೂವರೆ ಎಕರೆ ಜಮೀನು ನೀಡುವ ಅಗತ್ಯವೇನಿದೆ ಎಂದು ನಟ ಚೇತನ್ ಅಹಿಂಸ ಅವರ ಮಾತಿಗೆ ಹಿರಿಯ ನಟ ಜಗ್ಗೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡಾ ರಾಜ್ ಕುಮಾರ್ ಬಗ್ಗೆ ಗುಣಗಾನ ಮಾಡಿದ ಅವರು ಚೇತನ್ ತಮ್ಮ ಆಲೋಚನೆಯನ್ನು ತಿದ್ದಿಕೊಂಡರೆ ಸೂಕ್ತ ಎಂದು ಹೇಳಿದ್ದಾರೆ.

ಮೇರು ನಟ ರಾಜಣ್ಣನ ಸಮಾಧಿಯ ಬಗ್ಗೆ ಒಬ್ಬ ನಟ ಆಡಿದ ಮಾತು, ಮನಸ್ಸಿಗೆ ಬಹಳ ನೋವುಂಟು ಮಾಡಿತು. ಆತನಿಗೆ ನನ್ನ ಕಿವಿಮಾತು 1954ರಲ್ಲಿ ಕನ್ನಡ ಚಿತ್ರರಂಗಕ್ಕೆ ನೆಲೆ ಬೆಲೆ ಇಲ್ಲದ ಕಾಲ. ಇರಲು ಸೂರಿಲ್ಲಾ ಉದರಕ್ಕೆ ತೃಪ್ತ ಆಹಾರವಿಲ್ಲಾ ಅಂಥಹ ಸಮಯದಿಂದ ಕನ್ನಡ ಚಿತ್ರರಂಗ ಕಟ್ಟಿ ಬೆಳೆಸಿ ಅರಮನೆಯಂತೆ ಮಾಡಿ ಹೋಗಿದ್ದಾರೆ ಎಂದಿದ್ದಾರೆ ಜಗ್ಗೇಶ್.

ಇಂದು ಅದರ ಬೆಲೆ ಅರಿಯದೆ ಒಂದು ಅಥವ ಎರಡು ಚಿತ್ರಕ್ಕೆ ಜಗದೇಕವೀರರಂತೆ ಮಾತಾಡಿ ಮಲೀನವಾಗೋ ಸಂಪ್ರದಾಯ ಹುಟ್ಟಿ ಹಿರಿಯರೆಲ್ಲಾ ಮೂರ್ಖರಂತೆ ಯಾರ ತಂಟೆ ಬೇಡವೆಂದು ಉಳಿದುಬಿಟ್ಟಿದ್ದಾರೆ. ದ್ವನಿ ಎತ್ತಿದರೆ ಸರ್ಕಾರ ಬದಲಾಗುತ್ತಿತ್ತು ಅದು ರಾಜಣ್ಣನ ತಾಕತ್ತು. ಅಂಥಹ ಸಾಧಕ ಹೋದಾಗ ಇಡಿ ಚಿತ್ರರಂಗ ಸರ್ಕಾರ ಒಟ್ಟುಗೂಡಿ ಅವರ ಶ್ರಮಕ್ಕೆ ಗೌರವ ನೀಡಲು ಅವರ ಕೊನೆಯ ಚಿರನಿದ್ರೆಗೆ ಕಲಾವಿದರ ರಂಗಸ್ಥಳವನ್ನು ಪ್ರೀತಿಯ ಹಾಸಿಗೆ ಮಾಡಿ ಮಲಗಿಸಿದ್ದಾರೆ ಎಂದಿದ್ದಾರೆ.

ಕಳೆದುಹೋದ ಸಮಯ ವಿಷಯ ಪ್ರಚಾರಕ್ಕಾಗಿ ಈಗ ಮಾತಾಡುವ ಚಿಕ್ಕಮನಸ್ಸು ಕಂಡು ಅಸಹ್ಯವಾಯಿತು. ಉತ್ತಮ ಚಿತ್ರಮಾಡಿ ಪ್ರೇಕ್ಷಕರ ರಂಜಿಸಿ ಹೆಸರುಮಾಡಿ, ಇಲ್ಲದಿದ್ದರೆ ಗಳಿಸಿದ ಅಲ್ಪ ಹೆಸರು ಮಾಸಿ ಜೀವನ ರೋಸಿ ಹೋಗುತ್ತದೆ ಎಂದು ನಟ ಜಗ್ಗೇಶ್ ಕಿವಿಮಾತನ್ನು ನಟ ಚೇತನ್ ಅಹಿಂಸಾ ಕುರಿತು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್