ರಚಿತಾ ರಾಮ್  
ಸಿನಿಮಾ ಸುದ್ದಿ

'ಡಿಂಪಲ್ ಕ್ವೀನ್' ಬಣ್ಣದ ಬದುಕಿಗೆ 14 ವರ್ಷದ ಸಂಭ್ರಮ: ರಚಿತಾ ರಾಮ್ ಸಿನಿಪಯಣಕ್ಕೆ ಶುಭಾಶಯಗಳ ಮಹಾಪೂರ!

ಕನ್ನಡ ಚಿತ್ರರಂಗದ 'ಗುಳಿಗೆನ್ನೆಯ ಚೆಲುವೆ' ಎಂದೇ ಖ್ಯಾತರಾಗಿದ್ದಾರೆ ರಚಿತಾ ರಾಮ್ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ಅವ್ರ ಬಣ್ಣದ ಬದುಕು ಆರಂಭವಾಗಿ 14 ವರ್ಷ ಕಳೆದಿವೆ

ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರು ಬರ್ತಾರೆ, ಹೋಗ್ತಾರೆ. ಆದ್ರೆ ದಶಕ ಕಳೆದರೂ ಅದೇ ಕ್ರೇಜ್, ಅದೇ ಸೌಂದರ್ಯ ಮತ್ತು ಅದೇ 'ಡಿಂಪಲ್' ಜಾದೂ ಉಳಿಸಿಕೊಂಡಿರುವ ನಟಿ ಎಂದರೆ ಬುಲ್ ಬುಲ್ ಬ್ಯೂಟಿ ರಚಿತಾ ರಾಮ್ ಮಾತ್ರ.

ಕನ್ನಡ ಚಿತ್ರರಂಗದ 'ಗುಳಿಗೆನ್ನೆಯ ಚೆಲುವೆ' ಎಂದೇ ಖ್ಯಾತರಾಗಿದ್ದಾರೆ ರಚಿತಾ ರಾಮ್ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ಅವ್ರ ಬಣ್ಣದ ಬದುಕು ಆರಂಭವಾಗಿ 14 ವರ್ಷ ಕಳೆದಿವೆ. ಆದರೆ ಇಂದಿಗೂ ಅದೇ ಚಾರ್ಮ್, ಅದೇ ಗ್ಲಾಮರ್ , ಅದೇ ಡಿಮ್ಯಾಂಡ್ ಇದ್ದು ರಚ್ಚುಗೆ ಇವತ್ತಿಗೂ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಅನ್ನೋ ಹಾಗಾಗಿದೆ.

ಕಿರುತೆರೆಯ ಅರಸಿ ಸೀರಿಯಲ್ ಮೂಲಕ ಬಂದ ವಿಂದ್ಯಾ ರಾಮ್ ರಚಿತಾರಾಮ್ ಆಗಿ ಬದಲಾಗೋಕೆ ಕಾರಣವಾಗಿದ್ದು ಬುಲ್ ಬುಲ್ ಸಿನಿಮಾ. ಹೊಸ ನಟಿ ದರ್ಶನ್ ಜೊತೆಗೆ ನಟಿಸೋ ಅವಕಾಶ ಪಡೆದಿದ್ದು ಇಡೀ ಗಾಂಧಿನಗರದಾದ್ಯಂತ ಸುದ್ದಿಯಾಗಿತ್ತು. ಆದ್ರೆ ಅದೇ ನಟಿ ಮುಂದೆ ಸ್ಯಾಂಡಲ್ ವುಡ್ ನ ನಂ. 1 ನಟಿಯಾಗಿ ಬುಲ್ ಬುಲ್ ಅಂತಲೇ ಗುರುತಿಸಿಕೊಳ್ತಾರೆ.

ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ , ರಮೇಶ್ ಅರವಿಂದ್ ‌ಹೀಗೆ ಎಲ್ಲ ಸ್ಟಾರ್ ಗಳ ಜೊತೆಗೆ ನಟಿಸಿ ಸೈ ಅನ್ನಿಸಿಕೊಂಡಿರೋ ರಚ್ಚು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತಲೈವಾ ಸೂಪರ್ ಸ್ಟಾರ್ ರಜಿನಿ ಜೊತೆಗೆ ಕೂಲಿ ಸಿನಿಮಾದಲ್ಲಿಯು ವಿಶೇಷ ಪಾತ್ರದಲ್ಲಿ ನಟಿಸಿ ತಮಿಳು ಸಿನಿಮಂದಿ ಮನಸ್ಸು ಗೆದ್ದಿದ್ದಾರೆ.

ರಚಿತಾ ರಾಮ್ ಗೆ 14 ವರ್ಷದ ಈ ಸಂದರ್ಭದಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಮತ್ತಷ್ಟು, ಮೊಗದಷ್ಟು ಸಿನಿಮಾದಲ್ಲಿ ಡಿಂಪಲ್ ಕ್ವೀನ್ ನಟಿಸಲಿ ಅಂತಾ ಹಾರೈಸುತ್ತಿದ್ದಾರೆ.

ಸದ್ಯ ರಚಿತಾ ರಾಮ್, ಧ್ರುವ ಸರ್ಜಾ ಜೊತೆ ಕ್ರಿಮಿನಲ್, ಸತೀಶ್ ನೀನಾಸಂ ಜೊತೆ ಅಯೋಗ್ಯ 2 ನಟಿಸುತ್ತಿದ್ದು, ತಮಿಳಿನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ನಡೆದಿದ್ದು, ತೆಲುಗಿನಲ್ಲಿ ಎರಡು ಸಿನಿಮಾಗಳು ಈ ತಿಂಗಳಲ್ಲಿ ಅನೌನ್ಸ್ ಆಗಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇನ್ನೊಂದ್ ವರ್ಷ ಖರೀದಿ ಮಾಡ್ಬೇಡಿ..'.: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದ ಚಿನ್ನಾಭರಣ ಷೇರು

West Asia war ಎಫೆಕ್ಟ್: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 1,000 ಅಂಕ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ

ಚಿನ್ನಾಭರಣ ಖರೀದಿಸದಂತೆ ಮೋದಿ ಮನವಿ, ಪ್ರಧಾನಿ ಮಾತಿನ ಹಿಂದಿನ ಅರ್ಥವೇನು? ಇಲ್ಲಿದೆ ಉತ್ತರ

‘ರಾಜಿ ಮಾಡಿಕೊಂಡ ಪ್ರಧಾನಿ ದೇಶ ನಡೆಸಲು ಅಸಮರ್ಥ’: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ವಿಜಯ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ CSK ಸ್ಟಾರ್! ತಕ್ಷಣ ಕ್ಯಾಬ್ ಹಿಡಿದು ಚೇಪಾಕ್ ತಲುಪು! ಕಾಲೆಳೆದ ಆರ್ ಅಶ್ವಿನ್

SCROLL FOR NEXT