ಅನುಜ್ ಠಾಕೂರ್ 
ಸಿನಿಮಾ ಸುದ್ದಿ

ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿದ್ದ ನಟನ ದುರಂತ ಅಂತ್ಯ: ನಿದ್ರೆಯಲ್ಲಿದ್ದಾಗಲೇ ಫಿಟ್ಸ್ ಬಂದು ಅನುಜ್ ಠಾಕೂರ್ ನಿಧನ..!

ಅನುಜ್ ಅವರ ಆಪ್ತ ಸ್ನೇಹಿತ ಹಾಗೂ ಸಹ ಕಲಾವಿದ ರೂಪೇಶ್ ಸೋನಾರ್ ಅಕ್ಟೋಬರ್ 30ರಂದು ಇನ್‌ಸ್ಟಾಗ್ರಾಂನಲ್ಲಿ ಸಂತಾಪ ಸೂಚಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

ಮುಂಬೈ: ನಿದ್ರೆಯಲ್ಲಿದ್ದಾಗ ಸಂಭವಿಸಿದ ಫಿಟ್ಸ್ (Seizure) ಕಾರಣದಿಂದ ಹಿಂದಿ ಕಿರುತೆರೆಯ ಜನಪ್ರಿಯ ನಟ ಅನುಜ್ ಠಾಕೂರ್ (33) ಅವರು ಭಾನುವಾರ ನಿಧನರಾಗಿದ್ದಾರೆ. ಸದಾ ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತಿದ್ದ ಯುವ ನಟನ ಹಠಾತ್ ಸಾವು ಇಡೀ ಕಿರುತೆರೆರಂಗಕ್ಕೆ ಆಘಾತ ತಂದಿದೆ.

ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ಧೂಮ್ ಮಚಾವೋ ಧೂಮ್, ಬಂಧನ್ ಸಾಥ್ ಜನ್ಮೋ ಕಾ, ಬೀಂಡ್ ಬನೂಂಗಾ ಘೋಡಿ ಚಢೂಂಗಾ ಮತ್ತು ಮಹಿಸಾಗರ್ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ನಟಿಸಿದ್ದ ಅನುಜ್ ಠಾಕೂರ್ ತಮ್ಮ 33ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅನುಜ್ ಅವರ ಆಪ್ತ ಸ್ನೇಹಿತ ಹಾಗೂ ಸಹ ಕಲಾವಿದ ರೂಪೇಶ್ ಸೋನಾರ್ ಅಕ್ಟೋಬರ್ 30ರಂದು ಇನ್‌ಸ್ಟಾಗ್ರಾಂನಲ್ಲಿ ಸಂತಾಪ ಸೂಚಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

ಅನುಜ್ ಅವರ ಕುಟುಂಬದವರನ್ನು ಭೇಟಿಯಾದ ಬಳಿಕ ನಿದ್ರೆಯಲ್ಲಿದ್ದಾಗ ಫಿಟ್ಸ್ ಉಂಟಾಗಿ ಅವರು ಮೃತಪಟ್ಟಿರುವ ವಿಚಾರ ರೂಪೇಶ್ ಅವರಿಗೆ ತಿಳಿದುಬಂದಿದೆ.

ನೀನು ಇನ್ನು ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನೀನು ನನಗೆ ಕೇವಲ ಸ್ನೇಹಿತನಾಗಿರಲಿಲ್ಲ, ಕಿರಿಯ ಸಹೋದರನಂತಿದ್ದೆ. ನಾವಿಬ್ಬರೂ ಒಟ್ಟಿಗೆ ಹಲವು ಯೋಜನೆಗಳನ್ನು ರೂಪಿಸಿದ್ದೆವು. ಆರಂಭದ ದಿನಗಳಲ್ಲಿ ನೀನು ಎದುರಿಸಿದ ಕಷ್ಟಗಳು ಮತ್ತು ನಿನ್ನ ಪಯಣವನ್ನು ನಾನು ಹತ್ತಿರದಿಂದ ನೋಡಿದ್ದೆ. ಜೀವನ ನಿಜಕ್ಕೂ ಅನಿರೀಕ್ಷಿತ. ಇಷ್ಟು ಬೇಗ ನೀನು ನಮ್ಮನ್ನು ಅಗಲಿರುವುದನ್ನು ಒಪ್ಪಿಕೊಳ್ಳುವುದು ತುಂಬಾ ನೋವುಂಟು ಮಾಡುತ್ತಿದೆ. ಈ ಸುದ್ದಿ ನಿಜವೆಂದು ಅನಿಸುತ್ತಿಲ್ಲ. ಸಹೋದರ, ನೀನು ಸದಾ ನಮ್ಮ ನೆನಪಿನಲ್ಲಿ ಇರುತ್ತೀಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ರೂಪೇಶ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ರೂಪೇಶ್ ಅವರಿಗೆ ಅನುಜ್ ಪರಿಚಯವಾಗಿ 17 ವರ್ಷಗಳಾಗಿದ್ದವು. 2008ರಲ್ಲಿ ಪ್ರಸಾರವಾದ ಬಂಧನ್ ಸಾಥ್ ಜನ್ಮೋ ಕಾ ಧಾರಾವಾಹಿಯ ಮೂಲಕ ಇವರಿಬ್ಬರ ಒಡನಾಟ ಆರಂಭವಾಗಿತ್ತು. ಬಳಿಕ ಬೀಂಡ್ ಬನೂಂಗಾ ಘೋಡಿ ಚಢೂಂಗಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ರೂಪೇಶ್, ಅನುಜ್ ಅವರನ್ನು ಕೇವಲ 10 ದಿನಗಳ ಹಿಂದಷ್ಟೇ ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ.

ಕೇವಲ 10 ದಿನಗಳ ಹಿಂದಷ್ಟೇ ಆತನನ್ನು ಭೇಟಿಯಾಗಿದ್ದರಿಂದ ಈ ಸುದ್ದಿಯನ್ನು ನಂಬಲು ಸಾಧ್ಯವಾಗಲಿಲ್ಲ. ರಾತ್ರಿ ಮಲಗಲು ಹೋದವನು ಬೆಳಗಾಗುವಷ್ಟರಲ್ಲಿ ಮತ್ತೆ ಏಳಲೇ ಇಲ್ಲ ಎಂಬ ವಿಚಾರ ಕೇಳಿ ಆಘಾತವಾಯಿತು. ಏನಾಗಿರಬಹುದು ಎಂಬುದೇ ಅರ್ಥವಾಗಲಿಲ್ಲ. ಆತನ ಸಹೋದರನೊಂದಿಗೆ ಮಾತನಾಡಿದೆ. ಆದರೆ, ಅವರು ಹೆಚ್ಚು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.

ಹೀಗಾಗಿ ಶನಿವಾರ ಅನುಜ್ ಅವರ ತಾಯಿ ಮತ್ತು ಸಹೋದರ ಸೇರಿದಂತೆ ಕುಟುಂಬದವರನ್ನು ಭೇಟಿಯಾಗಲು ಹೋದೆ. ಆಗ ಅನುಜ್ ಅವರಿಗೆ ಫಿಟ್ಸ್ ಉಂಟಾಗಿ ಅದರ ಪರಿಣಾಮವಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದರು ಎಂದು ರೂಪೇಶ್ ಹೇಳಿದ್ದಾರೆ.

ಅನುಜ್ ಪ್ರತಿದಿನ ಮುಂಜಾನೆ ಬೇಗ ಏಳುವ ಅಭ್ಯಾಸ ಹೊಂದಿದ್ದರು. ಬೆಳಗ್ಗೆ 4.30ಕ್ಕೆ ಎದ್ದು ವ್ಯಾಯಾಮ, ಜಾಗಿಂಗ್ ಸೇರಿದಂತೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಆರಂಭಿಸುತ್ತಿದ್ದರು. ಆದರೆ, ಅಂದು ಬೆಳಗ್ಗೆ ಅವರು ಎದ್ದಿರಲಿಲ್ಲ. ಎಂದಿನಂತೆ 4.30ಕ್ಕೆ ಅಲಾರಾಂ ಮೊಳಗಿದರೂ ಅನುಜ್ ಕೊಠಡಿಯಿಂದ ಹೊರಬಾರದಿದ್ದಾಗ, ಅವರನ್ನು ಎಬ್ಬಿಸಲು ತಾಯಿ ಕೊಠಡಿಗೆ ತೆರಳಿದ್ದರು. ಈ ವೇಳೆ ಅವರು ಮೃತಪಟ್ಟಿರುವುದು ತಿಳಿದುಬಂದಿದೆ ಎಂದು ರೂಪೇಶ್ ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Ayodhya ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣ: ವಿಚಾರಣೆ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್..!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರ ಮೃತದೇಹ ಕರ್ನಾಟಕಕ್ಕೆ ಆಗಮನ, ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ

ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಮೊದಲ ದಿನವೇ 1,539 ವಾಹನಗಳಿಗೆ ನಿರ್ಬಂಧ, 68.4 ಲಕ್ಷ ರೂ. ದಂಡ ವಸೂಲಿ..!

ಅಮೆರಿಕದಲ್ಲಿ ಭೀಕರ ವಿಮಾನ ದುರಂತ: ಬೆಂಕಿ ಉಂಡೆಯಂತೆ ಜನನಿಬಿಡ ರಸ್ತೆಗೆ ಅಪ್ಪಳಿಸಿದ ಖಾಸಗಿ ಜೆಟ್; 9 ಮಂದಿ ದುರ್ಮರಣ..!

ನನ್ನ ಮೇಲೆ ಇಡಿ, ಐಟಿ ಛೂ ಬಿಡಲು ಕೇಂದ್ರ ಸಚಿವರ ಒತ್ತಡ: ಪ್ರಿಯಾಂಕ್‌ ಖರ್ಗೆ ಆರೋಪ!