ನಟ ದರ್ಶನ್ 
ಸಿನಿಮಾ ಸುದ್ದಿ

ಎಲ್ಲೆಂದರಲ್ಲಿ ‘ಡಿ-ಬಾಸ್’ ಘೋಷಣೆ ಕೂಗಬೇಡಿ, ಮುಜುಗರ ತರದಿರಿ: ಅಭಿಮಾನಿಗಳಿಗೆ ಡಿ ಕಂಪನಿ ಮನವಿ..!

ಇತರ ನಟರು ಹಾಗೂ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ ‘ಡಿ-ಬಾಸ್’ ಎಂದು ಘೋಷಣೆ ಕೂಗಿ ಮುಜುಗರ ಉಂಟುಮಾಡಬಾರದು ಎಂದು ‘ಡಿ ಕಂಪನಿ’ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದೆ.

ಬೆಂಗಳೂರು: ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ಮದುವೆ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ‘ಡಿ-ಬಾಸ್’ ಹೆಸರಿನಲ್ಲಿ ಕೆಲ ಅಭಿಮಾನಿಗಳು ಮಾಡುತ್ತಿರುವ ಅತಿರೇಕದ ವರ್ತನೆಗೆ ಕಡಿವಾಣ ಹಾಕಲು ನಟ ದರ್ಶನ್ ಅವರ ಅಧಿಕೃತ ಬಳಗ ಮುಂದಾಗಿದೆ.

ಇತರ ನಟರು ಹಾಗೂ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ ‘ಡಿ-ಬಾಸ್’ ಎಂದು ಘೋಷಣೆ ಕೂಗಿ ಮುಜುಗರ ಉಂಟುಮಾಡಬಾರದು ಎಂದು ‘ಡಿ ಕಂಪನಿ’ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದೆ.

ಕಳೆದ ಭಾನುವಾರ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟ ಧ್ರುವ ಸರ್ಜಾ ಮತ್ತು ಶಾಸಕ ರವಿ ಗಣಿಗ ವೇದಿಕೆಯಲ್ಲಿದ್ದಾಗ ಕೆಲವರು ಪದೇಪದೆ ‘ಡಿ-ಬಾಸ್’ ಎಂದು ಕೂಗಿ ಗದ್ದಲ ಸೃಷ್ಟಿಸಿದ್ದರು.

ಇದರಿಂದ ಅಸಮಾಧಾನಗೊಂಡ ಶಾಸಕ ರವಿ ಗಣಿಗ, ಅಭಿಮಾನಿಗಳ ಅತಿರೇಕದ ವರ್ತನೆಯೇ ದರ್ಶನ್ ಜೈಲು ಸೇರುವ ಪರಿಸ್ಥಿತಿಗೆ ಕಾರಣವಾಯಿತು ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ಚರ್ಚೆಗೆ ಕಾರಣವಾಗಿತ್ತು.

ಇದಕ್ಕೂ ಮೊದಲು ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲೂ ಕೆಲವರು ಇದೇ ರೀತಿ ‘ಡಿ-ಬಾಸ್’ ಘೋಷಣೆ ಕೂಗಿದ್ದರು. ಆಗ ಡಿಕೆಶಿ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಮತ್ತೊಂದು ಸಂದರ್ಭದಲ್ಲಿ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ಕಂಡಾಗಲೂ ಅಭಿಮಾನಿಗಳು ಘೋಷಣೆ ಕೂಗಿದ್ದರು. ಇದರಿಂದ ಬೇಸರಗೊಂಡಿದ್ದ ವಿಜಯಲಕ್ಷ್ಮಿ, ದಯವಿಟ್ಟು ಹೀಗೆಲ್ಲ ಘೋಷಣೆ ಕೂಗಬೇಡಿ. ಇಂತಹ ವರ್ತನೆಗಳಿಂದಲೇ ಅವರಿಗೆ ತೊಂದರೆಯಾಗುತ್ತಿದೆ ಎಂದು ಅಭಿಮಾನಿಗಳಿಗೆ ತಿಳಿಹೇಳಿದ್ದರು.

ಮಂಡ್ಯದಲ್ಲಿ ನಡೆದ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ದರ್ಶನ್ ಅವರ ಅಧಿಕೃತ ಡಿಜಿಟಲ್ ವೇದಿಕೆ ‘ಡಿ ಕಂಪನಿ’, ವಿಜಯಲಕ್ಷ್ಮಿ ಅವರು ಈ ಹಿಂದೆ ನೀಡಿದ್ದ ಸಲಹೆಯನ್ನೇ ಮತ್ತೆ ನೆನಪಿಸಿದೆ.

ಇತರ ನಟರ ವೇದಿಕೆಗಳು, ಸಿನಿಮಾ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಭೆಗಳಲ್ಲಿ ದರ್ಶನ್ ಹೆಸರನ್ನು ಅನಗತ್ಯವಾಗಿ ಕೂಗಬಾರದು ಎಂದು ಅಭಿಮಾನಿಗಳಿಗೆ ಮನವಿ ಮಾಡಿದೆ.

ತಮ್ಮ ನೆಚ್ಚಿನ ನಟನ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ಸಂಯಮದಿಂದ ವ್ಯಕ್ತಪಡಿಸಬೇಕು. ದರ್ಶನ್ ಅವರ ಪ್ರಸ್ತುತ ಕಾನೂನು ಪರಿಸ್ಥಿತಿ ಹಾಗೂ ಸಂಕಷ್ಟದ ಸಂದರ್ಭವನ್ನು ಅಭಿಮಾನಿಗಳು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ ಆಕ್ರೋಶಕ್ಕೆ ಮಣಿದ ವಿಜಯೇಂದ್ರ: ಪೋಸ್ಟರ್ ಸಮರ ಬೆನ್ನಲ್ಲೇ 'ಈ ನನ್ನ ಮಕ್ಕಳು' ಹೇಳಿಕೆಗೆ ಕ್ಷಮೆಯಾಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಮಹಿಳೆಗೆ ಚಾಕು ತೋರಿಸಿ, ಒತ್ತೆಯಾಳಾಗಿಸಿಕೊಂಡು ದರೋಡೆಗೆ ಯತ್ನ; ಮಂಗಳಸೂತ್ರ ಕಿತ್ತುಕೊಂಡ ದುಷ್ಕರ್ಮಿಗೆ 'ಧರ್ಮದೇಟು'! Video

RTGS ಚೋರ್ ಬಿವೈ ವಿಜಯೇಂದ್ರ: ಈ ನನ್ ಮಕ್ಕಳು ಎಂದಿದ್ದಕ್ಕೆ BYV ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟರ್ ಸಮರ

ಆಂಧ್ರ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ‘ಮುರಸು’; ಧರೆಗುರುಳಿದ ಸಾವಿರಾರು ಮರಗಳು, ಮೀನುಗಾರಿಕೆ ದೋಣಿಗಳಿಗೆ ಹಾನಿ – ಭಾರಿ ಅನಾಹುತ; Video

'ಇನ್ಯಾವತ್ತೂ ಪ್ರತಿಭಟನೆಯಲ್ಲಿ ಭಾಗಿಯಾಗಲ್ಲ'; ಕೊನೆಗೂ ಕ್ಷಮೆ ಯಾಚಿಸಿದ ನಟ Imran Khan, ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ!