ದಕ್ಷಿಣ ಭಾರತದ ಖ್ಯಾತ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕುಟುಂಬದಲ್ಲಿ ಇತ್ತೀಚೆಗೆ ಮದುವೆ ನಡೆದಿದೆ. ಕಿರಿಯ ಪುತ್ರಿ ಅಂಜನಾ ಅರ್ಜುನ್ ತಮ್ಮ ಬಹುಕಾಲದ ಗೆಳೆಯ, ವಿದೇಶಿ ಉದ್ಯಮಿ ಇಸಾಯ್ ಅವರೊಂದಿಗೆ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಭಾರತೀಯ ಸಂಪ್ರದಾಯದಂತೆ ನಡೆದ ಈ ವಿವಾಹದ ಸುಂದರ ಕ್ಷಣಗಳನ್ನು ಅಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನವಜೋಡಿಯ ಫೋಟೋಗಳು ಅಭಿಮಾನಿಗಳ ಗಮನ ಸೆಳೆದವು.
ಅಕ್ಟೋಬರ್ 19ರಂದು ನಡೆದ ಈ ಮದುವೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು, ಹಿರಿಯರು ಹಾಗೂ ಆಪ್ತರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದ್ದಾರೆ. ವಿದೇಶಿ ವರನೊಂದಿಗೆ ಅಂಜನಾ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿರುವುದು ಈ ಮದುವೆಯ ವಿಶೇಷತೆಗಳಲ್ಲಿ ಒಂದಾಗಿದೆ. ಈ ಮದುವೆಯಲ್ಲಿ ಧ್ರುವ ಸರ್ಜಾ ದಂಪತಿ ಭಾಗಿಯಾಗಿದ್ದರು.
ತುಂಬಾ ಕಡಿಮೆ ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದ ಅರ್ಜುನ್ ಸರ್ಜಾ ಅವರ 2ನೇ ಮಗಳ ಮದುವೆಗೆ ಹೆಚ್ಚಿನ ಜನ ಬಂದಿರಲಿಲ್ಲ. ಕೆಲವೇ ಕೆಲವು ಜನರು ಬಂದಿದ್ದರು. ಆಪ್ತರು, ಸ್ನೇಹಿತರಷ್ಟೇ ಇದ್ದರು. ವಿಶೇಷ ಅಂದರೆ ಹಿರಿಯ ಮಗಳು ಐಶ್ವರ್ಯಾ ಅರ್ಜುನ್ ಅವರ ಗಂಡನೂ ಬಂದಿರಲಿಲ್ಲ.
ಇನ್ನೂ ವಿಶೇಷ ಎಂದರೆ ಈ ಮದುವೆಗೆ ಚಿರು ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರು ಬಂದಿರಲಿಲ್ಲ. ಮೇಘನಾ ರಾಜ್ ಅವರಿಗೆ ಆಹ್ವಾನ ಇರಲಿಲ್ವಾ? ಧ್ರುವ ಸರ್ಜಾ ದಂಪತಿಯನ್ನು ಮದುವೆಗೆ ಆಹ್ವಾನಿಸಿದ್ರೂ ಚಿರು ಸರ್ಜಾ ಅವರ ಪತ್ನಿ ಅವರಿಗೆ ಅರ್ಜುನ್ ಸರ್ಜಾ ಆಹ್ವಾನ ಕೊಡಲಿಲ್ವಾ? ಈ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗಷ್ಟೇ ‘ಸಂಗೀತ ಬಾರ್ & ರೆಸ್ಟೋರೆಂಟ್’ ಚಿತ್ರದ ಕಾರ್ಯಕ್ರಮ ಜರುಗಿತು. ಚಿತ್ರದಲ್ಲಿ ಅಭಿನಯಿಸಿರುವ ಮೇಘನಾ ರಾಜ್ ಸರ್ಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ, ಅರ್ಜುನ್ ಸರ್ಜಾ ಮಗಳ ಮದುವೆಗೆ ಯಾಕೆ ಹೋಗಿರಲಿಲ್ಲ ಎಂಬ ಪ್ರಶ್ನೆ ಮೇಘನಾ ರಾಜ್‌ಗೆ ಮಾಧ್ಯಮಗಳಿಂದ ತೂರಿಬಂತು.
ಆಗ ಮೇಘನಾ ರಾಜ್ ಹೇಳಿದಿಷ್ಟು ,ನನ್ನನ್ನ ಕರೆದಿರಲಿಲ್ಲ. ಹೀಗಾಗಿ ನಾನು ಹೋಗಿರಲಿಲ್ಲ. ಧ್ರುವ ಸರ್ಜಾ - ಪ್ರೇರಣಾ ಹೋಗಿದ್ದರು. ಯಾಕೆ ಕರೆದಿಲ್ಲ ಎಂಬ ಪ್ರಶ್ನೆಯನ್ನ ನನಗೆ ಕೇಳಬಾರದು. ಅವರನ್ನ ಕೇಳಬೇಕು ಎಂದರು.