ತಮಿಳು ನಟ ವಿಜಯ್ ಸೇತುಪತಿ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದ್ದಾರೆ. 2026ರ ನವೆಂಬರ್ 23ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ 54ನೇ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭದಲ್ಲಿ ಅವರು ಪ್ರಶಸ್ತಿ ಪ್ರದಾನ ಮಾಡುವ ನಿರೂಪಕರಲ್ಲಿ ಒಬ್ಬರಾಗಿ ಭಾಗವಹಿಸಲಿದ್ದಾರೆ.
ಜಾಗತಿಕ ವೇದಿಕೆಯಲ್ಲಿ ಭಾರತೀಯ ಪ್ರತಿಭೆಯೊಂದು ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಪ್ರತಿಷ್ಠಿತ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವ ಮೊದಲ ಭಾರತೀಯ ನಟ ವಿಜಯ್ ಸೇತುಪತಿ ಆಗಿದ್ದಾರೆ.
ಈ ಮೂಲಕ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿರುವ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಸೇತುಪತಿ ಪಾತ್ರರಾಗಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಭಾರತೀಯ ಕಲಾವಿದರ ಪ್ರತಿಭೆಗೆ ಮತ್ತೊಂದು ಗೌರವ ದೊರೆತಂತಾಗಿದೆ.
ಈ ಹಿಂದೆ 2016ರಲ್ಲಿ ನಡೆದ 68ನೇ ಪ್ರೈಮ್‌ಟೈಮ್ ಆ್ಯಮಿ ಪ್ರಶಸ್ತಿ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ನಟ ಟಾಮ್ ಹಿಡಲ್‌ಸ್ಟನ್ ಜೊತೆಗೂಡಿ ಪ್ರಶಸ್ತಿ ಪ್ರದಾನ ಮಾಡಿದ್ದರು. ಲಾಸ್ ಏಂಜಲೀಸ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಇನ್ನು ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ವೇದಿಕೆಯಲ್ಲಿ ಭಾರತೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವಲ್ಲಿ ನಿರ್ಮಾಪಕಿ ಹಾಗೂ ಅಂತಾರಾಷ್ಟ್ರೀಯ ಟೆಲಿವಿಷನ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಅಕಾಡೆಮಿಯ ಮಂಡಳಿ ಸದಸ್ಯೆ ಕವಿತಾ ಗುಪ್ತಾ ಅವರ ಪಾತ್ರವೂ ಗಮನಾರ್ಹವಾಗಿದೆ.
2024ರ ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಸಮಾರಂಭವನ್ನು ನಿರೂಪಿಸುವಂತೆ ವಿರ್ ದಾಸ್ ಅವರನ್ನು ಕರೆತಂದವರು ಕವಿತಾ ಗುಪ್ತಾ. 2023ರಲ್ಲಿ ತಮ್ಮ ಕಾಮಿಡಿ ಸ್ಪೆಷಲ್ 'ವೀರ್ ದಾಸ್: ಲ್ಯಾಂಡಿಂಗ್'ಗಾಗಿ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಪ್ರಶಸ್ತಿ ಗೆದ್ದಿದ್ದ ವೀರ್ ದಾಸ್ ಅವರಿಗೆ 2024ರ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭವನ್ನು ನಿರೂಪಿಸುವ ಅವಕಾಶವನ್ನು ಕವಿತಾ ಗುಪ್ತಾ ದೊರಕಿಸಿಕೊಟ್ಟಿದ್ದರು.