ದುನಿಯಾ ವಿಜಯ್ ಮತ್ತು ಬಯಿಲ್ವಾನ್ ರಂಗನಾಥ್  
ಸಿನಿಮಾ ಸುದ್ದಿ

ಹಂದಿ ಹೋಲುವ ವ್ಯಕ್ತಿ: ನಮ್ಮ ಯೋಗಿ ಬಾಬುಗಿಂತಲೂ ಕಡೆ; ತಮಿಳು ನಟನಿಂದ ದುನಿಯಾ ವಿಜಯ್ ಅವಹೇಳನ!

ಬಯಿಲ್ವಾನ್ ರಂಗನಾಥ್ ಕೆಲ ತಮಿಳು ಸಿನಿಮಾನಲ್ಲಿ ಹಾಸ್ಯ ನಟನಾಗಿ ನಟಿಸಿದ್ದು, ಇತ್ತೀಚೆಗೆ ಯೂಟ್ಯೂಬ್​​ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಾರೆ. ಹಂದಿಯನ್ನು ಹೋಲುವ ವ್ಯಕ್ತಿ ಎಂದಿರುವ ರಂಗನಾಥ್, ಮತ್ತೆ ಮುಂದುವರೆದು, ನಮ್ಮ ಯೋಗಿ ಬಾಬುಗಿಂತಲೂ ಕಡೆಯಾಗಿದ್ದಾನೆ ಆತ ಎಂದಿದ್ದಾನೆ.

ನಯನತಾರಾ ಅಭಿನಯದ 'ಮೂಕುತಿ ಅಮ್ಮನ್ 2' ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿರುವ ಕನ್ನಡದ ನಟ ದುನಿಯಾ ವಿಜಯ್ ವಿರುದ್ಧ ತಮಿಳು ನಟ ಬೈಲ್ವಾನ್ ರಂಗನಾಥನ್ ನಾಲಗೆ ಹರಿಬಿಟ್ಟಿದ್ದಾರೆ.

ವಿಜಯ್ ಅವರ ದೇಹದ ಆಕಾರ ಹಾಗೂ ಲುಕ್ ಬಗ್ಗೆ ಅತ್ಯಂತ ಕೀಳಾಗಿ ಬಾಡಿ ಶೇಮಿಂಗ್ ಮಾಡುವ ರೀತಿ ಹೇಳಿಕೆ ನೀಡಿದ್ದಾರೆ. ಹಾಸ್ಯ ನಟ ಬಯಿಲ್ವಾನ್ ರಂಗನಾಥ್ ಎಂಬಾತ ಯೂಟ್ಯೂಬ್ ಪಾಡ್​​ಕಾಸ್ಟ್ ಒಂದರಲ್ಲಿ ‘ಮೂಕುತ್ತಿ ಅಮ್ಮನ್ 2’ ಸಿನಿಮಾ ಬಗ್ಗೆ ಮಾತನಾಡುತ್ತಾ, ವಿಜಯ್ ಅವರನ್ನು ಹಂದಿಗೆ ಹೋಲಿಕೆ ಮಾಡಿದ್ದಾರೆ.

ಬಯಿಲ್ವಾನ್ ರಂಗನಾಥ್ ಕೆಲ ತಮಿಳು ಸಿನಿಮಾನಲ್ಲಿ ಹಾಸ್ಯ ನಟನಾಗಿ ನಟಿಸಿದ್ದು, ಇತ್ತೀಚೆಗೆ ಯೂಟ್ಯೂಬ್​​ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಾರೆ. ಹಂದಿಯನ್ನು ಹೋಲುವ ವ್ಯಕ್ತಿ ಎಂದಿರುವ ರಂಗನಾಥ್, ಮತ್ತೆ ಮುಂದುವರೆದು, ನಮ್ಮ ಯೋಗಿಬಾಬು ಗಿಂತಲೂ ಕಡೆಯಾಗಿದ್ದಾನೆ ಆತ ಎಂದಿದ್ದಾನೆ.

ಈ ವೇಳೆ ಎದುರಿಗೆ ಕೂತಿದ್ದ ಸಂದರ್ಶಕ, ಬಾಡಿ ಶೇಮಿಂಗ್ ಮಾಡಬೇಡಿ ಎಂದರೂ ಕೇಳದೆ ತಮ್ಮ ವರಾತ ಮುಂದುವರೆಸಿ ಕೀಳಾಗಿ ಮಾತನಾಡಿದ್ದಾರೆ. ದುನಿಯಾ ವಿಜಯ್ ಬಗ್ಗೆ ಬಯಿಲ್ವಾನ್ ರಂಗನಾಥ್ ಕೀಳು ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಬಯಿಲ್ವಾನ್ ಆಡಿರುವ ಮಾತುಗಳನ್ನು ವಿರೋಧಿಸಿದ್ದು, ಕೆಲವರು ಕ್ಷಮೆಗೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3ನೇ ಬಾರಿ BJP ಅಧಿಕಾರಕ್ಕೇರದಂತೆ ತಡೆಯುವುದೇ ಟಾರ್ಗೆಟ್: ಚಂದ್ರಶೇಖರ್ ಆಜಾದ್ CM ಕ್ಯಾಂಡಿಡೇಟ್; ಅಸಾದುದ್ದೀನ್ ಓವೈಸಿ ಘೋಷಣೆ

CRPF ಯೋಧರ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಹೊಸ ಉಗ್ರ ಸಂಘಟನೆ; RSS, 'ಹಿಂದುತ್ವ ಆಡಳಿತ'ಕ್ಕೆ 'ವಿನಾಶಕಾರಿ' ಬೆದರಿಕೆ!

ಇವರೆಲ್ಲ ಮೋದಿ ಹೈ ತೋ ಮುಮ್ಕಿನ್ ಹೈ ಅಂತ ಘೋಷಣೆ ಕೂಗಿಯೇ ಸಾಯೋದು: BJP ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

'₹7 ಕೋಟಿ ಕೊಡಿ, ಇಲ್ಲದಿದ್ದರೆ...': ಬಿಷ್ಣೋಯ್ ಗ್ಯಾಂಗ್‌ನಿಂದ ಅರವಿಂದ್ ಕೇಜ್ರಿವಾಲ್, ಅವರ ಮಗಳಿಗೆ ಕೊಲೆ ಬೆದರಿಕೆ!

ಕರ್ನಾಟಕದ ಶೇ.56 ರಷ್ಟು ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಿ: ಪ್ರಧಾನಿ ಮೋದಿಗೆ ಉಗ್ರಪ್ಪ ಒತ್ತಾಯ!